"ದಿನಕ್ಕೆ ಎಷ್ಟೋಸಲ ನೋಡುವೆ ಅವಳನ್ನ !
ಎದುರಲ್ಲಿ ಅಲ್ಲ.. ಅವಳ ಪ್ರೊಫೈಲ್ ನಲ್ಲಿ !
ಬೇಕಾದಾಗಲೆಲ್ಲ ಮಾತನಾಡುವೆ ಅವಳೊಡನೆ !
ಜೊತೆಯಾಗಿ ಅಲ್ಲ.. ನಾ_ಕಾಣೋ ಕನಸಿನಲ್ಲಿ !
ಸಂದೇಶಗಳನ್ನು ಕಳಿಸುವೆ ಅವಳಿಗೆ !
ನೇರವಾಗಿ ಅಲ್ಲ.. ಬೀಸೋ ತಂಗಾಳಿಯಲ್ಲಿ !
ಆದರೆ ಯಾವುದಕ್ಕು..
ಅವಳ ಪ್ರತಿಕ್ರಿಯೆಯು ಇಲ್ಲ !
ಪ್ರತ್ಯುತ್ತರವು ಇಲ್ಲ !
ಎಲ್ಲದಕ್ಕು ಬರಿ ಮೌನ.. ಅವಳು ಹೀಗೇನ ?!"
ಎಮ್.ಎಸ್.ಭೋವಿ...✍️
ಸಿಕ್ಕರೆ ನಿಮ್ಮ ಮೊದಲ ಅಪ್ಪುಗೆಯ ಅಕ್ಕರೆ,
ಆಗ ನಾ ಪಡೆಯುವೆನು ನಿಮ್ಮ ತೋಳಿನ ಆಸರೆ.
ಕೇಳಿ ಪಡೆಯ ಬೇಕೆ ನಿಮ್ಮ ಒಲವ,
ಮನಸಿಗೆ ತಿಳಿಯದೆ ನನ್ನೆದೆಯ ವಾಸ್ತವ.
ನಿಮ್ಮ ಹರುಷದಲ್ಲಿ ನಾನಿರಲು ಬಯಸಿದರೆ,
ಮನದ ನೋವಾ ಮರೆಸಬಹುದು ನೀವ್ ನನ್ನ ಮಾತಿಗೆ ಸ್ಪಂದಿಸಿದರೆ.
ನಿಮ್ಮ ಪರಿಸ್ಥಿತಿಯು ಸೃಷ್ಟಿಸಿದೆ ನನಗೆ ಪ್ರಶ್ನೆಗಳ ಕಂದರ,
ಕವಿದ ಮೋಡಕ್ಕೆ ಕಂಬನಿಗರೆದು ಬೇಡುತ್ತಿರುವ ನನಗೆ
ನಿಮ್ಮಿಂದ ಸಿಕ್ಕಿಲ್ಲ ಉತ್ತರ.
ಅನಾಥ ಭಾವಕೆ ಸಿಲುಕಿಸೋ ನಾಳೆಗಳ ನಾ ಕಾಯಬೇಕೆ,
ನಿಮ್ಮ ಮನಸಾಗಿರೋ ನನಗೆ ನಿಮ್ಮ ಜೊತೆಗಿರೋ ಯೋಗ ಕೂಡದು ಏಕೆ?
ನಿಮಗೆ ನನ್ನ ನೆನಪಾದರು ಮರೆತು ಮುನ್ನಡೆವ ಪ್ರಯತ್ನವೇಕೆ?
ನಿರೀಕ್ಷಿಸದೆ ನಿಮ್ಮ ಕಾಳಜಿ ಸಿಗಬೇಕೆಂಬ ನನ್ನ ಹೆಬ್ಬಯಕೆಗೆ.
ಮುಂದೆಂದು ಸಂಭವಿಸಬಾರದು ನಮ್ಮಿಬ್ಬರ ನಡುವೆ ಜಗಳ,
ಇಂದು, ಸ್ನೇಹ ಭರವಸೆಯ ಬೆಳಕಾಗಿ ಸದಾ ಬೆಳಗುತ್ತಿರಲಿ ನಮ್ಮ ಮನದಂಗಳ.
ಇದೇ ಹೆಸರಿನಿಂದ ನಮ್ಮ ಜೀವನ
ಮುಂದುವರೆಯಲಿದೆ,
ಬೇಡವಾಗಿ ಮರೆತು ಹೋದವರ ಮರೆಯಾಗಿ,
ಏನೇ ಆಗಲಿ ಜೊತೆ ಇರುವೆ ಎಂದವರ ಜೊತೆಯಾಗಿ,
ತೀರಿ ಹೋಗುತ್ತಿರುವ ಈ ವರ್ಷದ ಜೊತೆ
ಕಳೆದ ದಿನಗಳು ನೆನಪಾಗಿ,
ಈ ವರ್ಷ ನಿಂತಂತಿದೆ ನಮ್ಮ ಮುಂದೆ...
ಜೀವನವೆಂಬ ಪುಸ್ತಕದ ಪಾಠದಂತೆ;
ಭಾವನೆಗಳ ಅಕ್ಷರಗಳನ್ನು ಮೂಡಿಸಿಕೊಳ್ಳುವ
ಕುತೂಹಲದಿಂದ,
ವಿಧಿಲಿಖಿತ ಬಲ್ಲವರಿಲ್ಲವೇ.....!
ಸಾಗಬೇಕು ಸನ್ನಿವೇಶ ಎಂತಹದೆ ಎದುರಾದರು....
ಮುಂದೆ ಬರುವ ಯುಗಾದಿಯ ಇನ್ನು
ಹರುಷದಿಂದ ಆಚರಿಸೋಣ....°-°
ಈ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ..
ಮುಕ್ತಾಯವೆಂದರೆ ಮುಕ್ತಾಯವಲ್ಲ,
ಹೊಸತನದ ಹೊಸ ಆರಂಭ, ಹಳೆಯ
ಕಹಿ ಕ್ಷಣಗಳೆಲ್ಲ ಅಳಿಯಲಿ, ಜಾರಿದ ಸಿಹಿ
ಕ್ಷಣಗಳೆಲ್ಲ ಮರಳಿ ಕೈಸೆರಲಿ, ಎಲ್ಲರ ಬಾಳ
ಅಂಧಕಾರ ಕಳೆಯಲಿ, ನವ ವಸಂತವು
ಸರ್ವರ ಬಾಳು ಬೆಳಗಲಿ......
ಹೊಸ ವರ್ಷವು ಎಲ್ಲರ ಬಾಳಲ್ಲಿ ಬೆಳಕಾಗಲಿ
ಹೊಸ ವರ್ಷದ ಶುಭಾಶಯಗಳು 2023
ಹಿರೇ ಕೊಡುಗೆಯಲ್ಲಿ ನವೋದಯದ ಧ್ರುವತಾರೆಯ ಜನನ,
ತುಂಗೆಯ ಮಡಿಲಲ್ಲಿ ಕಿಂದರ ಜೋಗಿಗಳ ಜೊತೆ ಪ್ರಕೃತಿಯ ಆಲಿಂಗನ.
ಕುಪ್ಪಳ್ಳಿಯ ಪುಟ್ಟಪ್ಪ ತೀರ್ಥಹಳ್ಳಿಯಲ್ಲಿ ಮುಗಿಸಿದರು ಮಾಧ್ಯಮಿಕ ಶಿಕ್ಷಣ,
ಅವರ ಉನ್ನತ ವ್ಯಾಸಂಗಕ್ಕೆ ನೆಲೆಯಾಯಿತು ಮೈಸೂರು ಪಟ್ಟಣ.
ಆರಂಭಿಸಿದರು ಕುವೆಂಪು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ,
ಕೊಳಲ ನಾದದಿ ನವಿಲಂತೆ ನರ್ತಿಸುತ್ತಿವೆ ಪುಟ್ಟಪ್ಪನವರ ಪ್ರೇಮ ಕಾವ್ಯಗಳ ಸೃಜನೆ.
ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯದ ಬದುಕಿಗೆ ಬುನಾದಿಯಾಗಿರುವ ಕವಿಯ ಪಂಚಮಂತ್ರ,
ನೆನಪಿಸಲಿ ನಮಗೆ ನಾಡ ನುಡಿಗೆ ಶ್ರಮಿಸುವ ಕರ್ತವ್ಯದ ಪಾತ್ರ.
ಕರುನಾಡ ಕುವರನ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಲಭಿಸಿತು ಜ್ಞಾನಪೀಠ ಪ್ರಶಸ್ತಿ,
ರಾಷ್ಟ್ರಕವಿಯ ಮುಡಿಯೇರಿವೆ ಪಂಪ, ಡಾಕ್ಟರೆಟ್, ಕರ್ನಾಟಕ ರತ್ನ, ಪದ್ಮ ವಿಭೂಷಣ ದಂತಹ ಪುರಸ್ಕಾರಗಳು ತಿಳಿಸುತ್ತಿವೆ ಅವರ ಸಾಹಿತ್ಯ ಲೋಕದ ಸಾಧನೆಯ ಉನ್ನತಿ.
ನೆನಪಿನ ದೋಣಿಯಲ್ಲಿ ಜಗವೇ ಪಯಣಿಸುತ್ತಿದೆ ವಿಶ್ವಮಾನವನ ಸಾಲುಗಳ ನೆನೆಯುತ,
ಉದಯ ರವಿಗೆ ಜನುಮದಿನಕ್ಕೆ ಶುಭ ಕೋರುವೆ ನನ್ನ ಪುಟ್ಟ ಕವನವ ಅರ್ಪಿಸುತಾ.