Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಬ್ಬದ ಹಾರ್ದಿಕ ಶುಭಾಶಯಗಳು ಸಂಕ್ರಾಂತಿಯ ಹಬ್ಬದ ಹಾರ್ದಿಕ ಶ

ನಿಮ್ಮೆಲ್ಲರಿಗೆ ಹಾರ್ದಿಕ ಶುಭಾಶಯಗಳು ಹಾರ್ದಿಕ ಶುಭಾಶಯಗಳು ಸಂಕ್ರಾತಿ ಸಂಕ್ರಾಂತಿ ಹಬ್ಬದ ಎಲ್ಲರಿಗೂ ಶುಭಾಶಯಗಳನ್ನು ಹೇಳಿಕೊಳ್ಳುತ್ತೇನೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ಎರಡು ಮಾತನ್ನು ಮುಗಿಸುತ್ತೇನೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸಂಕ್ರಾಂತಿ ಯಾವಾಗೆ ಹಬ್ಬಕ್ಕನ್ನು ಬರುತ್ತದೆ ನೀವು ಎಲ್ಲಾ ಹಬ್ಬವನ್ನು ಮಾಡಿ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ನಾನು ಎರಡು ಮಾತನ್ನು ಮುಗಿಸುತ್ತೇನೆ

- Sharanabasava Dharmapur

14 Jan 2023, 04:09 pm

ಅವಳು..

"ಅವಳ ಸುಳಿವು ಸಿಕ್ಕಷ್ಟು ಸುಲಭವಾಗಿ..
ಅವಳ ಮನಸ್ಸು ಸಿಗಲಿಲ್ಲ !
ಅವಳ ಸ್ನೇಹ ಸಿಕ್ಕಷ್ಟು ಸುಲಭವಾಗಿ..
ಅವಳ ಪ್ರೀತಿ ಸಿಗಲಿಲ್ಲ !
ಅವಳಲ್ಲಿ ವ್ಯಕ್ತಪಡಿಸೋಕು ಮುಂಚೆ ಇದ್ದ ಖುಷಿ..
ಅವಳ ಪ್ರತಿಕ್ರಿಯೆ ಕಂಡಾಗ ಉಳಿಲಿಲ್ಲ !
ಅರೆಕ್ಷಣದಲ್ಲಿ ಶುರುವಾಗಿದ್ದ ಪ್ರೀತಿ,
ಅರ್ದದಶಕ ಮುಗಿದರು.. ಸಾಗುತಿಹುದಲ್ಲ !
ಇನ್ನಷ್ಟು ಮತ್ತಷ್ಟು ಒಲವು..
ಹೆಚ್ಚಾಗುತ್ತಲೆ ಇಹುದಲ್ಲ !!"
ಎಮ್.ಎಸ್.ಭೋವಿ...✍️

- mani_s_bhovi

14 Jan 2023, 11:37 am

ಹೆತ್ತವರಿಗೆ ಹೆಗ್ಗಣ ಮುದ್ದು

ಒಂದಾನೊಂದು ಹಳ್ಳಿಯಲ್ಲಿ ದೇವಪ್ಪ ಮತ್ತು ರಾಜಮ್ಮ ಎಂಬ ದಂಪತಿಗಳು ಇದ್ದರೂ.ಅವಿರಿಗೆ ಸಂತಾನ ಭಾಗ್ಯ ಇರಲಿಲ್ಲ.ಇಬ್ಬರು ಹಗಲು ಕಷ್ಟಪಟ್ಟು ದುಡಿದು ರಾತ್ರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುತಿದ್ದರು.ಹೀಗೆ ಅವರ ಹಗಲು ರಾತ್ರಿಯ ಶ್ರಮದ ಫಲವಾಗಿ ಅವರಿಗೆ ಒಂದು ಗಂಡು ಮಗು ಜನಿಸಿತ್ತು.ಅದನ್ನು ಅವರು ತುಂಬಾ ಜೋಪಾನವಾಗಿ ಸಾಕಿದ್ದರು. ಅದಕ್ಕೆ ಕೃಷ್ಣ ಎಂದು ಹೆಸರಿಟ್ಟರು .ಮಗ ಕಲಿತು ಒಳ್ಳೆ ಮನುಷ್ಯ ಆಗಬೇಕು ಎಂದು ಆಸೇಪಟ್ಟರು.ಮಗ ಅವರ ಆಸೆಯಂತೆ ಕಲಿತು m.a ಮಾಡಿ ಒಳ್ಳೆ ಕೆಲಸ ಸೇರಿದ್ದ.
ಒಂದು ದಿನ ತಂದೆ ತಾಯಿ ಮಗನ ಮದುವೆ ಮಾಡಬೇಕೆಂದು ಯೋಚಿಸಿದರು.ಅವನನ್ನು ಊರಿಗೆ ಬರಲು ಪತ್ರ ಬರೆದರು. ಮಗ ತುಂಬಾ ಸಮಯದ ನಂತರ ಮನೆಗೆ ಬಂದ . ನೋಡಿದರೆ ಮಗ ಮೊದಲೇ ಮದುವೆ ಆಗಿದ್ದ.ಅದು ಹೆತ್ತವರನ್ನು ಕೇಳದೆ. ಇರಲಿ ಎಂದು ಮಗನನ್ನು ಸ್ವಾಗತಿಸಿದರು. ಕೃಷ್ಣ ಮಾರನೆಯ ದಿನ ಜಾಮೀನು ಮಾರಲು ಹೊರಟ .ಆದರೆ ತಂದೆ ತಾಯಿ ಇಬ್ಬರೂ ಒಪ್ಪಲಿಲ್ಲ . ಮಗ ಬೇಸರ ಮಾಡಿಕೊಂಡು ಹೊರಟ. ಸ್ವಲ್ಪ ಸಮಯದ ನಂತರ ತಂದೆ ಹಾಸಿಗೆ ಹಿಡಿದರು. ತಾಯಿ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದರು .ಆಗ ಮಗ "ಅಮ್ಮ ನೀನು ಅಪ್ಪ ಇಬ್ಬರುನು ಒಳ್ಳೆ ಆಶ್ರಮ ಸೇರಿ . ಹಣ ನಾನು ಕಳಿಸುತ್ತೇನೆ."ಎಂದ ಗತಿಇಲ್ಲದೆ ಆಶ್ರಮ ಸೇರಿದರು.ನಂತರ ತಂದೆ ಸತ್ತರು.ಅಮ್ಮ ಬರಲು ತಿಳಿಸಿದರು.ಆಗ ಮಗ ಹೇಳಿದ "ಅಮ್ಮ ಪುರೋಹಿತರನ್ನು ಕರೆಸಿ ಕಾರ್ಯ ಮಾಡಿಸು ಎಂದು " ಇದು ನಡೆದ ನಂತರ ಅಮ್ಮ ಹಾಸಿಗೆ ಹಿಡಿದರು ಮಗ ಓಡೋಡಿ ಬಂದ.ಅಮ್ಮ "ನನಗೆ ಗೊತ್ತಿತ್ತು ಕಂದ ನೀಬರುವಿ ಎಂದು ಗೊಟ್ಟಿತ್ತಪ್ಪ ಎಂದು ಅತ್ತರು.ಆದರೆ ಮಗ ಅಮ್ಮ ನಿಗೆ ಕೇಳಿದ ಒಂದೇ ಮಾತು ಅಮ್ಮ ಆಸ್ತಿ ಪತ್ರ ಎಲ್ಲಿದೆ.ಅಮ್ಮ ಹೃದಯ ಆಘಾತವಾಗಿ ಸತ್ತರು.ಮಗನನ್ನು ಎಲ್ಲ ಜನರು ಶಪಿಸಿದರು.

✍️ನಿಶಾ ಅಂಜುಮ್

- Nisha anjum

13 Jan 2023, 08:39 pm

ಅತಿ ಆಸೆ ಗತಿ ಕೇಡು

ಒಂದಾನೊಂದು ಊರಿನಲ್ಲಿ ಸೀತಾ ಎನ್ನುವ ಹುಡುಗಿ ಇದ್ದಳು ಅವಳು ತುಂಬಾ ಗಾಳಿಗೋಪುರ ಕಟ್ಟುವ ಹುಡುಗಿಯಾಗಿದ್ದಳು ಒಂದು ದಿನ ಅವಳು ಸಂತೆಗೆ ಹೊರಟಿದ್ದಳು.
ಸೀತಾ: ಅಣ್ಣ ಒಂದು ಚೀಲ ಸೇಬು ಕೊಡಿ
ವ್ಯಾಪಾರಿ : ತೆಗೆದುಕೊಳ್ಳಿ
ಸೀತಾ : ಎಷ್ಟು ಹಣ
ವ್ಯಾಪಾರಿ :150₹
ಸೀತ : ಅಯ್ಯೋ 150 ರೂಪಾಯಿ .
ಮೊನ್ನೆ ಐವತ್ತು ರೂಪಾಯಿ ಇತ್ತಲ್ಲ.
ವ್ಯಾಪಾರಿ :ಹೌದಮ್ಮಾ ಈಗ ಸೇಬಿಗೆ ಜಾಸ್ತಿ ಬೆಲೆ
ಸೀತಾ : ಹಾಗಾದರೆ ತಿಳಿದುಕೊಳ್ಳಿ.
(ವಾಪಸ್ ಬರುವಾಗ ಮನಸ್ಸಿನಲ್ಲಿ :)
ಈಗ ಒಳ್ಳೆಯ ಕಾಲ ಎಲ್ಲಾ ಕಡೆ ಇರುವ ಸೇಬನ್ನು ನಾನು ಖರೀದಿಸಿ ಸ್ವಲ್ಪ ಸಮಯದ ನಂತರ ಅವುಗಳನ್ನು ಜಾಸ್ತಿ ಬೆಲೆಗೆ ಮಾರಿದರೆ ನಾನು ಬಹಳ ಬೇಗ ಶ್ರೀಮಂತಳಾಗುತ್ತೇನೆ.
ಅವಳು ಎಲ್ಲಾ ಸೇಬುಗಳನ್ನು ಕೊಳ್ಳಲು ತನ್ನ ಜಮೀನು ಮಾರಿದಳು. ತನ್ನ ಚಿನ್ನ ಮಾರಿದಳು. ನಂತರ ತನ್ನ ಮನೆಯ ದೊಡ್ಡ ಕೋಣೆ ತುಂಬ ಸೇಬು ತುಂಬಿದಳು.
ಸ್ವಲ್ಪ ಸಮಯದ ನಂತರ ಸೇಬಿನ ಬರಗಾಲ ಬಂದಿತು
ಆಗ ಇವಳು ಅವುಗಳನ್ನು ಮಾರಲೆಂದು ಕೋಣೆ ತೆಗೆದರೆ ಎಲ್ಲ ಸೇಬು ಹಣ್ಣುಗಳು ಕೊಳೆತು ನಾರುತ್ತಿದೆ
ಸೀತಾ ಎಲ್ಲ ಹಣ್ಣುಗಳನ್ನು ಸ್ವಚ್ಛ ಮಾಡುವ ಕೆಲಸವೂ
ಆಸ್ತಿ ಚಿನ್ನ ಎಲ್ಲ ಹಾಳಾಯಿತು. ಸೀತಾ ಅತ್ತಳು ಗೊಳಾಡಿದಳು ಆದರೇನು ಅತಿ ಆಸೆ ಗತಿ ಕೆಟ್ಟಿತು.

- Nisha anjum

13 Jan 2023, 08:38 pm

ದುರಾಸೆ ದುಖಕ್ಕೆ ಮೂಲ

ಒಂದಾನೊಂದು ಊರಿನಲ್ಲಿ ಒಬ್ಬ ರಾಜು ಎಂಬ ಹುಡುಗನಿದ್ದನು.ಅವನು ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡಿದ್ದ.ಈಗ ಅವನಿಗೆ ಊರಿನವರೆಲ್ಲ ಸೇರಿ ಒಂದು ಮದುವೆ ಮಾಡಿದ್ದರು.ಅವನ ಹೆಂಡತಿ ರಾಧಾ . ಬಲು ಜಾಣೆ .ರಾಜು ಕಾಡು ಅಲೆದು ಜೇನು ತಂದು ಮಾರುತಿದ್ದ.ಒಂದು ದಿನ ಅವನು ಪಕ್ಕದ ಹಳ್ಳಿಗೆ ಹೋಗಿ ಜೇನು ಉಳಿಯಿತು.ಅವನಿಗೆ ಬೇಸರ ಆಯಿತು.ಅವನು ಹೆಂಡತಿ ಹತ್ತಿರ ಹೇಳಿದಾಗ ಆಕೆ ಅವನಿಗೆ ನೀರು ಸೇರಿಸಿ ಮಾರಿ ಎಂದಳು.ಅವನು ಹಾಗೆ ಮಾಡಿದ. ದಿನ ಅವನು ನೀರು ಸೇರಿಸಿ ಮಾರಲು ಶುರುಮಾಡಿದ .ಅವನ ಹೆಂಡತಿ ರಾಧಾ ಬೇಡ ಎಂದರು ಅವನು ಕೇಳಲಿಲ್ಲ ಅವಳಿಗೆ ಬೈದನು
ಹೀಗೆ ನೀರು ಮಿಶ್ರಿತ ಜೇನು ತಿಂದು ಜನ ರೋಗಕ್ಕೆ ತುತ್ತಾಗಿದ್ದಾರೆ.ಆಗ ಅವನಿಗೆ ಊರಿನಿಂದ ಬಹಿಷ್ಕಾರ ಮಾಡಲಾಯಿತು

- Nisha anjum

13 Jan 2023, 08:36 pm

ಕನ್ನಡ ಕಲರವ ಗೆಳೆತನ..

ನಿನ್ನ ಬಳಿ ಮಾಡಿಕೊಳ್ಳುತ್ತಿರುವೆ
ಒಂದು ಮನನ,
ಪರಿಚಯ ಇಲ್ಲವೆಂದು
ದೂರಬೇಡ ನನ್ನನ್ನ.
ನೀನು ನೇರವಾಗಿ ನೋಡಿಲ್ಲ
ನನ್ನ ಮುಖನ,
ಹಾಗಂತ ಬೇರೆಯವರೆಂದು
ತಿಳಿಯಬೇಡ ನನ್ನನ್ನ.
ಕನ್ನಡ ಕಲರವ ಇಂದ ಆಗಿರಬಹುದು
ನಮ್ಮ ಗೆಳೆತನ,
ಆದರೂ ನನ್ನ ಹೃದಯದಲ್ಲಿ
ಇಟ್ಟಿರುವೆ ನಿನ್ನನ್ನ..
ಎಮ್.ಎಸ್.ಭೋವಿ...✍️
.

- mani_s_bhovi

13 Jan 2023, 12:46 am

ಒಮ್ಮೆ ಬರಬಾರದೆ...

ಈ ಹೃದಯದ ಬಡಿತ ನೀನು
ನನ್ನ ತನುವಿನ ಆತ್ಮ ನೀನು
ನನ್ನ ಉಸಿರಿಗೆ ಗಾಳಿ ನೀನು

ಎಷ್ಟು ಕಾಡಿಸಿದೆ ನಿನ್ನ
ಎಷ್ಟು ಕಾಯಿಸಿದೆ ನಿನ್ನ
ಆದರೂ ಹಠ ಬಿಡಲಿಲ್ಲ ನೀನು

ಕನಸೇ ಇಲ್ಲವೆಂದು ಬದುಕಿದ್ದೆ ನಾನು
ನನ್ನೊಳಗೆ ಮತ್ತೆ ಆಸೆ ಚಿಗುರಿಸಿದೆ ನೀನು
ಸಾವಿರ ಕನಸಿನ ಕೋಟೆಯೊಳಗೆ ನಿನ್ನನ್ನೆ ಕಂಡೆ ನಾನು

ಎದೆಯೊಳಗೆ ಬಚ್ಚಿಟ್ಟಿದ್ದ ಪ್ರೀತಿಯು ನೀನು
ಒಮ್ಮೆನಿನ್ನ ನೋಡುವ ಆಸೆಯಾಗಿದೆ ನನಗೆ
ದಯಮಾಡಿ ಬರಬಾರದೆ ಕಣ್ಣೆದುರಿಗೆ...

- Tanuja.K

12 Jan 2023, 10:14 pm

ನನ್ನ ಹೃದಯವು ನಿನಗೆ..

ಕೊಳಲು ನುಡಿಸುವೆ ನಾನು
ಕ್ರಿಷ್ಣನಂತೆ,
ಓಡೋಡಿ ಬರಬೇಕು ನೀನು
ರಾಧೆಯಂತೆ.
ರಾಧೆ ತುಂಬಾ ಕಾಯಿಸಬೇಡ
ನನ್ನ,
ಪ್ರತಿ ಕ್ಷಣವು ಕಾಯುತ್ತಿರುವೆ
ನಿನ್ನ.
ನೀನು ಬರುವ ಸೂಚನೆಯಾದರು
ನೀಡು ನನಗೆ,
ಮೊದಲೇ ತೆರೆದಿಡುವೆ ನನ್ನ
ಹೃದಯವ ನಿನಗೆ..
ಎಮ್.ಎಸ್.ಭೋವಿ...✍️
.
..
....
...

- mani_s_bhovi

11 Jan 2023, 11:10 pm

ನಿನ್ನ ಜೊತೆಯಾಗಿರುವೆ ನಾನು...

"ದೃಷ್ಟಿಯಾಗುವ ನಿನ್ನ
ಸೌಂದರ್ಯಕ್ಕೆ ದೃಷ್ಟಿಬೊಟ್ಟಾಗುವೆ
ನಾನು...
ತುಸು ನಾಚಿಕೆ ಪಡುವ
ನಿನ್ನ ನೋಟಕೆ ಬಂಧಿಯಾಗಿರುವೆ
ನಾನು...
ಇಂಪಾದ ನಿನ್ನ
ದ್ವನಿಯ ಕೇಳಲು ಮಾತಾಗುವೆ
ನಾನು...
ನಿನ್ನ ಸಂತೋಷದ ಕ್ಷಣಗಳಲ್ಲಿ
ನಗುವಿನ ಸದ್ದಾಗುವೆ
ನಾನು...
ನಿನ್ನ ಅಳುವಿನ ಕ್ಷಣಗಳಲ್ಲಿ
ಕಣ್ಣೀರಿನ ಹನಿಯಾಗುವೆ
ನಾನು...
ಪ್ರತಿ ಜನುಮದಲ್ಲೂ
ನಿನ್ನ ಜೊತೆಯಾಗಿರುವೆ
ನಾನು...!!"
ಎಮ್.ಎಸ್.ಭೋವಿ...✍️

- mani_s_bhovi

10 Jan 2023, 11:02 pm

ಸ್ನೇಹ ಸಂಬಂಧ..

"ನಿನ್ನ ಸ್ನೇಹಕ್ಕೆ ಸೋತಿರುವೆ ನಾ ಎಂದೊ,
ನಿನ್ನ ಜೊತೆಯಾಗಿರುವೆ ಸದಾ ಎಂದೆಂದೂ..!
ಆಕಸ್ಮಿಕವಾಗಿ ಬೆಳದ ನಮ್ಮ ಬಂಧವಿದು,
ಶಾಶ್ವತವಾಗಿ ಉಳಿಯುವ ಸ್ನೇಹಸಂಬಂಧವಿದು..!
ಖುಷಿಯಲ್ಲಿ-ದುಃಖದಲ್ಲಿ ಜೊತೆಯಾಗಿರುವೆ,
ನಿನ್ನ ಜೀವನದ ತುಂಬೆಲ್ಲ ಖುಷಿಯಿರಲೆಂಬ
ಅರಸುತ್ತಿರುವೆ..!
ಈಡೇರಲಿ ನೀ ಕಂಡ ಎಲ್ಲ ಕನಸುಗಳು,
ಬಾರದಿರಲಿ ನಿನಗೆ ಯಾವುದೇ ನೋವುಗಳು..!
ಎಮ್.ಎಸ್.ಭೋವಿ...✍️

- mani_s_bhovi

09 Jan 2023, 07:47 pm