ನನ್ನೆಲ್ಲಾ ಭಾವನೆಗಳಿಗೆ ಜೊತೆಯಾದ ಜೊತೆಗಾರ
ನನ್ನ ಕವನಗಳಿಗೆ ಸ್ಫೂರ್ತಿಯಾದೆ ನೀ ನಿರಂತರ
ಮೌನದ ಒಳಗಿದ್ದ ನೋವ ತಿಳಿದೆ ನೀ
ನನ್ನ ಸಂತೋಷವನ್ನೇ ಬಯಸುತ್ತ ಸನಿಹವಾದೆ ನೀ
ನಿನ್ನ ಮಾತುಗಳ ಮತ್ತೆ ಮತ್ತೆ ಕೇಳುವಾಸೆ ನನಗೆ
ನಿನ್ನ ನಗುವಿನ ಸದ್ದು ಇಂಪು ಕಿವಿಗೆ
ಸ್ನೇಹವೆಂದರೆ ಹೀಗೂ ಇರಬಹುದೆಂದು ತಿಳಿದಿರಲಿಲ್ಲ ನನಗೆ
ಸಮಯ ಸಾಗುವುದೇ ತಿಳಿಯದು ನೀ ಇರಲು ಜೊತೆಗೆ
ಎಲ್ಲಿದ್ದೆ ನೀ ಇಷ್ಟು ವರುಷ
ಮನಸಿನ ಭಾರವ ದೂರ ಮಾಡಿದ ಸ್ನೇಹಿತ
ನಿನ್ನೊಡನೆ ಮಾತನಾಡಲು ಹಾತೊರೆಯುವುದು ಮನ
ನಿನ್ನ ಸಂದೇಶಗಳಿಗಾಗಿ ಕಾದಿರುವೆ ನಾ....
ಪ್ರೀತಿಯಂಬ ಗಿಡವ ನೆಟ್ಟು
ನಗುವು ಎಂಬ ಹಸಿರ ತೊಟ್ಟು
ಸ್ನೇಹವೆಂಬ ನೀರ ನೆರೆದು
ಬದುಕು ಎಂಬ ನಗೆಯ ಹೂ ಬಿಟ್ಟು
ಮತ್ತೆ ನಿನ್ನ ಮುಡಿ ಸೇರಬೇಕೆಂಬ
ಹೊಸ ಕಾವ್ಯವೊಂದು
ಮನದಲಿಂದು ಮೂಡಿದೆ
ಮನದಲಿಂದು ಮೂಡಿದೆ
ನಾ ಕಾಯುತ್ತಿರುತ್ತೆನೇ ಕೇಳಲು
ನಿನ್ನ ಮಾತುಗಳನ್ನು...
ಮಾತನಾಡದೆ ನೋವಿಸಬೇಡ
ನನ್ನ ಮನಸ್ಸನ್ನು...!
ನಿನಗಾಗಿ ಮೀಸಲಿಟ್ಪಿರುವೆನು
ನನ್ನ ಸಮಯವನ್ನು...
ನಿನ್ನ ಸ್ವಲ್ಪ ಸಮಯವು
ಬೇಕಾಗಿದೆ ನನಗಿನ್ನೂ...!
ಇರಲಾಗುವುದಿಲ್ಲ ನಿನ್ನ ಬಿಟ್ಟು
ತುಂಬಾ ಘಳಿಗೆ...
ಸದಾ ನಿನ್ನ ನೋಡುವಾಸೆ
ನನ್ನ ಕಣ್ಣುಗಳಿಗೆ...!
ಎಮ್.ಎಸ್.ಭೋವಿ...✍️
.
.
ನಿನ್ನ ನೆನಪು ಪದೆ ಪದೆ ಕಾಡುವುದು ಗೆಳೆಯ
ನನ್ನ ಸಂದೇಶವನ್ನು ನಿನಗೆ ಹೇಗೆ ಹೇಳಲಿ..?
ಯಾರ ಮೂಲಕ ನಿನಗೆ ಈ ವಿಚಾರಗಳನ್ನು ತಿಳಿಸಲಿ..?
ಒಂದು ಬಾರಿ ಚಂದ್ರನನ್ನು ನೋಡು
ಅವನ ಬಳಿ ನನ್ನ ಸಂದೇಶವನ್ನು ಹೇಳಿರುವೆ
ಇಲ್ಲಿಂದ ಬೀಸಿ ಬರುವ ಗಾಳಿ ಒಮ್ಮೆ ನಿನ್ನ ಸೋಕಿದರು
ಸಾಕು
ಅದರಲ್ಲಿ ನನ್ನ ಭಾವನೆಗಳನ್ನು ನಿರೂಪಿಸಿರುವೆ..
ಇದು ಸಾಧ್ಯವಿಲ್ಲವಾದರೆ ನಾನು ದಾರಿಗೆ ವಿಷಯವನ್ನು
ತಿಳಿಸಿರುವೆ
ಆ ದಾರಿ ನೀನು ಇರುವಲ್ಲಿಗೂ ಸೇರಿರುವುದರಿಂದ
ನಾನು ಹೇಳ ಬಯಸುವ ವಿಷಯ, ಸಂದೇಶ ಎಲ್ಲವೂ
ನಿನಗೆ ತಲುಪುವುದು
ಆ ತೃಪ್ತಿಯಲ್ಲೆ ನಾನಿರುವುದು...
ಸಾಗಬಯಸಿದ್ದೆ ನಾ ನಿನ್ನ ಪ್ರೀತಿಯ ನದಿಯಲ್ಲಿ
ಆದರೆ,
ಸಾಗುತಿದೆ ಜೀವನ ನಿತ್ಯ ನನ್ನ ಕಣ್ಣೀರ ತೊರೆಯಲ್ಲಿ...
ಮಲಗಬಯಸಿದ್ದೆ ನಾ ನಿನ್ನ ಅಕ್ಕರೆಯ ಮಡಿಲಲ್ಲಿ
ಆದರೆ,
ನಿದ್ರೆಯೇ ಬರುತಿಲ್ಲ ನಿತ್ಯ ನಿನ್ನ ನೆನಪುಗಳ ಅಡಿಯಲ್ಲಿ...
ಪ್ರಯಶಃ ತಪ್ಪು ಮಾಡಿದೆನೇನೋ ನಿನ್ನ ಪ್ರೀತಿಯ ಬಯಸಿ ನಾನು...
ಆದರೆ,
ನನಗೇಕೆ ಕೊಡಲಿಲ್ಲ ಒಂದು ಕೊನೆಯ ಅವಕಾಶ ನೀನು...?
ಪ್ರೀತಿ ಬಯಸಿದ್ದೇ ತಪ್ಪಾದರೆ ಈ ಸೃಷ್ಟಿಯೇ ತಪ್ಪಲ್ಲವೇ...?
ನಿಜತಾನೆ ಈ ಪ್ರೀತಿ ಹುಟ್ಟಲು ಕಾರಣ ನೀನಲ್ಲವೇ...?
ಹುಟ್ಟಿದ ಈ ಪ್ರೀತಿ ಬಾಡಲು ಒಂದು ಕಾರಣ ಬೇಕಲ್ಲವೇ...?
ಕಾರಣ ಸಿಗಲೀ ಬಿಡಲೀ ನೀನೆಂದು ನನ್ನವಳೇ.....