ಪ್ರಕೃತಿ ಎಷ್ಟೇ ಸುಂದರವಾಗಿದ್ದರು ಹಾಗೂ
ನೆಮ್ಮದಿಯ ತಾಣವಾಗಿದ್ದರು ಮನುಷ್ಯ ಅಲ್ಲಿ
ವಾಸಿಸುವುದಕ್ಕೆ ಇಚ್ಚಿಸುವುದಿಲ್ಲ..
ಆ ವನವಾಸ ಬೇಡ ಎಂದುಕೊಳ್ಳತ್ತಾನೆ..
ಆದರೆ ಮನೆ ಆಗಲಿ ಅರಮನೆಯಾಗಲಿ
ಅಲ್ಲಿ ಬರೀ ನೋವು ಹಾಗೂ ಅಸಮಾಧಾನವೇ
ತುಂಬಿಕೊಂಡಿದ್ದರೂ ಸಹ ಅಲ್ಲಿಯೇ
ವಾಸಿಸಲು ಬಯಸುತ್ತಾನೆ ಹಾಗೂ ನೆಮ್ಮದಿಯನ್ನು
ಹುಡುಕಲು ಪ್ರಯತ್ನಿಸುತ್ತಾನೆ..
ಇದು ಎಂತಹ ವಿಚಿತ್ರ ಸತ್ಯ ಅಲ್ಲವೆ..
ಇದೊಂದು ಬದುಕಿನ ವಿಪರ್ಯಾಸವೇ ಸರಿ...
ಎಮ್.ಎಸ್.ಭೋವಿ...✍️
ಕಾಣದೂರಿನ ಹೊಸ ಲೋಕದಲ್ಲಿರುವೆ ನಾನು
ದಯಮಾಡಿ ಬರಬೇಕು ನೀ ನನ್ನವನು
ಹೇಗೆ ಹೇಳಲಿ ನಾ ಎಲ್ಲವನು
ನನ್ನ ಕವನಗಳಿಗೆ ಜೊತೆಯಾದ ಜೊತೆಗಾರನ ಗುಣವನು
ಎಂತಹ ಸಂತೋಷ ನಿನ್ನ ನೋಡಲು
ಅದೇನೋ ಹೊಸತನ ನೀ ನುಡಿಯಲು
ಎಲ್ಲಿದ್ದರೂ ಆಲಿಸುವೆ ನಿನ್ನ ಮಾತನ್ನೆ
ಎಲ್ಲರೂ ಇದ್ದು ನಾ ಒಂಟಿಯಾಗಿ ಬಿಡುವೆ ನನ್ನೊಳಗೆನೆ
ಮೈ ಮರೆತು ಬಿಡುವೆ ನಿನ್ನ ಕವನಗಳಿಗಾಗಿ
ನನ್ನ ಪ್ರತಿಕ್ಷಣವು ನಿನಗಾಗಿ..
ಹೇ ಗೆಳತಿ,
ನಾ ಹಾಗೆಲ್ಲ ಮನಬಿಚ್ಚಿ ನಕ್ಕವನೇ ಅಲ್ಲ !
ನಗುವಿಗೂ ನೆಪ ಹುಡುಕುವ ಜಿಪುಣ ನಾನು..
ಆದರೆ,
ನಿನ್ನ ನೆನಪು ಬಂದಾಗಲೆಲ್ಲ
ನನ್ನ ಮನಸ್ಸು
ಗರಿ ಬಿಚ್ಚಿದ ನವಿಲಂತಾಗುತ್ತದೆ !
ಇಳೆ ಸೇರಲು ಬಯಸುವ
ಮಳೆಯ ಹನಿಯಂತಾಗುತ್ತದೆ !
ಅದೆಲ್ಲೋ ಅಡಗಿದ್ದ ಕಿರುನಗು
ತುಟಿಯಂಚಿನಿಂದ ಜಿಗಿದು,
ನಿನ್ನ ಮಡಿಲು ಸೇರುತ್ತದೆ !
ಎಮ್.ಎಸ್.ಭೋವಿ...✍️
"ಗೆಳತಿ...
ನಿನಗೆ ಬೇಸರ ಪಡಿಸುವ ಉದ್ದೇಶ ನನ್ನದಲ್ಲ..
ನಿನ್ನ ಜೀವನ ನಿನ್ನ ಕೈಯಾರೆ ಹಾಳಾಗಬಾರದೆಂಬ
ಚಿಕ್ಕ ಹಂಬಲ..
ಯಾರ್ ಯಾರನ್ನೋ ನಂಬಿ ಮುರ್ಖಳಾಗಬೇಡ
ಅವರು ನಿನಗೆ ತಿಳಿಯದ ಹಾಗೆ ನಿನ್ನ ಬಗ್ಗೆ
ಅಪಪ್ರಚಾರ ಮಾಡುವರು ನೆನಪಿನಲ್ಲಿರಲಿ..
ಕೆಟ್ಟದ್ದೆಂದು ಗೊತ್ತಾಗಿಯೂ ಕೂಡ
ಮತ್ತೆ ಮತ್ತೆ ಅದೇ ತಪ್ಪನ್ನು ಮುಂದುವರೆಸಿದರೆ
ನಿನ್ನ ಬದುಕು ಹಾದಿತಪ್ಪಿ ಹೋಗುತ್ತದೆ...?"
ಎಮ್.ಎಸ್.ಭೋವಿ...✍️
ನೀನು ನನ್ನ ಜೀವನಕ್ಕೆ ಬಂದಾಗ
ಎಲ್ಲೋ ನಾ ಕಳೆದುಕೋಂಡಿದ್ದೆಲ್ಲ
ನಿನ್ನಿಂದ ನನಗೆ ಸಿಗುತ್ತೆ ಅನ್ಕೊಂಡೆ..
ಆದರೆ ಈಗ ನಾನು ಬಯಸಿದ್ದು ಸೀಗದೆ ಹೋದ್ರು..
ನಾನು ಯೋಚಿಸದೆ ಇರೋದೆಲ್ಲ
ಒಮ್ಮೇಲೆ ಸಿಕ್ಕಿ ಬಿಡ್ತು..
ನೀನು ಕೂಡ ನನಗೆ ಶಾಶ್ವತವಾಗಿಲಿಲ್ಲ..
ಮೊದಲೆ ಇದ್ದ ನೋವಿನ ಜೊತೆ
ಇದು ಒಂದು ನೋವಾಗಿ ಸೇರಿಕೊಳ್ತು ಅಷ್ಟೆ..
ನೋವುಗಳನ್ನ ಅನುಭವಿಸೋದಕೊಸ್ಕರನೇ
ಹುಟ್ಪಿದಿನಿ ಅನ್ಸುತ್ತೆ...
ನಿನ್ನನ್ನ ನನ್ನ ಜೀವನದಲ್ಲಿ ಉಳಿಸಿಕೊಳ್ಳೋದಕ್ಕೆ
ನನಗೆ ಯೋಗ್ಯತೆ ಇಲ್ಲ ಬಿಡು..
ಎಲ್ಲವನ್ನು ಪಡೆದುಕೊಂಡು ಬಂದಿರ್ಬೇಕು....
ಎಮ್.ಎಸ್.ಭೋವಿ...✍️
ಬೇಡವೆಂದರೂ ನೀನೆ ಬೇಕು
ಎಂದು ಬರುವುದು ನೋವು..
ಸಾಕು ಎಂದರು ಬಿಟ್ಟು ಹೋಗದೆ
ಜೊತೆಯಲೇ ಇರುವುದು ನೋವು..
ಬಿಟ್ಟು ಹೋಗಬಹುದು ಒಮ್ಮೆಯಾದರು
ದೇಹಕ್ಕೆ ಆದ ನೋವು,
ಬಿಟ್ಟು ಹೋಗದೆ ಕೊನೆವರೆಗೂ
ಉಳಿಯುವುದು ಮನಸ್ಸಿಗಾದ ನೋವು..
ನಲಿವಿನ ಸುಳಿವಿಲ್ಲದೆ ಹಗಲಿರುಳು
ಕಾಡುತ್ತಿದೆ ನೋವು..
ಜೀವದ ಪರದಾಟ ಕಂಡು
ಕೈ ಬೀಸಿ ಕರಿಯುತ್ತಿದೆ ಸಾವು..
ಎಮ್.ಎಸ್.ಭೋವಿ...✍️