ನಿದಿರೆಯಲಿ ಕಾಡುವೆ ಏಕೆ ನೀರೆ
ಕಣ್ಣೆದುರಿದ್ದರು ಯಾಕೀ ಮೌನ ಒಲವೆ...??
ಬೇಡವಾಯಿತೆ ನನ್ನೀ ಪ್ರೀತಿ
ಬದುಕಲಾರೆ ನಿನ್ನ ರೀತಿ
ಹೇಗಿರುವೆ ನೀನು ನನ್ನನಗಲಿ
ಕಲಿಸಿಕೊಡು ನೀನಿರುವ ಪರಿ
ಮನಬಿಚ್ಚಿ ಮಾತಾಡು ಒಮ್ಮೆ
ಅಪ್ಪುಗೆಯಲಿ ಬಂಧಿಸುವೆ ಸುಮ್ಮನೆ
ಸಾಕು ಗೆಳತಿ ಈ ದೂರ
ನೀ ಬೇಕು ಇನ್ನೂ ಹತ್ತಿರ
ನನ್ನ ಮನದ ದೇವತೆ ನೀನು
ಕಾಯುವೆ ಪ್ರತಿ ಜನುಮ ನಾನು...
ಹಣೆಬರಹಕ್ಕೆ ಹೊಣೆ ಯಾರು...?? ಆತನು ಆಡಿಸಿದಂತೆ ಆಡುವ ಗೊಂಬೆಗಳು.. ಇದ್ದ ಷ್ಟು ದಿನ ಇರುವವರ ಜೊತೆಗೆ ನಗು ಮೊಗದಿಂದ ಬದುಕುವುದೇ ಜೀವನ ಆಗಿದೆ... ಮನದೊಳಗಿನ ಸಂತಸದ ದಿನಗಳು ದೂರವಾಗಿವೆ ಎಲ್ಲೋ ಮರೆತು... ಕಣ್ಮುಚ್ಚಿ ಕರೆದರೂ ಬಾರದ ಲೋಕಕ್ಕೆ ಜಾರಿವೆ ನೆನಪುಗಳು... ಮತ್ತೆ ಮತ್ತೆ ನೋಡುವ ಆಸೆ ನಿನ್ನ ಮೊಗದಲ್ಲಿನ ನಗುವನ್ನು.. ಮತ್ತೊಂದು ಬಾರಿ ಕೂಗಿ ಹೇಳುವೆ ನೀ ನಡೆವ ದಾರಿಯಲ್ಲಿ ,ನಿನ್ನೆಲ್ಲ ನೆನಪುಗಳನ್ನು ಮೆಲುಕಿಸುತ್ತ....
-- ಶ್ಯಾನು...
ಕೊಂಚ ನನ್ನಿಂದ ದೂರ ಸರಿದು ಬಿಡು
ಇಲ್ಲಾಂದರೆ, ನಿನ್ನ ಗುಂಗಲ್ಲಿ
ಹುಚ್ಚನಾದರೂ ಅನುಮಾನವಿಲ್ಲ..
ಯಾಕೆ ಇಷ್ಟು ಆಳವಾಗಿ ನನ್ನ ಹೃದಯದೊಳಗೆ
ಬೇರೂರಿದೆ, ಅದಕ್ಕೆ ಅನಿಸುತ್ತೆ ಪ್ರತಿ ಬಡಿತವು
ನಿನ್ನನ್ನೇ ಜಪಿಸುತ್ತಿರುವುದು..
ಬೇಕಾದರೆ ಒಮ್ಮೆ ಬಂದು ಎದೆಗೆ ಕಿವಿ ಇಟ್ಟು
ಆಲಿಸು, ನನ್ನ ಹೃದಯಬಡಿತ ನಿನ್ನನ್ನೇ
ಜಪಿಸುತ್ತಿರುವುದನ್ನು...
ಎಮ್.ಎಸ್.ಭೋವಿ...✍️
ಮುಸ್ಸಂಜೆಯ ಇಳಿ ಹೊತ್ತಿನಲ್ಲಿ..
ಮಬ್ಬುಕವಿದ ವಾತಾವರಣದಲ್ಲಿ..
ಮಂಕು ಕವಿದ ಮನಸ್ಸಿಗೆ ನೆನಪಾಯಿತು ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು ಈ ಸ್ವಚ್ಚಂದದ ಕನಮಡಿ ಪ್ರೌಢಶಾಲೆ ಅಂಗಳದಲ್ಲಿ .....
ಮತ್ತೆ ಮೂಡಿ ಬಂತು ಮುಗುಳು ನಗೆ ಈ ನನ್ನ ತುಟಿಗಳ ಅಂಚಲಿ...
ನಾನೇನೋ ಬರೆಯುತ್ತಿದ್ದೇನೆ ಪ್ರತಿದಿನ
ಈ ಕನ್ನಡ ಪೊಯೆಂ ಎಂಬ ಪ್ರಪಂಚದಲ್ಲಿ
ಕೆಲವರಿಗೆ ಏನು ಇಲ್ಲದಿರಬಹುದು
ವಿಶೇಷವಾಗಿ ಮೆಚ್ಚಲು ನನ್ನ ಬರಹವ
ಕೆಲವರಿಗೆ ಅವರದೇ ಭಾವನೆಗಳು
ಬರೆದಿದೆ ಅನಿಸಬಹುದು
ಒಂದಷ್ಟು ಬರಹಗಳು ಯಾರೋ ನೋಡಲಿ
ಮೆಚ್ಚಲಿ ಎಂದೇ ಬರೆದೆ
ಇನ್ನೊಂದಿಷ್ಟು ಮನಸ್ಸಿಂದ ಆತ್ಮತೃಪಿಗಾಗಿ
ಬರೆದೆ...
ಎಮ್.ಎಸ್.ಭೋವಿ...✍️
ಪ್ರೀತಿ ಕಣ್ಣಿಗೆ ಕಾಣದು...
ಪ್ರೀತಿ ಕಣ್ಣಿಗೆ ಕಾಣದು ನಿಜ, ಆದರೆ ಅದೊಂದು ಸುಂದರವಾದ ಭಾವನೆ...
ಆದರೆ ಅದೊಂದು ಸುಂದರವಾದ ಭಾವನೆ ಹೌದು...
ಪ್ರೀತಿ ಯಾರಿಂದನು ವರ್ಣಿಸಲಾಗದ ಒಂದು ರೀತಿ...
ಪ್ರೀತಿ ವರ್ಣಿಸಲಾಗದ ಒಂದು ರೀತಿ...
ಅದು ಮನಸ್ಸಿನಲ್ಲಿ ಭಾವನೆ ಮೂಡಿಸುತ್ತಿರುವ ಭೀತಿ...
ಪ್ರೀತಿಯ ಪರಿ ನೀ ಕಾಣದಿರು...
ಪ್ರೀತಿ ಒಮ್ಮೆ ಮನದಲ್ಲಿ ಅರಳಿದರೆ ನಿನಗೆ ಎನನ್ನು ಕಾಣದ ಒಂದು ರೀತಿ...
ಪ್ರೀತಿ ಎಂದರೆ ಆಕರ್ಷಣೆ ಅಲ್ಲ...
ಪ್ರೀತಿ ಎಂದರೆ ಮೋಹವಲ್ಲ...
ಪ್ರೀತಿ ಎಂದರೆ ವ್ಯಾಪಾರವು ಅಲ್ಲ ಮತ್ತು ಬಣ್ಣ ಬಣ್ಣದ ಮಾತುಗಳನ್ನು ಹೇಳುವುದು ಅಲ್ಲ...
ಪ್ರೀತಿ ಸರಿಯಾದ ಸಮಯಕ್ಕೆ ಹೇಳಿಕೊಳ್ಳುವ ರೀತಿ...
ಪ್ರೀತಿ ಅದೊಂದು ಅದ್ಭುತವಾದ ಸೆಳೆತದ ರೀತಿ...
ಪ್ರೀತಿ ಮೊಗ್ಗಿನಿಂದ ಹೂವಾಗಿ ಅರಳುವ ಒಂದು ಮನಸ್ಸಿನ ರೀತಿ...
ಪ್ರೀತಿ ಅಲ್ಲಿ ನಂಬಿಕೆ, ವಿಶ್ವಾಸ ಮತ್ತು ಎಲಾದಕ್ಕೂ ಮೀರಿರುವ ಗೌರವ ತುಂಬಿರುವಂತಹ ರೀತಿ...