ಅವಳು ಎನ್ನಾ ಪ್ರೀತಿಯು ಜೋಳಿಗೆಯ ಹೊಕ್ಕವಳು;
ನನ್ನ ಏಕಾಂಗಿಯ ಪಯಣಕ್ಕೆ ಮಂಗಳ ಹಾಡಿದವಳು;
ನನ್ನ ದುಃಖಕ್ಕೆ ನಗುವಾದವಳು;
ನನ್ನ ಭಾವ ಜೋಕಾಲಿಯಲ್ಲಿ ಆಡುವವಳು;
ನನ್ನ ಕನಸುಗಳಿಗೆ ನಾಯಕಿ ಆದವಳು;
ಮೂಗುತಿಯ ಸುಂದರೀ;
ಮುಂಗುರುಳ ಬೆಡಗಿ;
ಗುಳಿಗೆನ್ನೆಯ ಒಡತಿ;
ಕೆಂದುಟಿಯ ಚಲುವೆ
ಕಾಡಿಗೆ ಕಣ್ಣಿನ ಅರಸಿ;
ಚಲುವೆ ಯಾಕೀ ಮೌನ ಚಳವಳಿ;
ಮಾತಾಡೇ ನನ್ನ ಬಳಿ;
ಆ ಮಾತುಗಳಿಂದ ಅಂದರದಿ ಹೆಪ್ಪುಗಟ್ಟಿದ ನೆನಪುಗಳೆಲ್ಲವೂ...
ಮರುಚಲಿಸುವುದು ಎಂದು ನಾ ಕಾಯುತ್ತಿರುವೆ...
ನನಗರಿಯದೇ ನನ್ನ ನಾ ಮರೆತು
ನೀ ಆಲಿಸಿ ಸ್ವೀಕರಿಸು
ಈ ಪ್ರೀತಿಯು ಜಾಹೀರಾತು
ಭಾವಗಳು ವಲಸೆ ಬಂದಿದೆ ,
ನಿನ್ನ ಮನದಲ್ಲಿ ನಿಲ್ಲುವ ಆಸೆ ಹೂಡಿದೆ;
ಕನಸುಗಳೇ ಅಕ್ಕರೆಯ ಸಕ್ಕರೆಯಾಗಿದೆ;
ನನಸಾಗಲು ನಿನ್ನೆದುರು ಕೈ ಚಾಚಿ ನಿಂತಿದೆ....
ಅಂದದ ನಗುವಿಗೆ ಬೆರಗಾಗಿ ನಿಂದೆನು;
ಪ್ರೀತಿಯ ದಾರಿ ಹಿಡಿದು ನಿನ್ನ ಹಿಂದೆಯೇ ಬಂದನು; ಮುಂಗುರುಳ ಆಟಕ್ಕೆ,
ಮುಗುಳ್ನಗೆಯ ತೋಟಕೆ,
ನಿನ್ನಯ ಓರೆಯ ನೋಟಕ್ಕೆ,
ನಾ ಬಿದ್ದ ನಲ್ಲೆ 'ಪ್ರೀತಿಯ'
ಜೋಟ್ ಆಟಕ್ಕೆ
ಚಂದಿರನ ತಂಗಿ, ತಂಗಾಳಿಯೇ...... ಬಾ
ಈ ಹೃದಯವ ತಂಪಾಗಿಸು ಪ್ರೀತಿಯ ಕಂಪಿನಿಂದ
ಕಾದಿರುವೆ ನಾ ನಿನಗಾಗಿ...
ಎಷ್ಟು ಮಾತನಾಡಿದರೂ ಮಾತು ಮುಗಿಯುತ್ತಿಲ್ಲ ನಿನ್ನೊಂದಿಗೆ,
ನಾ ಸೋತಿರುವೆ ನೀ ತೋರುವ ಪ್ರೀತಿ ಕಾಳಜಿಗೆ,
ಕಾಡಬೇಡ ಗೆಳೆಯ ನೆನಪಾಗೆ....
ಯಾವುದರಲ್ಲೂ ಗಮನವಿಲ್ಲ ನನಗೆ...
ಪ್ರತಿಕ್ಷಣ ನಿನ್ನ ಗುಂಗಲ್ಲೆ ನಾನು,
ಈಗೀಗ ನನ್ನೊಳಗೆ ನಗುವುದನ್ನು ಕಲಿತಿರುವೆನು..
ಮನದೊಳಗೆ ನಿನ್ನೊಂದಿಗೆ ಮತನಾಡುತ್ತಿರುವೆನು..
ಮಗುವಾಗಿ ನಿನ್ನ ಮಡಿಲಲಿ ಮಲಗುವಾಸೆ ನನಗೆ
ನೀ ನನ್ನ ಸಂತೈಸುವಾಗ ಖುಷಿಯಲೆ ನಿನ್ನ ಸನಿಹವಾಗುವಾಸೆ....
ಮಲಗಿದ್ದೆ ನಾ ಮದ್ಯಾಹ್ನ...!
ನೀ ಜೊತೆ ಇದೀಯಾ ಅನ್ನೋ
ಬ್ರಮೆಯಲಿ ತಟ್ಟನೆ ಎದ್ದೆ
ಖುಷಿಯಾಗಿ...
ಮೆಲ್ಲನೆ ಕಣ್ಣೋರೆಸಿ ಸಂರ್ಪೂಣ
ಎಚ್ಚರವಾಗಲು...
ಖಾಲಿ ಇದ್ದ ಆ ನಿನ್ನ ಜಾಗ
ಕಿತ್ತುಕೊಂಡಿತು ನನ್ನ
ಮುಗುಳುನಗೆಯ...
ಬೇಜಾರಾಗಿ ಪುನಃ
ಮಲಗಬೇಕೆಂದರು ಬಿಡದೆ
ಕಾಡಿದೆ..... ಗೆಳತಿ ನಿನ್ನ
ನೆನಪು.....!!
ಎಮ್.ಎಸ್.ಭೋವಿ....✍️
ಎಲ್ಲರಿಗೂ ಖುಷಿಯನ್ನ ಬಯಸ್ತಿನಿ ನಾನು..
ಕಷ್ಟಗಳಿದ್ರು ಕಣ್ಣೀರಿಗೂ ಅಂಜಿಕೆ ಆಗುವಷ್ಟು
ನಗಸ್ತಿನಿ...
ಆದ್ರು ಕೊನೆಯಲ್ಲಿ ನನ್ನನ್ನೇ ಅಳಿಸಿಬಿಡ್ತಾರೆ....
ಎಲ್ಲರ ನೋವುಗಳಿಗೂ ಸ್ವಂದಿಸ್ತಿನಿ ನಾನು..
ಸಂಭಂದ ಇಲ್ದೇ ಇದ್ರು ಸಮಯಕ್ಕು
ತಲೆಕೊಡದೆ ಸಮಧಾನಿಸ್ತಿನಿ...
ಆದ್ರು ಕೊನೆಯಲ್ಲಿ ನನ್ನ ಸಮಯ ಕೆಲವರಿಗೆ
ಕಾಲಹರಣವಾಗಿ ಬಿಡುತ್ತೆ....
ಯಾರೆ ಆಗ್ಲಿ,
ಕೊಟ್ಟ ಮರ್ಯಾದೆಯನ್ನ ಕಾಪಾಡಿಕೊಳ್ಳಬೇಕು..
ಸಿಕ್ಕ ವ್ಯಕ್ತಿಯನ್ನ ಉಳಿಸಿಕೊಳ್ಳಬೇಕು....
ಎಮ್.ಎಸ್.ಭೋವಿ...✍️
ಪ್ರೀತಿಯ ಅಲೆಯಲಿ
ತೇಲುವ ಆಸೆಯಾಗಿದೆ ಗೆಳೆಯ,
ಕೈ ಬಿಡಬೇಡ ನನ್ನ ಕೊನೆ ಉಸಿರಿರುವ ತನಕ..
ಪ್ರೀತಿ ಬೇಕು ಮನಕೆ,
ಪ್ರೀತಿಸುವ ಹೃದಯ ಬೇಕು ಜೀವಕೆ..
ಎಂಥ ಮಾಯೆ ಈ ಪ್ರೀತಿಯು,
ಒಲಿದವರಿಗೆ ಮಾತ್ರ ಸಿಗುವುದು
ಸಮಾಧಾನ ತೃಪ್ತಿಯು..
ಕಾದಿದೆ ಮನ ನಿನಗಾಗಿ
ಬಳಲಿದ ಬದುಕಿಗೆ ಬಾ ತಂಗಾಳಿಯಾಗಿ..
ಹೀಗೆಂದು ಆಗುತ್ತದೆಂದು ತಿಳಿದಿರಲಿಲ್ಲ
ನಾನೇಕೆ ಹೀಗಾದೆ..
ಕಾಯುವಿಕೆಯು ನನ್ನಲ್ಲೂ ಇರುವುದೇ.....??
ಪ್ರೀತಿ ಇರದೆ ಸ್ನೇಹ ಬರುವುದೇ...??
ಕನಸಿನ ಕನವರಿಕೆಗೆ ಕಾರಣ ನೀನು
ಮನಸಿನ ಮಾತಿಗೆ ಮಂದಾರ ನೀನು
ಕಾಲ ಕಳೆಯುವುದು ಬೇಡವೆಂದರೂ..
ನಿನ್ನ ಜೊತೆಗಿರುವೆ ನಾ ಎಲ್ಲಿದ್ದರೂ..
ನಿನ್ನ ಮನದಲ್ಲೊಂದು ಪುಟ್ಟ ಜಾಗ ಕೊಡು ನನಗೆ..
ನಾ ಅಲ್ಲೆ ಬಂಧಿಯಾಗುವೆ ಬೆಚ್ಚಗೆ...