ತಂಪಾದ ತಂಗಳಿ ಬೀಸುತ್ತಿತ್ತು.
ಹೊನಲು ಬೆಳಕು ಚಿಮ್ಮುತ್ತಿತ್ತು.
ಮೌನಿಯಾಗಿ ಕುಳಿತ್ತಿದ್ದೆ
ಪ್ರೆಯಸಿಯ ದಾರಿ ಕಾಯುತ್ತಿದ್ದೆ.
ಸೂರ್ಯ ಸರಿಯುವ ಹೊತ್ತಲಿ
ನನ್ನವಳು ಬರುತ್ತಿದಳು ಮಬ್ಬಲಿ
ಚಿಕ್ಕ ಕಾಲು ದಾರಿಯಲಿ
ನನ್ನ ನೋಡುವ ಸಂಭ್ರಮದಲಿ.
ಎಲ್ಲೂ ನೋಡದ ಜಾಗವಿದು
ಎಂದು ಕಾಣದ ಕನಸಿದು
ಸುಮ್ಮನೆ ಎನೂ ತಳಮಳ
ಮನಸಲಿ ಎನೋ ಕೋಲಾಹಲ.
ಕಾಯಿಸಿ, ಸತಾಯಿಸುವ
ಆಸೆ ಏಕೆ ನಿನ್ನಲಿ..
ಒಲಿದರೂ, ಮುನಿದರೂ
ನೀನೇ ಬೇಕು ನನಗಿಲ್ಲಿ..
ಸಿಹಿ ಕಹಿಗಳು ಏನೇ ಬರಲಿ..
ನೋವು, ನಲಿವಿಗೂ ನೀನೊಬ್ಬ ಸಾಕಿಲ್ಲಿ..
ಮನಸ್ಥಿತಿ, ಪರಿಸ್ಥಿತಿಗಳಲಿ ಅಂತರ ನೂರು...
ಕಾರ್ಯ, ಕಾರಣವಿಲ್ಲ ಪ್ರೀತಿ ಹುಟ್ಟಲು...
ಕಣ್ಣಿನ ರೆಪ್ಪೆಯಂತೆ ಜೊತೆ ಇರುವೆ...
ಹಸ್ತದ ರೇಖೆಯಾಗಿ ನಿನ್ನ ಸೇರುವೆ...
ಹೇ ನನ್ನ ಒಲವೆ.... ನಿನ್ನೇ ಪ್ರೀತಿಸುವೆ...
ಸಾಧನೆಯ ಹಾದಿಯಲಿ
ಸಹನೆ ಸದಾಯಿರಲಿ
ಗುರಿ ಮುಟ್ಟುವರೆಗೂ ನಿಲ್ಲದೆ
ಆತ್ಮ ವಿಶ್ವಾಸದಿ ಸಾಗು ನೀ ಮರೆಯದೆ
ಕಷ್ಟಗಳು ಬಂದರೆ ಸಹಿಸು
ಅನಂತರ ಪಡೆಯುವೆ ನೀ ಯಶಸ್ಸು
ಇದುವೇ ಜೀವನದ ಹುಮ್ಮಸ್ಸು
ಇದನ್ನರಿತು ಸಂತಸದಿ ಜೀವಿಸು.
ಯೋಗಿತ ಟಿ.ಎನ್.
ನೋವನ್ನುಂಡು ಸಂತಸದ ಕಂಪನ್ನು ಹರಡಿಸಿ
ಮಮತೆಯ ಮಳೆಯನ್ನು ಸುರಿಸುವಳು ಹೆಣ್ಣು
ಅಮ್ಮನಾಗಿ, ಅಕ್ಕ,ತಂಗಿ,ಹೆಂಡತಿಯಾಗಿ
ಬದುಕಿನ ಜವಾಬ್ದಾರಿ ನಿರ್ವಹಿಸುವಳು ಹೆಣ್ಣು!
ಹೆಣ್ಣೆಂದರೆ ಸಹನೆ, ಶಾಂತಿ,ಪ್ರೀತಿ ವಿಶ್ವಾಸ
ಹೆಣ್ಣೆಂದರೆ ಮತ್ತೊಂದು ಜೀವಕೆ ಉಸಿರು ನೀಡುವಳು
ಕನಸುಗಳಿಗೆ ರೂಪವಾಗಿ,ಪದಗಳಿಗೆ ನಿಲುಕದವಳು
ಎಲ್ಲವೂ ಅವಳಿಂದಾದರೂ, ಒಂಚೂರು ಗರ್ವಪಡದವಳು!
ಪುರುಷರಿಗೆ ಸರಿಸಮನಾಗಿ ಸ್ವತಂತ್ರವಾಗಿ ಬದುಕಬಲ್ಲಳು
ಆದರೂ ಆಕೆ ನರಳುತ್ತಿದ್ದಾಳೆ ದೌರ್ಜನ್ಯದಡಿಯಲ್ಲಿ ಸಿಲುಕಿ
ಸ್ವಾವಲಂಬಿಯಾಗಿ ಬದುಕಲು ಬಿಡರು ಸಮಾಜದ ನಡುವಿನಲ್ಲಿ
ಹೆಸರಿಗಷ್ಟೇ ಮಹಿಳೆ ಒಬ್ಬಂಟಿಯಾಗಿ ಓಡಾಡಲು ಸ್ವತಂತ್ರಳು!
ತಡೆಯಬೇಕಿದೆ ಹೆಣ್ಣು ಭ್ರೂಣಹತ್ಯೆ,ವರದಕ್ಷಿಣೆ,ತಾರತಮ್ಯ,ಅತ್ಯಾಚಾರಗಳನ್ನು
ಸಮಾಜದ ಕಣ್ಣುಗಳಾಗಬೇಕಿದೆ ಮಮತೆ,ನಂಬಿಕೆ,ನೈತಿಕ ಮೌಲ್ಯಗಳು
ಹೀಗಾಗಿದ್ದಲ್ಲಿ ಮಾತ್ರವೇ ಮಹಿಳಾ ದಿನಾಚರಣೆಗೊಂದು ಅರ್ಥ
ಇಲ್ಲವಾದಲ್ಲಿ ಈ ಆಚರಣೆ ನಡೆಸುವುದು ವ್ಯರ್ಥ!
ಬಾನಂಗಳದಲ್ಲಿ ನೇಸರನು ಬರುವ ಮುಂಚೆ
ನೀ ತೊಡುಗುವೆ ನಿನ್ನ ಕಾಯಕದಲ್ಲಿ.
ನಿನಗೆ ಯಾರೇ ಸರಿಸಾಟಿ ಈ ಜಗದಲ್ಲಿ.
ಎಷ್ಟೇ ಕಷ್ಟ ಬಂದರು ನೀ ಹೊಳೆಯುವೆ ಕನ್ನಡಿಯಂತೆ.
ತಾಯಿಯಾಗಿ, ಸತಿಯಾಗಿ ಜೊತೆ ಬರುವೆ ನೆರಳಿನಂತೆ.
ಸಾವಿರಾರು ಸವಾಲುಗಳು ಎದುರಾದರೂ ನಡೆಯುವೆ ನೀ ದಿಟ್ಟ ಹೆಜ್ಜೆಯನಿಟ್ಟು.
ನಿನ್ನ ನೋವುಗಳನ್ನು ಪಕ್ಕಕೆ ಬಿಟ್ಟು.
ಮನೆ-ಮನೆಯಲ್ಲಿ ದೀಪ ಮೂಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ಸಂಸಾರದ ನೌಕೆ ಸಾಗಿಸುವ ಆಕೆ
ನಿನಗೆ ಬೇರೆ ಹೆಸರು ಬೇಕೆ .......?
ಸ್ತ್ರೀ ಅಂದರೆ ಅಷ್ಟೆ ಸಾಕೆ .....?
ಯೋಗಿತ.ಟಿ.ಎನ್.