ಮಸಣದ ಹಾದಿಯುದ್ದುಕು ಕಣ್ಣಿರ
ಹನಿಗಳ ಮೌನ ಮಾತಿನ ನರ್ತನ "
ಆದರೆ ಚೇಲ್ಲುತಿದ್ದ ಅ ಕಂಗಳ
ನಿರು ಬಿಟ್ಟು ಹೋದ ನೋವಿಗೊ
ಖುಷಿಗೊ ಅದೊಂದು ಕಾಣದ
ಮನಸುಗಳ ಮರ್ಮ ಕಥನ,,
ಹಸಿವಿನಾಟಕೆ ಆಯ್ಕೆಯ
ಬಲದಲ್ಲಿ ಕಾಯಕ ಚಿಂತನ!
ಕಪಟ, ಮೋಸ, ಪ್ರಮಾಣಿಕತೆ,
ಆಯ್ಕೆಗಳ ಅನುಸಾರ ಕಷ್ಟ ನಷ್ಟಗಳಡಿ
ಹಗಲಿರುಳ ಜೀವನ
ಯೂವುದಕು ಅವನಿದಿಲ್ಲ ಮಾಪನ....
ಅವನ ನಿಲುವು ಓಂದೆ ಆಯ್ಕೆಗಳ ಮೇಲೆ
ಅವನತಿಯೆಂಬ ಮುಕ್ತಿಯ ಮಂತನ!!
✒ @ ವಿಶ್ವ ರಾಜ್....
"ಯೋಗಿತಾ....
ಅವಳ ಪಾಲಿರಲಿ ಎಂದಿಗೂ.. ಹರುಷ !
ನಗುವಿನಲೆ ತುಂಬಿರಲಿ.. ಪೂರ_ಹರುಷ !
ದೂರ ಇದ್ದರು..
ಎಂದಿಗೂ ಹತ್ತಿರದವಳು !
ಇಂದಿಗೂ_ಎಂದಿಗೂ..
ನನ್ನ ಆತ್ಮಿಯ ಗೆಳತಿ ಅವಳು !
ನಿನಗೆ ಸದಾ ಇರುವುದೆ..
ನಮ್ಮ ಶುಭಾಶಯಗಳು !
ಸದಾ ಬಯಸುವೆವು..
ನಿನ್ನಂತೆಯೆ ಇರಲಿ ಖುಷಿಯ ಹೊನಲು !!"
ಎಮ್.ಎಸ್.ಭೋವಿ...✍️
ನೀನೆಂದರೆ ಆಸೆಯಲ್ಲ..
ಆಕರ್ಷಣೆಯೂ ಅಲ್ಲ
ನೀನೆಂದರೆ ಮೋಹವಲ್ಲ..
ವ್ಯಾಮೋಹವೂ ಇಲ್ಲ
ನೀನಂದರೆ ಮನದಲ್ಲಿ ಮೂಡಿದ ಮಧುರ ಭಾವನೆ
ಆತ್ಮದಲ್ಲಿ ಒಂದಾದ ದಿವ್ಯ ಕಲ್ಪನೆ
ಪಡೆಯುವ ಹಂಬಲವಿಲ್ಲ..
ಕಳೆದು ಕೊಳ್ಳುವ ಭಯವಿಲ್ಲ
ಈ ನನ್ನ ಆರಾಧನೆ ನಿನಗಲ್ಲದೇ ಇನ್ಯಾರಿಗೂ ಇಲ್ಲ
ಎಮ್.ಎಸ್.ಭೋವಿ...✍️
.
..
ಬರೆದರು ಮುಗಿಯದ ನೀನೊಂದು ಅಧ್ಯಾಯ
ನಿನ್ನ ಮೊಗದ ಅಂಧವ ಹೊಗಳುವ ಆಶೆ,
ನೀಲಿ ಬಾನಿನ ಆ ಹಣೆಗೆ ಚಂದ್ರನಂತೆ
ಬಿಂದಿ ಇಡುವೆಯಾ...?
ಪದಗಳೇ ಸಿಗದ ಈ ನನ್ನ ಭಾವನೆಯ
ಹೇಗೆ ವರ್ಣಿಸಲಿ ಎಂದು ತಿಳಿಯುತ್ತಿಲ್ಲ,
ನಿನ್ನ ಮನದ ಕೊಂಚ ಪ್ರೀತಿಯ ನೀಡುವೆಯಾ...?
ಎಮ್.ಎಸ್.ಭೋವಿ...✍️
ಕೂಗಿದರು ಕೆಳದಷ್ಟು ದೂರ ಸಾಗಿರುವೇ
ಸಂತೋಷವಾಗಿದ್ದ ಮನಸಲ್ಲಿ ನೋವು
ತುಂಬಿ ಹೋಗಿರುವೆ
ನೀನು ದೂರವಾಗಿದ್ದರೂ ನಿನ್ನ ನೆನಪುಗಳಿಂದ
ನನ್ನ ಮನಕ್ಕೆ ಹತ್ತಿರವಾಗಿರುವೆ
ಮತ್ತೊಮ್ಮೆ ಕೈ ಚಾಚಿ ಬೇಡುತ್ತಿರುವೇನು
ಮತ್ತೊಮ್ಮೆ ಬಿಟ್ಟಿರುವ ಕೈ ಹಿಡಿದು ನನ್ನ
ಜೊತೆ ಬರುವೆಯಾ ಗೆಳತಿಯಾಗಿ...
ಎಮ್.ಎಸ್.ಭೋವಿ...✍️
.
..
ಬಿಳಿ ಕೆನ್ನೆಯ ಗುಳಿ ನಗೆಯ ಓ ಬಾಲೆ,
ಮನದ ತುಂಬೆಲ್ಲಾ ಮೂಡುತಿದೆ
ನಿನ್ನದೇ ಖಾಯಿಲೆ...!
ನಿನ್ನ ಪ್ರತೀ ನಡಿಗೆಯ ಮುಂದೆ ಹೂವ ಹಾಸಲೇ,
ಸಾಗುವ ಹೆಜ್ಜೆಯ ಹಿಂದೆಲ್ಲಾ
ಪನ್ನೀರ ಚೆಲ್ಲಲೇ...!
ನನ್ನೆದೆಯ ಪುಟದಲ್ಲಿ ನಿನ್ನ ಪಠವೊಂದ ಚಿತ್ರೀಸಲೇ,
ನನ್ನೀ ಮುಗ್ಧ ಪ್ರೀತಿಗೆ ನಿನ್ನದೇ ಕರೆಯೋಲೆ...!
ಎಮ್.ಎಸ್.ಭೋವಿ...✍️
ಎಲ್ಲಿಯ ಬಂಧ, ಎಲ್ಲಿಯ ಬಾಂಧವ್ಯದಾ ಕಾಂತ,
ಬಂಧ ಬಾಂಧವ್ಯಕೂ ಮಿಗಿಲಾದುದು ಏಕಾಂತದಾ ಹಂತ,
ಬಂಧ ಬಾಂಧವ್ಯದ ಬಂಧನವಳಿದ ಮೇಲೆ,
ತೋರದಿಹುದೆ ಏಕಾಂತವದು ತನ್ನ ಕರಿ ಛಾಯೆಯಾ ಲೀಲೆ?,
ಏಕಾಂತವಳಿದು ಬಂಧದ ಬಂಧನಕ್ಕೆ ಸಿಲುಕಿದ ಮೇಲೂ,
ಸಮಯ ಸಾಲದು ಏಕಾಂತವದು ಮರಳಿ ತನ್ನ ಜಾಗಕ್ಕೆ ಬರಲು,
ಅನಿಸಬಹುದು ಇದು ಬರಿಯ ಸೊಲ್ಲು,
ಎಲ್ಲರಿಗೂ ಸುಲಭವಲ್ಲ ಈ ಕವನ ಅರ್ಥೈಸಲು,
ಏಕೆಂದರಿದರ ಸಂಪೂರ್ಣ ಭಾವ, ಅರಿತು ಬರೆದವನ ಮನಕೆ ಮೀಸಲು.....