ಇರಬೇಕು ಒಬ್ಬಳು ಸ್ನೇಹಿತೆ ಅಳುವಾಗ ನಗಿಸಲು
ಇರಬೇಕು ಸ್ನೇಹಿತೆ ಮನದ ಮಾತಿಗೆ ಕಿವಿಗೊಡಲು
ಇರಬೇಕು ಸ್ನೇಹಿತೆ ಎಷ್ಟೇ ದೂರ ಇದ್ದರೂ ಸನಿಹವೇ ಇದ್ದಾಳೇನೋ ಅನ್ನುವ ನಂಬಿಕೆ ಹುಟ್ಟಿಸುವಂತೆ
ಇರಬೇಕು ನಮ್ಮಿಬ್ಬರ ದೂರವಾಣಿ ಸಂಭಾಷಣೆ
ಇರಬೇಕು ಒಬ್ಬಳು ಸ್ನೇಹಿತೆ ನಾ ಬಯ್ಯುತ್ತಿದ್ದರು ಅದೇನೋ ಅವಳಿಗೆ ಕೇಳಲು ಇಂಪಾದ ಸಂಗೀತವೆನಿಸುವಂತೆಅವಳು ಬೀರುವ ಕಿರುನಗು
ಇರಬೇಕು ಒಬ್ಬಳು ಸ್ನೇಹಿತೆ ನಾ ಹೇಳಿದ ಮಾತನ್ನು ಅವಳು ಮಾತ್ರ ಕೇಳಿ ಆ ವಿಷಯಗಳ ಇನ್ನೊಬ್ಬರಿಗೆ ಹಂಚದೆ ಮನಸ್ಸಿನಲ್ಲೇ ಸಮಾಧಿ ಮಾಡುವ ಅವಳ ಗುಣ ಅದು ಅವಳ ಹಿರಿಮೆಗೆ ಹಿಡಿದ ಕನ್ನಡಿ
ಇದು ನನ್ನ ಸ್ನೇಹಿತೆಯೋರ್ವಳ ಗುಣ ಸ್ವಭಾವ
ಅವಳು ನನ್ನ ಅಚ್ಚುಮೆಚ್ಚಿನವರ ಪಟ್ಟಿಯಲ್ಲಿ ಮೊದಲು ನಿಲ್ಲುವ ಗೌರವ ಅತಿಥಿ...
❤️❤️
ಕತ್ತಲೆ ಕವಿದ ಈ ಮನವು
ದಿಕ್ಕನ್ನು ತೋಚದೆ ಹೊರಟಾಗ
ನಿಸರ್ಗದ ಮಡಿಲು ಕರೆದಿತ್ತು
ಅಲೆಗಳ ಅಬ್ಬರ ಜೋರಿತ್ತು
ಮೆಲ್ಲನೆ ಗಾಳಿಯು ಬೀಸಿತ್ತು
ನಿನ್ನ ಭೇಟಿಯ ಜಾಗವು ಅಲ್ಲಿತ್ತು
ನಿನ್ನ ಬಿಂಬದ ಚಿತ್ರವು ಬಿಡಿಸಿತ್ತು
ಆ ಚಿತ್ರಕ್ಕೆ ಉಸಿರನ್ನು ತುಂಬಿತ್ತು
ಪಕ್ಕಕ್ಕೆ ನನ್ನನ್ನು ಸರಿಸಿತ್ತು
ಕತ್ತಲೆ ಕವಿದ ಈ ಮನದಿ
ಅನುರಾಗದ ಅಲೆಯು ಉಕ್ಕಿತ್ತು
ನಾ ಕಲಿತ ಕನ್ನಡ ಶಾಲೆ
ಮತ್ತೊಮ್ಮೆ ನೋಡೋಣ ಬಾಲೆ...
ಸುತ್ತಲೂ ಚಿತ್ರಗಳ ಕಲೆ
ಎಂಥ ಅದ್ಭುತ ಛಾಯೆ.....
ನಾನರಿತ ಅಕ್ಷರಗಳ ಸಾಲೆ
ಜೀವನಕ್ಕೆ ಸ್ಫೂರ್ತಿಯ ಮಾಲೆ....
ಪರೀಕ್ಷೆ ಎಂಬ ಕಠಿಣ ಅಲೆ
ಪಾಸಾದರೆ ಜನ ಮೆಚ್ಚುವರು ಭಲೇ....