ನಿನ್ನ ಕುಡಿ ನೋಟದಲ್ಲೇ ನನ್ನ ಸೆಳೆದೆ..
ನೀ... ಈ ಮನದಲ್ಲಿ ಸೆರೆಯಾದೆ..
ನೀನೆ ನನ್ನ ಆಕರ್ಷಣೆ...
ನಾನು ಹೀಗಾಗಿರಲು ನೀನೆ ಹೊಣೆ..
ನಿನ್ನ ಸನಿಹವಿರುವೆ ಸಹಕರಿಸು...
ಬೇಡವೆಂದರೂ ದೂರಾಗೆನು ಅನುಮತಿಸು..
ಬಡಪಾಯಿ ಹೃದಯವಿದು..
ನಿನ್ನನೆ ನೆಚ್ಚಿಹುದು..
ತುಸು ಕರುಣೆ ತೋರು..
ಎಂದೂ ಜೊತೆಯಾಗಿರು...
ನೀನು ಕಣ್ಣಾದರೆ ನಾನು ಕಣ್ಣ ರೆಪ್ಪೆಯಾಗಿ ಕಾಯುವೆ,
ನಿನ್ನ ಕಾಲ ಪಾದುಕೆಯಾಗಿ ರಕ್ಷಿಸುವೆ.
ಕರವ ಜೋಡಿಸಿ ಕೆಳುವೇನು,
ಮಂಡಿಯೂರಿ ಬೇಡುವೆನು,
ಒಂದು ಅವಕಾಶ ನೀಡು ನೀನು,
ಒಪ್ಪಿದರೆ ಹೂವು ಮುಡಿಸಿ ಬರಮಾಡಿಕೊಳ್ಳುವೆ,
ಇಲ್ಲದಿದ್ದರೆ ಕಣ್ಣೀರಲ್ಲಿ ಕಲ್ತೊಳೆದು ಬೀಳ್ಕೊಡುವೆ.
ನಾ ಬರೆದ ನೂರೊಂದು ಕವನ
ಅದು ಸೆಳೆಯಿತು ಹಲವರ ಗಮನ
ಕೆಲವರು ತೋರಿದರು ಸಹಕಾರ
ಅದರಲ್ಲಿತ್ತು ಪ್ರೀತಿಯ ಮಮಕಾರ
ಇನ್ನು ಕೆಲವರು ಬೀರಿದರು ಮಂದಹಾಸ
ಅದರಲ್ಲಿತ್ತು ದ್ವೇಷದ ಅಪಹಾಸ್ಯ
ನಾ ಅರಿತರು ಅರಿಯದಂತೆ ಸಾಗಿದೆ
ಏಕೆಂದರೆ ನನಗಿಲ್ಲ ಇದರಿಂದ ಯಾವುದೇ ಚಿಂತೆ
ನಾ ನೀಡಲಿಲ್ಲ ನನ್ನ ಕವನಕ್ಕೆ ವಿರಾಮ
ಕೊನೆಗೆ ಅವರೇ ನೀಡಿದರು
ಅಪಹಾಸ್ಯಕ್ಕೆ ಪೂರ್ಣ ವಿರಾಮ.....
ನಾ ಬರೆದ ಸುಂದರ ಕವನ
ಸೇರಿತಲ್ಲ ಎಲ್ಲರ ಮೈಮನ
ಖುಷಿಗಾಗಿ ಬರೆದ ಕವನ
ಮತ್ತೊಮ್ಮೆ ಬರೆಯೆಂದರಲ್ಲ ಜನ
ಯಾರಿಗಾಗಿ ಬರೆದಿಲ್ಲ ಕವನ
ಯಾರಿಗಾಗಿ ಅರ್ಪಿಸಿಲ್ಲ ಮನ
ನಾ ಬರೆದೆ ಕೇವಲ ಕಲ್ಪನೆಯ ಕವನ
ಆದರೂ ವಾಸ್ತವದಂತಿತ್ತು ಕವನ......