Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಂದು ಇರದ ಭಾವ

ಮತ್ತೇ ತರುವೆ ಆಸೆಯ ಬಗೆ ದೂರ ತೀರಕೊಯ್ಯುವೆ

ಇಂದು ಇರದ ರಾತ್ರಿಯ ಕಳೆಯಲಾರೆ ಭಾವವೇ

ಮುಖ ಸುಂದರ ಒಲವಿನ ಬಂಧುರ ಈ ನನ್ನ ಚಂದಿರ

ಸುಖ ಹೊತ್ತಿಹ ಸಖ ನೀನಾಗಿ ಬರುವೆ ಎನಗೆ ಹತ್ತಿರ

ನಿನ್ನೆ ನಾಳೆಗಳನು ನೆನೆಯದೆ ಇಂದು ಬಾ ನಾವೆ ನಾವಾಗುವ

ಗಾಳಿ ಬೆಳಕು ನಾವಾಗಿ ಕೂಡಿ ದಿನಗಳನು ಕಳೆಯುವ

_ಶಶಿಜಿತ್

- m Jithendra_ಶಶಿಜಿತ್

26 May 2023, 10:34 pm

ದೂರವಿರದ ಕಾರಣ

ಮರೆಯದಲೆ ಹಾಡು ನಾ ಮೆಚ್ಚುವ ಹಾಡು
ಮೂರೊಂದಾರಾದರೂ ನಾ ಮರೆಯದ ಹಾಡು

ಹೊಸ ಭಾಷೆ ಹೊಸ ಪ್ರೀತಿ ಹೊಸ ರೀತೀ ಈ ಹರೆಯಕೆ
ಅನುಗಾಲವಿರಲಿ ಈ ನೀತಿ ಈ ಕೃತಿ ಈ ಬಂಧನಕೆ

ದೂರವಿರದ ಕಾರಣದ ಮೂಲವ ಹುಡುಕಲು
ಕಳೆಯಬೇಡ ಕೂಡಿಡು ವೇಳೆಯ ಬಹು ಹೊತ್ತಲು

ಅತಿ ಬೆಸುಗೆಯ ನವಿರಾದ ಭಾವದ ಹೊಸ ಬಗೆ
ಇರಲಿ ಮೊಗ್ಗೆರಡು ನವ ಕುಸುಮಗಳಾಗುವ ಹಲ ಬಗೆ

_ಶಶಿಜಿತ್

- m Jithendra_ಶಶಿಜಿತ್

25 May 2023, 10:11 pm

ಬಣ್ಣ ಬಣ್ಣದ ಮನಸ್ಸುಗಳು ....ಸುಧಾ ಅರ್ ಬಳಿಗೇರ್

ಒಮ್ಮೆ ೧ದು ಹರಳಿದ ಗುಲಾಬಿ .....
ಬಾಡಿದ್ದ ೧ದು ಗುಲಾಬಿಯನ್ನ ಹೀಗೆ ಕೇಳಿತು....
ನಿನ್ನ ಸೌಂದರ್ಯ ನೋಡು ಹೇಗೆ ಬಾಡಿ ಮಣ್ಣಿನ ಬಣ್ಣ ಬಂದಿರುವೆ ......

ಆದರೆ ನನ್ನ ನೋಡು .....ಹೇಗೆ ಯವ್ವನ ತುಂಬಿ ಬಣ್ಣ ಬಣ್ಣದಿಂದ ಹರಳಿರುವೆ ಯಂತ ಪ್ರೇಮಿಯು ನನ್ನ ಸೌಂದರ್ಯಕ್ಕೆ ಸೋಲಲೇಬೇಕು ಎಂದು ಹೇಳಿತು.......

ಹೌದು ನಿಜವೇ ನಿನ್ನ ಸೌಂದರ್ಯಕ್ಕೆ ಯಾರಾದರೂ ಸೋಲಲೇ ಬೇಕು ಎಂದು ಅ ಬಾಡಿದ ಗುಲಾಬಿ ಹೇಳಿತು ....ಹಾಗೆ ೧ದು ಮಾತುಕುಡ ಹೇಳಿತು .....

ಬಾಡಿದ್ದ ಗುಲಾಬಿ.....ಇಂದು ಮುಂಜಾನೆಯೇ ದಾರಿಹೋಕನೊಬ್ಬ ಆಗತಾನೇ ಹರಳಿದ್ದ ನನ್ನ ಚೆಲುವಕಂಡು ನನ್ನ ಕಿತ್ತು ತಾನು ಪೂಜಿಸುವ ದೇವರ ಮುಡಿಯಲ್ಲಿ ಇಟ್ಟು ಪೂಜಿಸಿದ... ೧ದು ದಿನವೆಲ್ಲ ಆ ದೇವರ ಮುಡಿಯಲ್ಲಿ ಇದ್ದು ನನ್ನ ಕರ್ಮವೇಲ್ಲ ಕಳೆಯಿತು ....ಆದ್ದರಿಂದ ನಾನು ಇಂದು ಮುಂಜಾನೆ ಬಾಡಿ ಮತ್ತೆ ಬೇರೊಂದು ಗಿಡದ ಬದಿಯಲ್ಲಿ ಇರುವೆ .... ಈ ಜನುಮದಲ್ಲಿ ಇಷ್ಟು ಸಾಕು ಸಂತೋಷದಿಂದ ಮಣ್ಣಲ್ಲಿ ಮಲಗುವೆ ......

ಬಾಡಿದ ಹೂವಿನ ಮಾತು ಕೇಳಿದ ಹರಳಿದ ಹೂವು
ತಲೆ ಕೆಳಗೆಮಾಡಿ ಸುಮ್ಮನಾಯಿತು ......
ಅದೇ ಸಮಯಕ್ಕೆ ಅಲ್ಲಿಗೆ ಪ್ರೇಮಿಗಳು ಬಂದರು ಹರಳಿದ ಅ ಹೂ ನ ಕಿತ್ತು ....ಪ್ರಿಯತಮ ತನ್ನ ಪ್ರೇಯಸಿಯ ಮೂಡಿಯಲ್ಲಿ ಇಟ್ಟ ಕೋಪದಲ್ಲಿ ಇದ್ದ ಪ್ರೇಯಸಿಯು ಆ ಹೂವನ್ನ ಕಿತ್ತು ಕಾಲಿನಲ್ಲಿ ಹೊಸಕಿದಳು .....

ಕಣ್ಣೀರು ಇಡುತ್ತಾ ಆ ಹರಳಿದ ಹೂವು ನನ್ನ ಕರ್ಮ ಇನ್ನು ಮುಗಿದಿಲ್ಲ ಎಂದು ಆ ಬಾಡಿದ್ದ ಹೂವಿನತ್ತ ನೋಡುತ್ತಾ ಮಣ್ಣು ಸೇರಿತು.......

ಬಣ್ಣ ಬಣ್ಣದ ಮನಸ್ಸುಗಳು.....

ಸುಧಾ ಆರ್ ಬಳಿಗೇರ್ .....



- ಸುಧಾ ಆರ್ ಬಳಿಗೇರ

25 May 2023, 05:25 pm

ನನ್ನವಳು

ಒಲವಿನ ಗೆಳತಿ..
ನೆನಪುಗಳ ಒಡತಿ..
ಸ್ನೇಹಕೆ ಸಂಗಾತಿ..

ಹೃದಯಕೆ ಸನಿಹ ಇವಳು..
ಮನದ ಹಂಬಲಕೆ ಕಾರಣಳು..
ಕವನಗಳಿಗೆ ಸ್ಫೂರ್ತಿ ನನ್ನವಳು...


ಕಾರಣವಿಲ್ಲ ಇವಳ ಪ್ರೀತಿಸಲು..
ಪದಗಳು ಸಾಲದು ಬಣ್ಣಿಸಲು..
ನನ್ನವಳು ಚಂದ ನಾಚಲು..


ನೀಲಿ ಕಣ್ಣ ಚೆಲುವೆ ಅವಳು..
ಮುದ್ದಾದ ಮುಂಗುರುಳು...
ಜಗವನೆ ಮರೆವೆ ಅವಳು ನಗಲು..



ತನುಮನಸು ✍️

- Tanuja.K

25 May 2023, 03:21 pm

ಎಲ್ಲರಂತಲ್ಲ ನನ್ನ ಅಪ್ಪ .... ಸುಧಾ ಆರ್ ಬಳಿಗೇರ್

ಅಪ್ಪ ಎಂದರೆ ಜನುಮಕ್ಕೆ ಕಾರಣ ಮಾತ್ರವಲ್ಲ
ಅಳುವಾಗ ಮಗುವ ಹೆಗಲಲ್ಲಿಹೊತ್ತು ಕುಣಿಸುವುದು ಅಲ್ಲ.....

ನಡೆಯೋದ ಕಲಿವಾಗ ಕೈಹಿಡಿದು ನಡೆಸೋದು ಮಾತ್ರವಲ್ಲ....
ಓದುವ ಸಮಯದಲ್ಲಿ ಗುರುವಾಗಿ ಕಲಿಸೋದು ಹೊಸದೇನು ಅಲ್ಲ.....

ನಾ ಗೆದ್ದು ಬಂದಾಗ ಖುಷಿಯಲ್ಲಿ ಹಿಗ್ಗೋದು ಬೇಕಿಲ್ಲ ...
ನೊಂದ ಸಮಯದಲ್ಲಿ ಕಣ್ಣೀರ ಒರೆಸಿದರು ಸಾಲಲ್ಲ....

ಆದರು ಎಲ್ಲರಂತಲ್ಲ ನನ್ನ ಅಪ್ಪ

ಸುಧಾ ಆರ್ ಬಳಿಗೇರ್......






- ಸುಧಾ ಆರ್ ಬಳಿಗೇರ

24 May 2023, 12:03 am

ಮೌನವೇ ಮಾತು ಆದಾಗ ?.... ಸುಧಾ ಆರ್ ಬಳಿಗೇರ್

ಹೂ ಮೌನವಾದಗ ಕೇಳುವುದು ದುಂಬಿಯ
ಹಾಡಿನ ಸ್ವರ ....
ಪುಸ್ತಕವು ಮೌನವಾದಗ ಲೇಖನೆಯ ಪದಗಳದೆ
ಇನ್ನಿಲದ ಅಬ್ಬರ ....

ಮೌನವೇ ಮಾತು ಆದಾಗ....

ರೆಪ್ಪೆಗಳು ಮೌನವಾದಗ ಒಳಗಿರೋ ನಿನ್ನ
ಬಿಂಬವೆ ಅದಕ್ಕೆ ಉತ್ತರ....
ಮಾತು ಮೌನವಾದಗ ಹೃದಯವು
ಪಿಸುಗುಟ್ಟುತ್ತಿದೆ ನೀ ಇರಲು ನನ್ನ ಹತ್ತಿರ....

ಮೌನವು ಮಾತು ಆದಾಗ....

ಸುಧಾ ಆರ್ ಬಳಿಗೇರ್ .....

- ಸುಧಾ ಆರ್ ಬಳಿಗೇರ

24 May 2023, 12:01 am

ನೀನೆಂದರೆ ಪ್ರೀತಿ ತಾನೆ ..... ಸುಧಾ ಆರ್ ಬಳಿಗೇರ್

ಮೊದಲ ಮಾತು ಮರೆತಿಲ್ಲ ಕೇಳು...
ಮೀಡಿದ ಪ್ರೀತಿ ನೆನಪಾಯಿತ್ತು ಹಗಲು ಇರುಳು...
ಮರೆತೇನೆಲ್ಲ ನನ್ನ ಮಾತು ಎದುರಲ್ಲಿ ನೀ ಇರಲು...

ನೀನೆಂದರೆ ಪ್ರೀತಿ ತಾನೆ.....

ಕಡೆದೇ ಶಿಲೆಯೊಂದ ನನ್ನೊಳಗೆ ನನ್ನತೇಮುಡಿರಲು...
ಉಸಿರಾಡೋ ಆಸೆ ಅದಕೇ ಚುಂಬಿಸಿ
ನೀಡು ತಾ ತನ್ನವುಸಿರಮೊದಲು...
ಕಣ್ಣೊಳಗೆ ಸದ ನಿನ್ನದೆ ಪ್ರತಿಬಿಂಬ ತುಂಬಿರಲು...

ನೀನೆಂದರೆ ಪ್ರೀತಿ ತಾನೆ ....


ನೀನೆಂದರೆ ಪ್ರೀತಿ ತಾನೆ
ಸುಧಾ ಆರ್ ಬಳಿಗೇರ್.....




ನೀನೆಂದರೆ ಪ್ರೀತಿ ತಾನೆ.....

- ಸುಧಾ ಆರ್ ಬಳಿಗೇರ

23 May 2023, 11:16 pm

ಇರುವೆ_ನೀನಿರುವೆ_ ನನ್ನಿರುವಿನಾ_ಥರವೇ

ಕರಿಯಾ ಇರುವೆ ನಿನ್ನ ಕರೆಯುತಿರುವೆ
ಮರೆಯಬೇಡೆಂದು ನೀ ಹೇಳುತಿರುವೆ

ಎಲ್ಲಿ ಅವಿತು ಕುಳಿತಿರುವೆ
ಎಲ್ಲಿಂದ ನೀನು ಬರುತಿರುವೆ

ದೃಢ ಸಂಕಲ್ಪದಿ ನೀ ಮೆರೆಯುತಿರುವೆ
ಸದೃಢ ಮನದಿ ನೀ ಮೇಲೇರುತಿರುವೆ

ಬವಣೆ ಮೆಟ್ಟಿ ನೀ ಕಷ್ಟಗಳನ್ನಟ್ಟುತ್ತಿರುವೆ
ನವಣೆ ಸಕ್ಕರೆ ನೀ ಮೆಲ್ಲುತ್ತಿರುವೆ

ಕಷ್ಟಕಾಲಕ್ಕೆ ನೀ ಕೂಡಿಡುತ್ತಿರುವೆ
ನಷ್ಟವಾಗದಂತೆ ನೀ ಜೀವ ತಡೆಯುತ್ತಿರುವೆ

ಅಷ್ಟೂ ಭಾರವನ್ನ ನೀ ಹೊತ್ತಿರುವೆ
ಸ್ಪಷ್ಟ ಬದುಕಿಗೆ ನೀ ಮಾದರಿಯಾಗಿರುವೆ

_ಶಶಿಜಿತ್



- m Jithendra_ಶಶಿಜಿತ್

23 May 2023, 09:44 pm

ನಿನ್ನೆಡೆಗೆ

ನಿನ್ನ ನೆನೆದಷ್ಟು ಮುಗುಳ್ನಗುವು
ನಕ್ಕಷ್ಟು ಸುಂದರ ಈ ಜಗವು
ನೆನಪುಗಳ ತೊಟ್ಟಿಲಲಿ
ನಮ್ಮೊಲವಿಗೆ ಜೋಜೋ ಲಾಲಿ....

ನಿನ್ನೆಡೆಗೆ ನಡೆದಷ್ಟು ದೂರ
ಹೂವಾಯ್ತು ಹೃದಯ ಪೂರ
ಮನವ ತಬ್ಬಿರಲು ಪ್ರೀತಿ
ಏಳುಬೀಳೆಲ್ಲ ಸೊನ್ನೆಯ ರೀತಿ.....

- ಶ್ರೀಕಾವ್ಯ

22 May 2023, 10:00 pm

ಸಾವಿರದ ಜನುಮವ ದಾಟಿ



ಸಾವಿರ ಜನುಮವ ದಾಟಿ ಬಂದೆ ನಾ ನಿನ್ನಯ ನೋಡಲು

ಸಾಕಾರವಾಯ್ತು ಸೇರಿದ ಮೇಲೆ ಕಂಡೆನು ನಾ ನಿನ್ನಯ ಒಡಲು

ಆಕಾರವಾದೆ ಅವಕಾಶವಾದೆ ಆಧಾರವಾದೆ ಬಾಳನು ಬೆಳಗಲು

ಸಾವಕಾಶದಲಿ ಭಾವಾಕಾಶದಲಿ ಪ್ರತಿಕ್ಷಣದಲಿ ನಿನ್ನಯ ಕಾಣಲು

ಉತ್ತಮವಾಯ್ತು ಉತ್ತರವಾಯ್ತು ಬಾಳಿದು ವರ ಬೆಳಗಲು

ಸುತ್ತಲೂ ಮತ್ತೇ ಕವಿದಿದೆ ಮೋಡ ಬಾಯಾರಿದ ಭುವಿಗೆ ಬರಲು

_ಶಶಿಜಿತ್

- m Jithendra_ಶಶಿಜಿತ್

21 May 2023, 11:02 pm