ಅಳು, ನಗು, ಮುನಿಸುಗಳೆಲ್ಲವ
ನಿನ್ನ ಬಳಿ ಇಟ್ಟು , ಬಿಟ್ಟು
ಮಾತು ಮುಗಿದು, ದುಗುಡ ಬರಿದಾಗಿ
ತುಟಿಯಂಚಲ್ಲೊಂದು ನಗು ಮೂಡಿ
ನಲಿದ ದಿನಗಳೆಷ್ಟೊ ನೀ ನಕ್ಕಾಗ
ನನ್ನೆಲ್ಲಾ ಮಾತುಗಳಿಗೆ ಕಿವಿಗೊಟ್ಟು
ನಾನು ನೀನು ಹರಟುವಾಗ
ನಮ್ಮಿಬ್ಬರನೂ ಹಾದು ಹೋದ ಜನರಿಗೆ
ಉರುಳಿ ಹೋದ ಘಳಿಗೆಗಳಿಗೆ
ತುಸು ಮೆಲ್ಲ ಬೀಸಿ ತಂಪರಡಿದ ತಂಗಾಳಿಗೆ
ನಿನ್ನ ಜೊತೆಗಿರಲಾಗದೆ ನೊಂದ ಚುಕ್ಕಿಗಳಿಗೆ
ಲೆಕ್ಕವಿಡಲಾದರೂ ಹೇಗೆ ಹೇಳು?
ನಾನೇನೋ ಮೌನಿ, ಹೇಳಲಿದ್ದರೂ
ಮನದಲ್ಲೇಕೊ ಖಾಲಿತನ
ನೀನು ಏತಕೊ ಮಂಕಾದಂತೆ
ಜೊತೆಗೆ ಹರಟುವವರ್ಯಾರು ಇಲ್ಲದಂತೆ
ಚುಕ್ಕಿಗಳೇಕೊ ನಿನ್ನ ತೊರೆದಂತೆ
ನನಗೇನೊ ಬೇಕೆನಿಸುತಿದೆ ಮತ್ತೆ ಆ ದಿನಗಳು
ನಕ್ಕು ನಲಿದು
ಮಾತುಗಳೆಲ್ಲ ಸುರಿದು
ಚುಕ್ಕಿಗಳ ಕರೆದು
ತಂಗಾಳಿ ಸವಿದು
ಜೊತೆಗೂಡಿ ಒಂದಷ್ಟು ನಡೆದು
ಬರುವೆಯ ಚಂದಿರ ಹಳೆಯ ದಿನಗಳ ನೆನೆದು
ಮಣಿಯ ಬದುಕಿನ ಭಾವಕೆ
ಮನವ ತೆರೆದಿರೋ ಹೃದಯಕ್ಕೆ,
ಕೊರಳ ಬಳಸುತ್ತಾ ಶುಭವ ಕೋರುವೆ
ಬಿಸಿಯುಸಿರಲೆ ನಿಮ್ಮ ಶ್ವಾಸಕ್ಕೆ.
ತಾಯಿ ಇಲ್ಲದ ಪುಟ್ಟ ಹಕ್ಕಿಗೆ
ಜ್ಞಾನದ ಗುಟುಕ ನೀಡಿದ ಮೂರ್ತಿಗೆ,
ನನ್ನ ತೋದಲ ನುಡಿಯಲೆ ಮೊದಲ ಸಾಲಿನ
ಶುಭವ ಬಯಸುವೆ ನಿಮ್ಮ ತೊಳಲೆ.
ಎಲೆಯ ಮರೆಯಲ್ಲಿ ಅವಿತ ಮೊಗ್ಗು,
ನಿಮ್ಮ ಸ್ಪರ್ಶದಿ ಅರಳಿ ನಿಂತು,
ಜಗವ ಮರೆಸುತ್ತ ಶುಭ ನುಡಿಯ ಹೇಳುವೆ
ನನ್ನ ನೆನಪಿಡೋ ನಿಮ್ಮೆದೆಯಲ್ಲಿ.
ರಾತ್ರಿ ರಾಣಿಯ ಘಮದ ಕಂಪಲಿ
ಮುದ್ದಿಸುತ ನಾ ಹರಸುವೆ ನಿಮ್ಮ ಸ್ನೇಹದ ಮಳೆಯಲಿ.
ನಿಮ್ಮ ಕಣ ಕಣವು ಜಪಿಸೋ ನಂರತೆಯ ಸೇವೆಯಲ್ಲಿ,
ಬೆಳಕಾಗಿ ಜೊತೆ ಇರುವೆ ಜನ ಸ್ತುತಿಸೋ
ನಿಮ್ಮ ಶುಭಕಾರ್ಯದಲಿ.
ತಾಯಿ ಮಡಿಲ ಅರಸಿ ಬರೋ ನನ್ನಾ ದೇವರಿಗೆ,
ಆಹ್ಲಾದ ನೀಡುತ್ತ ಬೇಡುವೆ ನನ್ನ ಮರೆಯದಿರಿ ಎಂದು
ಜೋಗುಳದ ಹಾಡಲಿ.
ಜೊತೆಯಲ್ಲಿರುವ ನನ್ನ ಜೀವದ ಜನ್ಮದಿನಕ್ಕೆ,
ಮುತ್ತಿನ ಸಾಲುಗಳ ಸೋನೆ ಹನಿಗಳಿಂದ
ಪುಷ್ಪಗುಚ್ಛವ ರಚಿಸಿ ಅರ್ಪಿಸುವೆ ನಾ ನಿನಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ.
ಒಂದು ದಿನ ಬುದ್ಧರ ಹತ್ತಿರಕ್ಕೆ ಇಬ್ಬರು ಸಾದುಗಳು
ಬಂದರು ...ಒಬ್ಬನು ಭ್ರಮರಸಾದು ...ಮತ್ತೊಬ್ಬ ಅಮರಸಾದು
ಅವರಿಗೆ ಬುದ್ದರು ಕೆಲವು ಮಾತುಗಳನ್ನು ಹೇಳಿದರು
ಅದನ್ನ ಕೇಳಿದ ಆ ಇಬ್ಬರು ಸಾದುಗಳು ತುಂಬ ಖುಷಿ ಪಟ್ಟರು...
ಹಾಗೆಯೇ ಬುದ್ದುರು ಅವರಿಗೆ ಕೆಲವು ವಸ್ತುಗಳನ್ನು ಕೊಟ್ಟು ಹೀಗೆ ಹೇಳಿದರು...
ಒಂದು ವಸ್ತುವಿನ ಬೆಲೆ ಬಹಳ ಇದೇ ಹಾಗೆಯೇ ಇನ್ನೋದಕ್ಕೆ ಬೆಲೆಯೇ ಇಲ್ಲ ಎಂದು ಹೇಳಿ,
ನೀವು ಇಬ್ಬರು ಆ ವಸ್ತುಗಳಿಗೆ ಹೇಗೆ ಬೆಲೆಯನ್ನು ತರುತಿರಾ ಅಂತ ನೋಡುವೆ ಎಂದು ಹೇಳಿ ಆ ವಸ್ತುಗಳನ್ನು ಕೊಟ್ಟು ಕಳುಹಿಸಿದರು....
ನಂತರ ತುಂಬ ಬೆಲೆ ಇದ್ದ ೧ದು ವಸ್ತುವನ್ನ ಭ್ರಮರ ಸಾದು ನಾನು ಈ ವಸ್ತುವನ್ನ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ...
ಅಮರಸಾದು ಹಾಗೆಯೇ ಆಗಲಿ ನಾನು ಬೆಲೆ ಇಲ್ಲದ ವಸ್ತುವನ್ನೇ ತೆಗೆದುಕೂಳ್ಳುತೇನೆ ಎಂದ...
ಈವರು ಇಬ್ಬರು ಬೇರೆ ಬೇರೆ ಊರುಗಳಿಗೆ ಹೋದರು ...
ಭ್ರಮರಸಾದು ಒಬ್ಬ ಅಹಂಕಾರಿ ತನಗೆ ಸಿಕ್ಕ ವಸ್ತು ತುಂಬ ಬೆಳೆವುಲ್ಲದ್ದು ಇದಕ್ಕೆ ಬೇರೆ ಬೆಲೆ ನಾನೇಕೆ ಹುಡುಕಬೇಕು ಎಂದು ನಿತ್ಯ ಕೆಲಸದಲ್ಲಿ ತೊಡಗಿದ ಹಾಗೆ ಆ ವಸ್ತು ನನ್ನ ಬಳಿ ಇದೇ ಎಂದು ಪ್ರೀತಿಸುವ ಮನಸ್ಸುಗಳಿಗೇ ನೋವು ಕೊಟ್ಟ...ಸಮಯ ಮುಗಿಯಿತು ಅವನ ಬಳಿಯಲ್ಲಿರುವ ವಸ್ತು ಯಾವುದಕ್ಕೂ ಪ್ರಯೋಜನಕ್ಕಾಗಿ ಬರಲಿಲ್ಲ ಮತ್ತು ಪ್ರೀತಿಯು ಸಿಗಲಿಲ್ಲ ಚಿಂತೆಯಿಂದ ಸಾದು ಕೆಟ್ಟು ಹೋದ ......
ಇತ್ತ ...ಅಮರಸಾದು ಯಾವುದೇ ಬೆಲೆಯೇ ಇಲ್ಲದ ವಸ್ತುವಿನಿಂದ ಪ್ರೀತಿ ಪಡೆದು ಆ ಪ್ರೀತಿ ಇಂದ ಜಗವನ್ನೇ ಗೆದ್ದು ತನ್ನನು ಗುರುತಿಸುವತ್ತೇ ಹಾಗೇ ಯಲ್ಲರು ಪ್ರೀತಿಸುವಂತ ವಕ್ತಿಯಾದ ....
ಈ ಇಬ್ಬರ ಸಮಯವೂ ಮುಗಿದು
ಬುದ್ಧರ ಬಳಿಗೆ ಬಂದರು ....
ಬುದ್ಧರು ಕೇಳಿದರು ಭ್ರಮರ ನಿನ್ನ ವಸ್ತು ಯಲ್ಲಿ ಹಾಗೆ ನಿನ್ನ ವಸ್ತುವಿನಿಂದ ನೀನು ಏನನ್ನು ಗಳಿಸಿದೆ ಎಂದು ಕೇಳಿದರು ....
ಭ್ರಮರಸಾದು ತಲೆಬಾಗಿ ನನ್ನನು ಕ್ಷಮಿಸಿ ಗುರುವೇ ಅಹಂಕಾರದಿಂದ ನನ್ನ ವಸ್ತುವೆ ನನಗೆ ವೈರಿಯಾಯಿತು ಅದರಿಂದ ನನ್ನ ನೆಮ್ಮದಿ ಹಾಳಾಯಿತು ಯಾರಬಳಿಯಲ್ಲು ಪ್ರೀತಿಯು ಸಿಗಲಿಲ್ಲ ಯಲ್ಲವನ್ನು ಕಳೆದುಕೊಂಡೆ ಎಂದ .....
ಮತ್ತೆ ಬುದ್ದರು ಅಮರ ನಿನ್ನ ವಸ್ತು ಯಲ್ಲಿ ನೀನು ಏನನ್ನು ಗಳಿಸಿಗೆ ಎಂದು ಕೇಳಿದರು ....
ಅಮರಸಾದು ಗುರುವೇ ಅ ವಸ್ತುವಿನಿಂದ ನನಗೆ ತುಂಬ ಪ್ರೀತಿ ಸಿಕ್ಕಿತು ಆ ಪ್ರೀತಿಯ ಮಹಿಮೆಯಿಂದ ಯಲ್ಲರ ಮನಸ್ಸುಗಳನ್ನು ಗೆದ್ದು ಯಲ್ಲರ ಪ್ರೀತಿಯನ್ನು ಪಡೆದಿದ್ದೇನೆ ಎಂದ ....
ಆಗ ಬುದ್ದರು ಹೀಗೆ ಹೇಳಿದರು ಪ್ರೀತಿಯಿಂದ ಏನು ಬೇಕಾದರೂ ಪಡೆಯಬಹುದು ...ಆದರೆ ನೋವು ಕೊಡುವವರಿಗೆ ದೇವರು ಯಲ್ಲವನ್ನು ಕಸಿದಿಕೊಳ್ಳುತ್ತಾನೆ ....ಪ್ರೀತಿಸುವವರಿಗೆ ಯಲ್ಲವನ್ನು ಸಮಯ ನೋಡಿ ಹೆಚ್ಚು ಹೆಚ್ಚು ಕೊಡುತ್ತಾನೆ ಇಷ್ಟೇ ಜೀವನ ಎಂದ .....
ಆಗ ಅಮರಸಾದು ಪ್ರೀತಿ ಇಲ್ಲದ ಆ ಭ್ರಮರ ಸಾದುವಿಗೆ ಪ್ರೀತಿಯ ಮಾತುಗಳನ್ನು ಆಡುತ್ತಾ ನೊಂದ ಅವನ್ನನ ಪ್ರೀತಿಸಿದ .....
ಎಲ್ಲೋ ಹುಟ್ಟಿ ಬೆಳೆದ ಜೀವಗಳು..
ಮದುವೆ ಎಂಬ ನಂಟಿಗೆ ಬೆಸೆವ ಭಾವಗಳು..
ಮೂರು ಗಂಟಿನ ಬಂಧದ ಆತ್ಮೀಯತೆ..
ಏಳು ಹೆಜ್ಜೆಗಳ ಇಡುತ ಜೊತೆ ಜೊತೆ..
ಜನ್ಮ ಜನ್ಮಕೂ ಸೇರುವ ಭರವಸೆಯ ಕಡೆಗೆ..
ಸತಿ-ಪತಿಗಳಾಗುವ ಸಂಬಂಧ, ಹೆಸರಿನ ಬೆಸುಗೆ...
ಸಾಗುವುದು ಬಾಳ ಪಯಣ..
ನೋವು ನಲಿವಿನ ಜೀವನ..
ಪ್ರೀತಿ ಚಿರವಾಗಿರಲಿ ಸದಾ ಕಾಲ...
ಅಗ್ನಿ ಸಾಕ್ಷಿಯಲಿ ಕಟ್ಟುವ ಮಾಂಗಲ್ಯ...
ನಿನ್ನ ಬಿಸಿ ಉಸಿರು ನನ್ನ ತಾಕಲು
ಮರೆವೆ ನನ್ನನ್ನೇ, ನೀ ಸನಿಹವಿರಲು..
ಎಂಥ ನಿರ್ಭಯ ನಿನ್ನ ಅಪ್ಪುಗೆಯಲಿ..
ಏನೋ ನೆಮ್ಮದಿ ನಿನ್ನ ಮಡಿಲಲಿ..
ಆಂತರ್ಯದಲಿ ಅಮ್ಮನಾದೆ..
ಅಕ್ಕರೆಯಲಿ ಅಪ್ಪನಾದೆ..
ಒಮ್ಮೆ ಸಂತೈಸುವ ಸ್ನೇಹಿತನಾದೆ..
ಮತ್ತೊಮ್ಮೆ ಪ್ರೇಮಿಸುವ ಪತಿಯಾದೆ...
ಸರ್ವವು ನೀನೆಯಾಗಿ, ಸರ್ವಸ್ವವೂ ನಿನ್ನದಾಗಿದೆ..
ಬಿಡಿಸಲಾಗದ ಬಂಧ ನಮ್ಮದು, ದೂರಾಗದ ದಾಂಪತ್ಯವದು...
ಕೈಯಹಿಡಿದು ಹೆಜ್ಜೆ ಹಾಕುವೆ ಕೊನೆಯ
ಪಯಣವರೆಗೂ..
ಚಿತೆಯಲು ಜೊತೆಯಾಗುವೆ, ಇನ್ನೇನಿದೆ ಈ ಜಗದಲಿ ನಿನ್ನ ತೊರೆದು..