Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮುಡುಗಿ ಸೌಂದರ್ಯ

ನಿನ್ನ ನಾ ಏನೆಂದು ವರ್ಣಿಸಲಿ
ಮಲಗುವಾಸೆ ನನಗೆ ನಿನ್ನ ಮಡಿಲಲ್ಲಿ
ನಿನ್ನ ಒಂದೊಂದು ಮಾತು ಬಲು ಚೆನ್ನ
ನೀ ಮೌನವಾಗಿದ್ದರೆ ಅಪ್ಪಟ ಚಿನ್ನ
ನಿನಗೆಂದಿಗೂ ಕಾವಲು ಆಕಾಶ
ನಿನ್ನೊಳಗೆ ನಾ ಇರಲು ಕೊಡು ನನಗೊಂದು ಅವಕಾಶ
ನೀನು ಎಷ್ಟೊಂದು ಸುಂದರವಾಗಿರುವೆ
ನಿನ್ನ ವರ್ಣಿಸಿ ನಾ ಕವಿಯಗಿರುವೆ

ಸಂಜು ಗುಬ್ಬಿ

- Sanju gubbi Bhagya

04 Mar 2025, 08:42 pm

ಅತಿ ಅಪರೂಪದ ನಿನ್ನ ರೂಪ


ಸೋತಿದೆ ಈ ಮನವೆಕೋ ನಿನ್ನ ನಡಿಗೆ ನೋಡಿ,

ಕರಗುತಿದೆ ಈ ಮನವೇಕೋ ನಿನ್ನ ನೋಟ ನೋಡಿ,

ಕಾಯುತಿರುವೆ ಮನವೇಕೋ ದಿನಾ ನಿನ್ನ ಅಂದ ಚಂದ ಮಾತಿಗಾಗಿ

ಈ ಹೃದಯ ಪದೇ ಪದೇ ಸೋಲುತ್ತಿದೆ ನಿನ್ನ ಮುಗ್ದ ನಗುವ ನೋಡಿ.

(ಮುಗುಳು ನಗೆಯ ಚಲುವೆ)
- ಸಿದ್ದು ✍️

- Siddu Vader

03 Mar 2025, 06:44 pm

ಮೌನವೇ ಮಾತುಗಳು


ಅವಳಂತೆ ಯಾರಿಲ್ಲಾ
ಬೇರೆಯವರಂತೆ ಅವಳಲ್ಲಾ

ಬಂಗಾರದಂತೆ ಅಲ್ಲಾ ಬಂಗಾರವೇ ಅವಳು,

ಚಂದಿರನಂತೆ ಅಲ್ಲಾ ಚಂದಿರನೇ ಅವಳು,

ಮಗುವಿನ ಮನಸ್ಸವಳು,
ನಗು ನಗುತಾ ಇರುವವಳು,

ಮುಸ್ಸಂಜೆಯಂತೆ ಅವಳು,
ತಿಳಿಯಾದ ತಂಗಳಿ ಬಿಸುವವಳು,

ಹುಣ್ಣಿಮೆ ಬೆಳದಿಂಗಳ ಹೊಂಬಣ್ಣದವಳು,

ಮಾತುಗಳೇ ಮುತ್ತುಗಳು,
ಮೌನದಲಿಯೇ ಮಾತು ಆಡುವವಳು.

- ಸಿದ್ದು ✍️

- Siddu Vader

03 Mar 2025, 06:39 pm

ದಂತದ ಗೊಂಬೆ


ಸಾಟಿ ಯಾರು ನಿನಗೆ ನಗು ಮೊಗದ ಚಲುವೆ,

ನೋಡುಲು ಕಣ್ಗಳು ಸಾಲದು,

ಹೊಗಳಲು ಮಾತುಗಳು ಸಾಲದು,

ಏನು ಮಾಡಲಿ ನಾನು,

ನೀನೇ ಹೇಳು..

ಬಾಡದ ಹೂವು ನೀನು,
ಹುಣ್ಣಿಮೆ ಹೊಳಪು ನೀನು,
ಮುಂಜಾನೆಯ ಹೊಂಬಿಸಿಲು ನೀನು,
ಹಾಲಿಗೆ ಸೇರಿಸಿದ ಸಕ್ಕರೆ ಜೇನು ನೀನು,

ಸಿದ್ದು ✍️

- Siddu Vader

03 Mar 2025, 06:31 pm

ನನ್ನವ್ವ..


ಬದುಕಿನಲ್ಲಿ ಹೊಸ ಭರವಸೆಯ ಬೆಳಕಿನೊಂದಿಗೆ...
ನಂಬಿಕೆಯ ಕೈಹಿಡಿದು ಹೊಸ್ತಿಲಲ್ಲಿ ಸೇರು ಒದ್ದು,
ಸಾಲು ಸಾಲು ಜವಾಬ್ದಾರಿಯ ತನ್ನ ಹೆಗಲ ಮೇಲೆ ಹೊತ್ತು,
ನೂರಾರು ಕನಸು ಕಟ್ಟಿ ಒಡಲು ತುಂಬಿಕೊಂಡಳು... ತನ್ನೊಡಲೊಳಗಿರುವಾಗಲೇ ನನ್ನ ಮೇಲೆ ಪ್ರಾಣವಿರುಸಿದವಳು.
ಹಡೆದು ಕಂದನ ಕಪ್ಪು ಬಿಳುಪು ಎನ್ನದೆ ತನ್ನಎದೆಗೆ ಅಪ್ಪಿ ಮುತ್ತಿಟ್ಟಳು.....
ಸಾವಿರ ಕನಸುಗಳ ತೊಟ್ಟಿಲ ಕಟ್ಟಿ ಮಲಗಿಸಿ ತೂಗಿದಳು.
ಬಲು ಸುಂದರ! ನನ್ನ ಮಗ ಎಂದು ಮೊದಲು ದೃಷ್ಟಿ ತೆಗೆದವಳು.
ಸ್ವಾಭಿಮಾನ,ಧೈರ್ಯ, ಆತ್ಮವಿಶ್ವಾಸ,ಛಲದ ಮೊದಲ ಪಾಠ ಕಲಿಸಿದವಳು ನನ್ನವ್ವ..
ತುತ್ತು ಕೊಟ್ಟು ಮುತ್ತನಿಟ್ಟು ಪ್ರಾಣವನ್ನೇ ಮುಡುಪಾಗಿಟ್ಟಳು.
ತೊರೆದು ಆಸೆ ಆಕಾಂಕ್ಷೆ ಮರೆತು ಅವಳ ಸುಖದ ಜೀವನವ ನಮಗಾಗಿ..
ಚಳಿ ಮಳೆ ಗಾಳಿ ಬಿಸಿಲೆನ್ನದೆ ದುಡಿದು ಗಂಡನಿಗೆ ಬಲವಾದಳು..
ತಾನುಟ್ಟ ಸೀರೆ ಹಳೆಯದಾದರೂ ನಂಬಿಕೆಯ ಸೂರು.. ತನ್ನೊಡಲ ಕಟ್ಟಿ ಮಕ್ಕಳು ಒಡಲಿಗೆ ತುತ್ತು ಅನ್ನವೂ ಕಡಿಮೆ ಮಾಡದವಳು
ಜೀವಿಸಿದಳು ಮಕ್ಕಳ ಖುಷಿಯನ್ನು ತನ್ನ ಖುಷಿಯಂತೆ ಸಂಭ್ರಮಿಸಿ..
ಗೆಲುವು ಸೋಲು ಸುಖವೋ ದುಃಖವೋ ನೆರಳಂತೆ ಜೊತೆಯಾಗಿರುವಳು
ತನಗಾಗಿ ಯಾವ ಪ್ರತಿಫಲವನ್ನು ಬಯಸದ ಜೀವ.... ನಿನಗೆ ನನ್ನ ನಮನ.
- ಸುದೀಪ್ ಎಚ್ ಟಿ
U29XR24E0081




- vijay

28 Feb 2025, 12:25 am

ಶಿವಮಯ

ಎಲ್ಲೆಲ್ಲೂ ಝೇಂಕರಿಸುತಿದೆ ಶಿವಮಯ
ಶಿವರಾತ್ರಿ ಸಂಭ್ರಮಿಸುವ ಶುಭ ಸಮಯ

ಬಿಲ್ವಪತ್ರೆಗಳಿಂದ ಪೂಜೆ ಮಾಡಿ
ಸಿಹಿಯನ್ನು ನೈವೇದ್ಯಕೆ ಇಡಿ

ಹಣ್ಣುಹಂಪಲ ತಿಂದು ಉಪವಾಸ ಮಾಡಿ
ಕಷ್ಟ ನೋವುಗಳನ್ನು ಶಿವನಿಗೆ ಬಿಡಿ

ಭಕ್ತಿ ಭಾವದಿಂದ ನಮಸ್ಕಾರಿಸಿ
ಶಿವ ನೀಡುವ ಪ್ರಸಾದ ಸ್ವೀಕರಿಸಿ

- laxmi

25 Feb 2025, 11:39 pm

ನಾ... ನಿನ್ನ ಕಾಯ್ತಿತಿನಿ ಗೆಳತಿ‌‌...

ಸೂರ್ಯನು ಭೂಮಿಗೆ ಬೆಳಕು ಕೊಟ್ಟಂಗೆ
ನಾ... ನಿಂಗೆ ಪ್ರೀತಿ ಕೊಡ್ತೀನಿ
ಬೆಳಂದಿಂಗಳ ಚಂದ್ರನಂತೆ
ನಾ... ನಿನ್ನ ಬಾಳಿಗೆ ನೆರಳಗ್ತಿನಿ
ಕಟು ಮನಸಿನ ಹೃದಯವು ನಂದೈತಿ
ಈ ಮನಸಿಗೆ ಪ್ರೀತಿ ಕೊಡೋ ದೈರ್ಯ ನಿಂಗೈತಿ
ಗುಲಾಬಿ ಹೂವ್ನ ಮುಳ್ಳು ಕಾದಂಗ
ನಾ... ನಿನ್ನ ಕಾಯ್ತಿತಿನಿ ಗೆಳತಿ....
ಎಮ್.ಎಸ್.ಭೋವಿ...✍️

- mani_s_bhovi

24 Feb 2025, 10:21 pm

ಮನುಷ್ಯತ್ವ

ಆಶೆಯಿಂದ ಮನುಷ್ಯನ ರಚಿಸಿದ ದೇವರು
ಮನುಷ್ಯತ್ವ ಇಲ್ಲದ ಮನುಷ್ಯ ಎರೆಚಿದ ಕೆಸರು

ಮುಕ್ತಿಯನು ಇಚ್ಚಿಸಿದರು ಕಲಿಯುಗದಲ್ಲಿ
ಮುಳಿಗಿದರು ಎಲ್ಲರು ಕುಂಭದಲ್ಲಿ

ಮನುಷ್ಯತ್ವವನ್ನು ಎದ್ದೇಳಿಸಿ ಈ ಜಗದಲ್ಲಿ
ಆತ್ಮಸಾಕ್ಷಿಯನ್ನು ಎಚ್ಚರಗೊಳಿಸಿ ನಂಬಿಕೆಯಲ್ಲಿ

ದೇವರನ್ನು ಆರಾಧಿಸಿ ಭಕ್ತಿಯಿಂದ
ಕಾಪಾಡವನು ಎಲ್ಲರನ್ನು ಅವನ ಶಕ್ತಿಯಿಂದ


ವಿಶಾಲಾ ಮಂಜುನಾಥ

- laxmi

21 Feb 2025, 11:29 pm

ಯಾತ್ರೆ

ವೈವಿಧ್ಯತೆಯಿಂದ ಕೂಡಿದೆ ಎಲ್ಲರ ಯಾತ್ರೆ
ಯಾವುದಕ್ಕೂ ಕಡಿಮೆಯಿಲ್ಲದಂತ ಜಾತ್ರೆ

ಸವಿನೆನಪುಗಳನ್ನು ತುಂಬಿಸಿರಿ ಚೀಲದಲ್ಲಿ
ಕಹಿನೆನಪುಗಳನ್ನು ಎಸೆಯಿರಿ ತೊಟ್ಟಿಯಲ್ಲಿ

ಕೊನೆಯಾಗುವದು ಒಂದು ದಿನ ಎಲ್ಲರ ಯಾತ್ರೆ
ಬೆಚ್ಚಿಬೀಳದಿರಿ ನಿದ್ದೆಯಿಲ್ಲದೆ ಪೂರ್ತಿ ರಾತ್ರೆ

ಸಂತೋಷವಾಗಿಸಿ ನಿಮ್ಮೆಲ್ಲರ ಯಾತ್ರೆ
ನಿರ್ಮಿಸಿ ಒಂದೊಳ್ಳೆ ಚರಿತ್ರೆ


ವಿಶಾಲಾ ಮಂಜುನಾಥ

- laxmi

21 Feb 2025, 09:33 pm

- Nuage Laboratoire

15 Feb 2025, 10:30 am