Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ರಂಗು ರಂಗಿನ ಬೆಟ್ಟವ ತೊಟ್ಟು,
ಕಡಲ ಸೀಮೆಗೆ ತೆಂಗಿನ ಜುಟ್ಟು,
ಝೆಂಕರಿಸಿದ ದುಂಬಿಯ ನಂಟು,
ಎತ್ತರಕ್ಕೆ ಹಾರುವ ಹಕ್ಕಿಯ ಪಟ್ಟು ,
ನೋಡಿ ಬೆರಗಡಲು ಕನ್ನಡಾಂಬೆ,
ಇದು ಕರುನಾಡು, ಇದು ಕರುನಾಡು...
ಸ್ನೇಹ ಸೇತುವೆಯಾ ದಿಬ್ಬಣ ಹಾಕಿ ಸಿ,
ಮಾತು ಮಮತೆಯ ಪಾನಕ ಜೋಡಿಸಿ,
ಕಾರ್ಯ ಸಾಧನೆಯ ತೋರಣ ಕಟ್ಟಿಸಿ,
ಸದ್ಬವ, ಸಜ್ಜನಿಕೆಯ, ಮುತ್ತು ಅಂಕರಿಸಿ,
ನೋಡಿ ಬೆರಗಾದಳು ಕನ್ನಡಾಂಬೆ,
ಇದು ಕರುನಾಡು, ಇದು ಕರುನಾಡು..
- Latheef Abdul
19 Jul 2023, 12:06 pm
ಹೊಂಗಿರಣ ಸೂಸಿ,
ರವಿರಾಯ ಬಾಗಿ,
ಕಡಲು ಅಲೆಯ ಚಾಚಿ,
ತೆಂಗು ಗರಿಯಾ ಬೀಸಿ,
ತುಳುನಾಡ ಸೊಬಗ ವರ್ಣಿಸಿದೆ...
ಗದ್ದೆಯ ತೆನೆಯು,
ನವಿಲಿನ ಗರಿಯು,
ಗೋವಿನ ಹಟ್ಟಿ,
ಗುಬ್ಬಚ್ಚಿಯ ಗೂಡು,
ತುಳುನಾಡ ಸೊಬಗ ವರ್ಣಿಸಿದೆ...
ನಕ್ಷತ್ರ ಹೂವು,
ಪರಿಮಳದ ಮಾವು,
ಮುಳ್ಳು ಮುಳ್ಳಿನ ಹಲಸು,
ನೆಲ್ಯಾಡಿಯ ಗೆನಸು,
ತುಳುನಾಡ ಸೊಬಗ ವರ್ಣಿಸಿದೆ...
ರಂಗಿನ ಮೀನು,
ವ್ಯಾಪಾರಿ ಮೋನು,
ಕಪ್ಪು ಬಿಳುಪಿನ ಚಿಪ್ಪು,
ಬಣ್ಣ ಬಣ್ಣದ ಸೊಪ್ಪು,
ತುಳುನಾಡ ಸೊಬಗ ವರ್ಣಿಸಿದೆ.
ಕಾರಿಂಜದ ಗುಡಿಯು,
ಚಾರ್ಮಾಡಿ ಗಡಿಯು,
ಎದೆಬಿಡದ ಮಳೆಯು,
ಗುಡ್ಡದ ಮನೆಯು,
ತುಳುನಾಡ ಸೊಬಗ ವರ್ಣಿಸಿದೆ.
ಲತೀಫ್
- Latheef Abdul
18 Jul 2023, 10:43 pm
ನೀನೆ ನಿನ್ನನ್ನು ಬಣ್ಣಿಸುವೆ ಯಾಕಯ್ಯಾ?? ಅರಿತುಕೊಳ್ಳು ನೀ ತನ್ನನ್ನು ತಾನು ಬಣ್ಣಿಸುವವ ಯಾರೆಂದು....
ಒಳ್ಳೆದನ್ನು ಕಂಡರೆ ಜನರೆ ನಿನ್ನ
ವರ್ಣಿಸಲು ಮುಗಿದು ಬೀಳುವರು
ನೋಡಲ್ಲವೇ ನಿನ್ನನು ಮಂಜುನಾಥ.
ಜಾಣ ಜಾನ್ಮೇ ಕಮ್ಮಿ ಇರಬಹುದು ನಿನ್ನಲ್ಲಿ,
ನಾನು ನನ್ನದೆಂಬ ಅಹಂ ಇರಬಹುದು ನಿನ್ನಲ್ಲಿ, ಅರಿತುಕೊಳ್ಳು ಮೊದಲು ಮನುಜನಾಗಿ ಬಾಳಲು... ಕಾಣುವುದಿಲ್ಲವೇ ನಿನ್ನನು ಮಂಜುನಾಥ.
ಕಾನೂನು ರಚನೆ ಮಾಡಿದವ
ಸೋತು ಬಿಟ್ಟಾನೆ ನಿನ್ನ ಮುಂದೆ?
ಮಹಾ ಪಂಡಿತ ನೀನೆಂದು ನಿನ್ನಲ್ಲಿರಲಿ, ತೋರಿಸಬೇಡ ಪರರಿಗೆ.
ನೋಡಿ ನಗುತಿರುವನು ಮಂಜುನಾಥ.
ಉಪಕಾರ ಮಾಡು ನೀನು,
ಡಂಗುರ ಸಾರಬೇಡ ನೀನು,
ಅವರಿಗೆ ಇಷ್ಟು, ಇವರಿಗೆ ಇಷ್ಟೆಂದು,
ತಿಳಿ ನೀನು ಕೊಟ್ಟವನು ಪರಮಾತ್ಮ ಎಂದು,
ಕಾದು ಸುಮ್ಮನಿರುವನು ಮಂಜುನಾಥ.
ಬಸವಣ್ಣನ ವಚನದ ಮದ್ದು,
ಮಂಕುತಿಮ್ಮನ ಕಗ್ಗದ ಕಷಾಯ,
ಕೂಡಿ ಬಡಿದೆಚ್ಚರಿಸಲಿ
ನಿನ್ನನ್ನು ನಿಜ ದಾರಿ ಕಾಣಲು
ಮಂಜುನಾಥನ ಪಾದಕ್ಕೆ ಶರಣಾಗು ನೀನು ಒಮ್ಮೆಯಾದರು ಇಂದು.......
ಲತೀಫ್
- Latheef Abdul
18 Jul 2023, 08:10 pm
ಮಿಂಚಿನ ಬಳ್ಳಿ, ಸಿಡಿಲಿನ ಶಬ್ದ,
ಮಳೆಯಾ ನೆಯ್ದು ಕಳುಹಿಸಿದೇ,
ಮಳೆಯ ಸೊಬಗು , ಹಸಿರಿನ ಚಿಗುರು
ಹೊಲೆಯುತಿದೆ ಜಡಿ ಮಳೆಗೆ,
ಹಸುರಿನ ಗದ್ದೆ, ತುಳಿಯುತ ನೀನು,
ಹಾಯಾಗಿರುವೆ ನನ್ನೊಳಗೇ,
ಉಸಿರಿನ ಒಳಗೆ, ಹೆಸರನು ಇಡಿಸಿ
ಕಾಯುವೆ ನಿನ್ನ, ಬರವಣಿಗೆ.
ಲತೀಫ್
- Latheef Abdul
18 Jul 2023, 07:22 pm
ಶಾಶ್ವತವಾದ ಮಂಚದಲಿ ಕೂತ ಬೇಕೂಪನು, ನೋಡಿಲ್ಲ ಮಂಚಕ್ಕೆ ಮೂರು ಕಾಲು ಇತ್ತು ಎಂದು,
ಜೋರಾದ ಗಾಳಿ ಬೀಸಲು ಮಂಚ ಕವಚ ಬಿದ್ದು, ಪುಡಿ ಪುಡಿ ಅದ ಮೇಲೆ ಗೊತ್ತಾದದ್ದು, ಅದು ರಟ್ಟಿನಾ ಮಂಚ ಎಂದು..
ಲತೀಫ್
- Latheef Abdul
18 Jul 2023, 06:59 pm
ಕನ್ನಡಕದ ಮೇಲಂಚಿನಲಿ ಕಣ್ಣ ಹಾಯಿಸಿ ನೋಡುವ ನೀನು ,ಸಂಶಯಪಡುವೆಯ ನೀನು ಇತರರಿಗೆ, ಹೊರಟು ನಿಜ ರೂಪ ನಿನ್ನದು ಏನೆಂದು ತೋರುವೆಯಾ¡ ಕಯ್ಯಲೊಂದು ಪೆನ್ನು, ತಲೆಗೆ ತಾಗಿಸುತ ಇರುವ ನೀನು, ಮೆದವಿಯೆಂದ
ತೋರುತಿಯ ಇತರರಿಗೆ,
ಬಾವಿಯೊಳಗಿನ ಕಪ್ಪೆ ಆಗಬೇಡ, ಹೊರಗೇ ನಂದು ನೋಡು ನೀನು ಸಾಕಷ್ಟೂ ಮೇಧಾವಿಗಳಿರುವರು ಸುತ್ತಮುತ್ತ.
ಬಾಯ ಬಿಚ್ಚಿ ನಗುವ ನೀನು, ಮನಸಲಿಯುವ ಯೋಜನೆ ಅದರಲಿ ಇಲ್ಲ,
ಬರಿ ಹಲ್ಲು ತೋರುತಿಯಾ ನೀನು, ಕಯ್ಯಕಟ್ಟಿ ಸೊಂತಕೆ ಇಟ್ಟು ಮಾತಾನಾಡುವ ನೀನು, ವೇದಿಕೆಯಲ್ಲಿರುವೆಯಾ, ಹೊರತು ವೇದನೆಯಲ್ಲಿರುವೆಯಾ ತಿಳಿಯಲಿಲ್ಲ ನನಗೆ,
ಕಾಲನು ಕಾಲಿಗೆ ಉಜ್ಜುತ , ಅಂಗಲಾಚಿ ಕೈ ಎತ್ತಿ ಆಗಾಗ ವೇದಿಕೆಯಲ್ಲಿ ಮಾತು ಆಡುವ ನೀನು , ಘನತೆ , ಗಾಂಭೀರ್ಯ ಇದೆಯಾ ನಿಲ್ಲಲ್ಲಿ ಎಂಬ ಸಂಶಯ ನನಗೇ
- Latheef Abdul
18 Jul 2023, 06:59 pm
ಕಾಡ ಒಳಗೇ ಅವಿತು ಕೂತ ನೀನು ಬಂದೆ ಬಯಲಿಗೆ, ಬೇಕು ನಿನಗೆ ವರ್ಣನೆ.
ಮಂಜು ಕವಿದ ವಾತಾವರಣದಲಿ, ಕಣ್ಣು ಮಬ್ಬಾದವನಿಗೆ, ಬೇಕು ವರ್ಣನೆ.
ಜನ ಜಂಗುಳಿಯಲಿ ನಟನಂತೆ ವರ್ತಿಸುವ ಮನೋಧರ್ಮವಿದ್ದವನಿಗೆ ಬೇಕು ವರ್ಣನೆ.
ನಾನು ನನ್ನೆಂಬ ಜಂಬ ವಿದ್ದವನಿಗೆ, ಬಹಿರಂಗ ಪಡಿಸಲು ಬೇಕು ವರ್ಣನೆ
- Latheef Abdul
18 Jul 2023, 06:57 pm
ಆರದಿರಲಿ ಆಸಕ್ತಿಯ ಬೆಳಕು ಹೊಳೆಯಲಿ ಬೆಳಗಲಿ ಸದಾ ಹರಡುತಿರಲಿ
ಆರು ಮೂರಾದರೂ ಮೂರು ಆರಾದರೂ ಹೊಳೆಯಲಿ ಬೆಳಗಲಿ ಸದಾ ಹರಡುತಿರಲಿ
ಹೊಂಬೆಳಕ ಕಾಣುವ ಅದೆಷ್ಟೋ ಕಂಗಳು ಹಂಬಲಿಸಿ ಕರೆಯುತಿವೆ ಮನ ತುಂಬಲು
ಮುಗಿಲೆತ್ತರಕೆ ಹಾಯಲಿ ಆಸಕ್ತಿಯ ಬೆಳಕು ಬಾಳುಗಳನೇ ಬೆಳಗಲಿ ಹೊಳೆಯಲಿ ಸದಾ ಹರಡುತಿರಲಿ
ಹರಿದ ಮನಗಳನು ಮತ್ತೇ ಜೋಡಿಸುವ ಕಾಯಕವಾಗಲಿ ಬಾಳುಗಳನೇ ಬೆಳಗಲಿ ಸದಾ ಸಾಕಾರವಾಗಲಿ
_ಶಶಿಜಿತ್
- m Jithendra_ಶಶಿಜಿತ್
16 Jul 2023, 09:51 pm
ಹೇ ಮನುಜ ನುಡಿದಂತೆ ನಡೆಯೋ
ಎಡವಿ ಬೀಳುವೆ ನೀನು, ನಡೆ ಸರಿಯಿರಲಿ.
ಮಾತು ಬಂಗಾರವಾಗಿರಲಿ, ಬಣ್ಣ ಬದಲಾಯಿಸದಿರಲಿ,
ನಗುವಿರಲಿ ನಿನ್ನಲಿ, ನಂಜು ಇರದಿರಲಿ,
ಮಾತು ಮೃದುವಿರಲಿ, ಸ್ವಾರ್ಥ ತೊರೆದಿರಲಿ,
ಕಣ್ಣಲಿ ಬೆಳಗಿರಲಿ, ಕೊಳಕು ತೊಳದಿರಲಿ,
ನಡೆಯು ಮದರಿಯಾಗಿರಲಿ, ಮದ ತೊರೆದಿರಲಿ, ಬದಲಾಗು ನೀನು ಕಸವ ತುಳಿಯುತ , ತೊಳ್ಹೇಯುತ.
- Latheef Abdul
16 Jul 2023, 05:47 pm
ಮಿಂಚಿನ ಬಳ್ಳಿ, ಸಿಡಿಲಿನ ಶಬ್ದ,
ಮಳೆಯಾ ನೆಯ್ದು ಕಳುಹಿಸಿದೇ,
ಮಳೆಯ ಸೊಬಗು , ಹಸಿರಿನ ಚಿಗುರು
ಹೊಲೆಯುತಿದೆ ಜಡಿ ಮಳೆಗೆ,
ಹಸುರಿನ ಗದ್ದೆ, ತುಳಿಯುತ ನೀನು,
ಹಾಯಾಗಿರುವೆ ನನ್ನೊಳಗೇ,
ಉಸಿರಿನ ಒಳಗೆ, ಹೆಸರನು ಇಡಿಸಿ
ಕಾಯುವೆ ನಿನ್ನ, ಬರವಣಿಗೆ.
ಲತೀಫ್
- Latheef Abdul
16 Jul 2023, 05:18 pm