ಕಾಲು ದಾರಿ ಅಲ್ಲಿ ಸಿಕ್ಕ
ಯುವತಿಯ ನುಡಿಯದು
ಅಂಗೈ ನೋಡಿ ನುಡಿದ ನುಡಿಯದು
ಕಾಲುಂಗುರ ತೊಡಿಸಿ
ಕಣ್ಣಿಗೆ ಕಾಡಿಗೆಯ ತೊಡಿಸಿ
ಹೂವನ್ನು ಮುಡಿಸಿ
ಕೈ ಹಿಡಿದು ನಡೆಸುವ ಅರಸ ನನ್ನವನಂತೆ....
__✍️Rajitha
ಕೊಟ್ಟು ಕಾಡಿಸುವ ಅವಸರ....
ಸಿಕ್ಕವರೆಲ್ಲ ಕೊನೆವರೆಗೂ ಉಳುವರೆ
ಸವಿಗನಸ ಕೂಡಿಟ್ಟು ತೆರಳುವರೆ
ಯಾಕಿದೂ ಕೊಟ್ಟು ಕಾಡಿಸುವ ಅವಸರ
ನಿನಗೆ ಪರಮಾತ್ಮ.....?
_✍️Rajitha
ಎಲೆಯೊಳ್ ಕಾಯ್ ಅವಿತಂತೆ ಮಗುವಿಗೆ ತಾಯ್ ಮಡಿಲ ಸ್ನೇಹ,
ಸಿಹಿಗೆ ನೊಣ ಮುತ್ತುವಂತೆ ಬೆಳೆಯುವುದು ಕಿನ್ನರ ಪಡೆಯ ಸ್ನೇಹ.
ಕಾಮನ ಬಿಲ್ಲಿನೊಳ್ ಬಣ್ಣ ಬೆರೆತಂತೆ ಮನಗಳ ಬೆಸೆಯುವ ಸ್ನೇಹ,
ಮಳೆಯಲ್ಲಿ ಮಾತ್ರ ಹೊಳೆಯದೆ ಸದಾ ಪೂರ್ಣ ಚಂದ್ರನಂತೆ ನಗುವುದು ಹೃದಯದಿ ಸ್ನೇಹ.
ಕಾಲ್ಪನಿಕ ಕನಸಿನ ಸ್ವಾರ್ಥಕ್ಕೆ ಮೂಡುವುದಲ್ಲ ಸ್ನೇಹ,
ಪಾಚಿ ಇರದ ತಿಳೀನೀರಿನಂತೆ ನಮ್ಮೊಳಗೆ ಸ್ವಚ್ಛವಾಗಿರುವುದೇ ಸ್ನೇಹ.
ಬರಡಾದ ಮನಕೆ ಹಸಿರಾಗೋ ಸ್ನೇಹ,
ಹಂಸಕೆ ಮರು ಜೀವ ಕೊಟ್ಟ ಬುದ್ಧನ ಪ್ರೀತಿಯಂತಿರಬೇಕು ನಮ್ಮ ಮಾನವೀಯ ಸ್ನೇಹ.
ಚಲಿಸುವ ಮೋಡಗಳಂತೆ ಚಂಚಲವಿರದ ನಮ್ಮ ಸ್ನೇಹ,
ಜಗಳಕ್ಕೆ ಮುನಿಯದೆ ತನ್ನವರ ಶ್ರೇಷ್ಠತೆಯ ಮೆರೆಸುವುದು ಸ್ನೇಹ.
ಐಶ್ವರ್ಯದ ಆಕರ್ಷಣೆಗೆ ಶರಣಾಗುವುದಿಲ್ಲ ಸ್ನೇಹ,
ಮುಳ್ಳು ಕಲ್ಲುಗಳಿದ್ದರೂ ಮುದುಡದೆ ಮನಕೆ ಮುದ ನೀಡುವುದು ಸ್ನೇಹ.
ಎರಡು ಹೃದಯದ ಭಾವಕೆ ಮಿಡಿಯುವುದು ಸ್ನೇಹ,
ಕೊನೆಯ ಉಸಿರು ಇರುವ ತನಕ ನಂಬಿದವರಿಗೆ ವಿಶ್ವಾಸದ ಹಾಲೆರೆವುದೇ ನಿಜವಾದ ಸ್ನೇಹ.
ನೋವಿಗೆ ಸ್ಪಂದಿಸಿದ
ಆತ್ಮೀಯ ಹೃದಯಗಳೇ.....
ಸೋತು ಕುಳಿತಾಗಲೆಲ್ಲ
ಧೈರ್ಯ ಹೇಳಿದ ಮನಸ್ಸುಗಳೇ....
ಕಷ್ಟ ನಷ್ಟಗಳು ಎದುರಾದಾಗ
ಸಹಾಯ ಮಾಡಿದ ಕೈಗಳೇ....
ಕಣ್ಣೀರು ಬಾರದಂತೆ ಕಾದು
ಸಾಂತ್ವನ ನೀಡಿದ ಜೀವಗಳೇ....
ನಿಮಗಿದೋ ನನ್ನ ಹೃದಯಪೂರ್ವಕ ಸ್ನೇಹಿತ ದಿನಾಚರಣೆಯ ಶುಭಾಶಯಗಳು.....
ಒಂದೂರಿನಲ್ಲಿ ಇಬ್ಬರು ಅಕ್ಕ ತಂಗಿಯರಿದ್ದರು. ರಾಧಾ ಮತ್ತು ಸೀತಾ. ರಾಧಾ ತುಂಬ ಒಳ್ಳೆಯವಳು ; ಆದರೆ ಸೀತಾ ತುಂಬ ದುರಾಸೆಯವಳು. ಒಂದು ದಿನ ಅವರ ತಾಯಿ ರಮ್ಯ ಇಬ್ಬರನ್ನು ಹತ್ತಿರ ಕರೆದು" ನೋಡಿ ಮಕ್ಕಳೇ ನಾನು ಇನ್ನೂ ಹೆಚ್ಚು ದಿನ ಬದುಕುವುದಿಲ್ಲ , ನಾನು ಸತ್ತರೆ ನನ್ನ ಆಸ್ತಿ ರಾಧಾಳಿಗೆ ಸೇರುತ್ತೆ ಏಕೆಂದರೆ ರಾಧಾ ನಿನಗಿಂತ ದೊಡ್ಡವಳು ಸೀತಾ ಗೊತ್ತಾಯ್ತಾ . ರಾಧಾ ನೀನು ಆಸ್ತಿ ಬಂದಾಗ ಜಂಬದಿಂದ ಮರೆಯಬೇಡ ನಿನ್ನ ತಂಗಿನ ಚೆನ್ನಾಗಿ ನೋಡಿಕೋ ಈಗ ಹೋಗಿ ಮಲಗಿ" ಎಂದಳು. ರಾಧಾ ಅಳುತ್ತಾ ಹಾಸಿಗೆಯ ಮೇಲೆ ಬೋರಲಾಗಿ ಮಲಗಿದಳು ಆಗ ಸೀತ "ಯಾಕೆ ಅಳ್ತಿದ್ದಿಯ ಅಕ್ಕ"ಎಂದಳು. ಆಗ ರಾಧಾ "ನೋಡಿದೆಯಾ ಸೀತ ಅಮ್ಮ ಹೇಗೆಲ್ಲಾ ಮಾತಾಡುತ್ತಾರೆ. ಸಾಯುವುದಂತೂ. ಹಾಗೇನಾದರೂ ಆದರೆ ಅಮ್ಮ ಹೋದ್ರು ನಾನು ಬದುಕುವುದಿಲ್ಲ "ಎಂದು ಬಿಕ್ಕಿಬಿಕ್ಕಿ ಅತ್ತಳು. ಆಗ ಸೀತಾ "ಹೋಗಿ ಸುಮ್ನೆ ಮಲಗು" ಎಂದು ಬೈತಾಳೆ. ಸ್ವಲ್ಪ ಹೊತ್ತಿನ ನಂತರ ರಾಧಾ ಮಲಗಿದ್ದನ್ನು ಖಾತ್ರಿಪಡಿಸಿಕೊಂಡು ಸೀತ ಅವಳಮ್ಮನ ಕೋಣೆಗೆ ಹೋಗುತ್ತಾಳೆ. ಹೋಗಿ ಅವಳ ಅಮ್ಮಳನ್ನು ಎಬ್ಬಿಸುತ್ತಾಳೆ. ರಮ್ಯಾ ಎದ್ದು ಕುಳಿತುಕೊಳ್ಳುತ್ತಾಳೆ ಮತ್ತು ಸೀತ ಇಷ್ಟೊತ್ನಲ್ಲಿ ಏನ್ ಮಾಡ್ತಾ ಇದ್ದೀಯಾ? ಎಂದು ಕೇಳುತ್ತಾಳೆ ಆಗ ಸೀತ "ಏನು ಇಲ್ಲಮ್ಮ ನಾನು ಹೇಳಿದ ಹಾಗೆ ಬರೆದು ಕೊಡ್ತೀಯಾ"ಎಂದು ಕೇಳುತ್ತಾಳೆ ಏನು ಹೇಳು ಎಂದು ರಮ್ಯಾ ಬರೆಯಲು ಶುರು ಮಾಡುತ್ತಾಳೆ ಆಗ ಸೀತ ಸೀತಾ ನಾನು ಸಾಯ್ತಾ ಇದ್ದೀನಿ ರಾಧಾ ನನ್ನ ಕುತ್ತಿಗೆಯನ್ನು ಹಿಸುಕುತ್ತಿದ್ದಳು ನನ್ನನ್ನು ಕಾಪಾಡು. ಇಷ್ಟು ಬರಿ ಅಮ್ಮ ಸಾಕು ಎಂದಳು ರಮ್ಯಾ ಬರೆದುಕೊ ಕೊಟ್ಟು ಜಿಲ್ಲೆಯ ಇದು ಎಲ್ಲಾ ಯಾಕೆ ಎಂದು ಪ್ರಶ್ನಿಸುತ್ತಾರೆ ಆಗ ಸೀತಾ ಚೀಟಿಯನ್ನು ಕಸಿದುಕೊಂಡು ರಮ್ಯಾಳ ಎಂದರೆ ಅವಳ ತಾಯಿಯ ಕುತ್ತಿಗೆಯನ್ನು ಸಿಲುಕುತ್ತಾಳೆ ರಮ್ಯ ಸತ್ತಿದ್ದಾಳೆ ಎಂದು ಖಾತ್ರಿ ಖಾತರಿ ಪಡಿಸಿಕೊಂಡು ಚೀಟಿಯನ್ನು ಎತ್ತಿಕೊಂಡು ಎತ್ತಿಕೊಂಡು ತನ್ನ ಮಂಚದ ಪಕ್ಕ ತಾಳೆ ಮತ್ತು ರಾಧಾಳ ಹತ್ತಿರ ಹೋಗಿ ಜಾತಕ ಅಮ್ಮ ನಿನಗೆ ಕರೆದಿದ್ದಾರೆ ಎಂದು ಹೇಳುತ್ತಾಳೆ ರಾಧಾ ಅಮ್ಮನ ಕೋಣೆಗೆ ಹೋದ ತಕ್ಷಣ ಅಮ್ಮನ ಕೋಣೆಯ ಬಾಗಿಲನ್ನು ಮುಚ್ಚುತ್ತಾಳೆ ಮತ್ತು ರಾಜನ ಆಸ್ಥಾನಕ್ಕೆ ಬಂದು ಶ್ರೀ ಮಹಾ ರಾಜರೆ ನನ್ನಮ್ಮನನ್ನು ನನ್ನ ಅಕ್ಕ ದಾದಾ ಕೊಲ್ಲುತ್ತಿದ್ದಾಳೆ ಬನ್ನಿ ಎಂದು ಅಳುವಂತೆ ನಟಿಸುತ್ತಾರೆ ರಾಜಭಟರು ಅವಳನ್ನು ಹಿಂಬಾಲಿಸುತ್ತಾನೆ ರಾಧಾ ಏಕೆ ಬಾಗಿಲು ಮುಚ್ಚಿದಳು ನನ್ನ ತಂಗಿ ಸೀತಾ ಎಂದು ಎಂದು ಯೋಚಿಸುವಷ್ಟರಲ್ಲಿ ಬಾಗಿಲು ತೆರೆಯುತ್ತದೆ ನೋಡಿದರೆ ರಾಜಭಟರ ಜೊತೆ ಸೀತಾ ಸೀತಾ ಬಂದಿರುತ್ತಾಳೆ ನೋಡಿ ನೀವೇ ನೋಡಿ ನನ್ನ ಅಮ್ಮ ನನ್ನ ನನ್ನ ಅಕ್ಕ ರಾಧಾ ಸಾಯಿಸಿದ್ದಾಳೆ ಎಂದು ಬಿಕ್ಕಿ ಬಿಕ್ಕಿ ಅಳುವ ಹಾಗೆ ನಾಟಕ ಮಾಡುತ್ತಿದ್ದಾಗ ರಾಜಭಟರು ರಾಧಾ ರಾಧಾ ತನ್ನ ಅಮ್ಮನನ್ನು ಸಾಯಿಸಿದ್ದಾಳೆ ಎಂದು ಹೇಳಲು ಸಾಕ್ಷಿಗಳು ಏನು ಎಂದು ಘೋಷಿಸುತ್ತಾರೆ ಆಗ ಸೀತಾ ತನ್ನ ಮಂಚದ ಬಳಿಗೆ ಕರೆದುಕೊಂಡು ಹೋಗಿ ನೋಡಿ ರಾಧಾ ನನ್ನ ಅಮ್ಮನನ್ನು ಕುತ್ತಿಗೆ ಹಿಸುಕುವಾಗ ನನ್ನ ಅಮ್ಮ ಚೀಟಿಯನ್ನು ಎಸೆದರು. ನೀವೇ ಓದಿ ಎಂದು ಆಗ ರಾಜಭಟರು ರಾಜಭಟರು ಓದಿ ರಾಧಾಳನ್ನು ಬಂಧಿಸುತ್ತಾರೆ. ಆಗ ರಾಧಾ ಒಂದು ಚೀಟಿಯಲ್ಲಿ ಏನೋ ಬರೆದು ಅದನ್ನು ಮಡಿಚಿ "ಸೀತಾ ಇದನ್ನು ಎಲ್ಲಿಯಾದರೂ ತೆಗೆದು ಇಡು ಇದರಿಂದ ಒಮ್ಮೆ ಉಪಯೋಗಕ್ಕೆ ಬರುವುದು" ಎನ್ನುತ್ತಾಳೆ.ಆಗ ಸೀತ ಅದನ್ನು ಕಪಾಟಿನಲ್ಲಿ ಇಡುತ್ತಾಳೆ ಮತ್ತು ಅದರ ಜೊತೆ ಅರಮನೆಗೆ ಸೆರೆಮನೆಗೆ ಹೋಗುತ್ತಾಳೆ. ರಾಧಾ ಒಮ್ಮೆ ಸೆರೆಮನೆಯಲ್ಲಿ ಸಾಯಲು ಯತ್ನಿಸುತ್ತಾಳೆ ಆಗಮನ ಅವಳ ತಾಯಿಯ ಆತ್ಮವು ಬರುತ್ತದೆ ಅವಳಮ್ಮನ ಆತ್ಮ
ರಾಧಾ ರಾಧಾ ಯಾಕೆ ಸಾಯಲು ಹೋಗುತ್ತಿದ್ದೀಯಾ ಎಂದರು ಅಮ್ಮ ಹೇಳಮ್ಮ ನಿನ್ನನ್ನು ನಾನು ಸಾಯಿಸಿದ್ದು ಎಂದು ಎಲ್ಲರೂ ಭಾವಿಸಿದ್ದಾರೆ. ನಿಜ ಹೇಳಮ್ಮ ಎಂದಾಗ ಅವಳ ಅಮ್ಮ ಸೀತಾ ಎಂದುತ್ತರಿಸಿದರು. ರಾಧಾ ತನ್ನ ಬಿಡುಗಡೆಯ ನಂತರ ಪೋಲಿಸರಿಗೆ ಎಲ್ಲ ತಿಳಿಸಿದಳು.ಪೋಲಿಸರು ಸೀತಾಳನ್ನು ಬಂಧಿಸಿದರು. ರಾಧಾ ಸೀತಾಳಿಗೆ ಅವತ್ತಿನ ಚೀಟಿಯನ್ನು ತರಲು ಮತ್ತು ಅದನ್ನು ಓದಲು ಹೇಳಿದಳು. ಸೀತಾ ಅದನ್ನು ತಂದು ಓದಿದಳು ಅದರಲ್ಲಿ ಬರೆದಿಟ್ಟು ಸತ್ಯ ಅಮರ ಸುಳ್ಳು ಕ್ಷಣಿಕ
ಧನ್ಯವಾದಗಳು
. ✍️ ನಿಶಾ
ರಾತ್ರಿ ವೇಳೆ ರಾಜುವಿನ ತಾಯಿ ಅವನಿಗೆ ಊಟ ಮಾಡಿಸುತಿದ್ದಾರೆ . ಆಗ ಮೇಲೆ ನೋಡಿದ ರಾಜು)
ರಾಜು :-ಅಮ್ಮ ಮೇಲೆ ಏನಿದೆ?
ಅಮ್ಮ :- ಆಕಾಶ
ರಾಜು:-ಹೌದಾ? ಅದರಲ್ಲಿ ಕೆಲವು ಚುಕ್ಕಿ ಹಾಗೆ ಇದೆ.
ಆ.. ಅದೇನು ಚಪಾತಿ ಹಾಗೆ ಇದೆ??
ಅಮ್ಮ: ಮಗು ಅದು ಚುಕ್ಕಿ ಅಲ್ಲಪ್ಪ ನಕ್ಷತ್ರ. ಅದು
ಚಪಾತಿ ಅಲ್ಲಾ ಚಂದ್ರ ಕಣೋ
ರಾಜು : ಹೌದಾ ನಾನು ಚಂದ್ರನ ಜೊತೆ
ಮಾತನಾಡುತ್ತೇನೆ.
ಅಮ್ಮ: (ನಗುತ್ತಾ) ಆಯ್ತು
( ಅಮ್ಮ ಮಲಗಲು ಹೊರಟರು)
ರಾಜು: ಚಂದ ಮಾಮ .......
( ರಾಜುವಿನ ಮುಗ್ಧತೆಗೆ ಚಂದಿರ ಪ್ರತ್ಯಕ್ಷನಾದ)
ಚಂದ್ರ: ಏನು ರಾಜು
ರಾಜು: ಏನು ಇಲ್ಲ ಇಡೀ ಹಳ್ಳಿ ಜನ ಮಲಗಿದ್ದಾರೆ.
ನೀನು ಮಲಗೂದಿಲ್ಲವಾ?
ಚಂದ್ರ: ಇಲ್ಲಪ್ಪ ನಾನು ಮಲಗಿದ್ರೆ ಹಳ್ಳಿಗೆ ಬೆಳಕು
ನೀಡೋರು ಯಾರು? ಅಲ್ವಾ
ರಾಜು : ಹೌದು ಆದ್ರೆ ನಿನ್ ಮನೆ ಎಲ್ಲಿದೆ?
ಚಂದ್ರ : ನನಗೆ ಮನೆ ಇಲ್ಲ ಪುಟ್ಟ
ರಾಜು : ಹಾಗಾದ್ರೆ ನಿಂಗೆ ಚಳಿ ಬಿಸಿಲು ಆಗಲ್ವಾ
ಚಂದ್ರ: ನಾನು ಹಗಲಲ್ಲಿ ಇರೋದಿಲ್ಲ . ಬಾನಿನಲ್ಲಿ ಚಳಿ.ಅನಿಸುವುದಿಲ್ಲ. ಇಲ್ಲಿ ಕಾಮನಬಿಲ್ಲು