ಕವನದ ಹೆಸರು :- ಭಾರತಾಂಬೆಗೆ ನನ್ನ ನಮನ
ರಚಿಸಿದವರು:-ಇಮ್ತಿಯಾಜ್ ಭರಮಸಾಗರ ***********
ಮನೆ ಮನದಲ್ಲಿಪುಟ್ ಎದ್ದೇಳಲಿ ದೇಶಭಕ್ತಿಯ ತರಂಗ
ಭಾರತ ಭೂಮಿ ಉದ್ದಗಲಕ್ಕೂ ಹಾರಲ್ಲಿ ತಿರಂಗ
ಇದರ ಮುಖಾಂತರ ತಿಳಿಸುವೆ ಭಾರತಂಬೆಗೆ ನನ್ನ ನಮನ
ಅದಕ್ಕಾಗಿ ಬರೆದಿರುವೆ ಈ ಒಂದು ಸಣ್ಣ ಕವನ
ಈ ಹಿಂದೆ ನಮಗಿತ್ತು ಬ್ರಿಟಿಷರ ಕಾಟ
ಅದಕ್ಕಾಗಿ ನಡೆಸಿದರು ನಮ್ಮ ಜನ ದೊಡ್ಡ ದೊಡ್ಡ ಹೋರಾಟ
ಒಗ್ಗಟ್ಟಿನಿಂದ ಒಂದಾದರೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹಟ
ಆದರೂ ಅವರಲ್ಲಿ ಇತ್ತು ಬ್ರಿಟಿಷರನ್ನು ಓಡಿಸಬೇಕೆಂಬ ದಿಟ್ಟ ನೋಟ
ಇದರ ಫಲವಾಗಿ ಇಂದು ರಾರಾಜಿಸುತ್ತಿದೆ ಈ ನಮ್ಮ ರಾಷ್ಟ್ರಧ್ವಜದ ಬಾವುಟ
ಇದು ಪ್ರಜಾಪ್ರಭುತ್ವದ ಶ್ರೇಷ್ಠ ಹಬ್ಬ
ಆಗಸ್ಟ್ 15 ರಂದು ಸ್ವಾತಂತ್ರದ ದೇಶದ ರಾಷ್ಟ್ರೀಯ ಹಬ್ಬ
ಮನೆ ಮನದಲ್ಲಿ ಪುಟದ್ದೇಳಲಿ ದೇಶಭಕ್ತಿಯ ತರಂಗ
ಭಾರತ ಭೂಮಿ ಉದ್ದಗಲಕ್ಕೂ ಹಾರಲಿ ತಿರಂಗ
ಇದರ ಮುಖಾಂತರ ತಿಳಿಸುವೆ ಭಾರತಾಂಬೆಗೆ ನನ್ನ ನಮನ
ಅದಕ್ಕಾಗಿ ಬರೆದಿರುವೆ ಈ ಒಂದು ಸಣ್ಣ ಕವನ
ಬೋಲೋ ಭಾರತ್ ಮಾತಾ ಕಿ ಜೈ
ಜೈ ಹಿಂದ್, ಜೈ ಭಾರತ್ ಮಾತಾ ಕಿ ಜೈ
ಕವನದ ಹೆಸರು:- ನೋಡುವ ಮನಸ್ಸಾಗಿದೆ
ರಚನೆ:-ಇಮ್ತಿಯಾಜ್ ಭರಮಸಾಗರ ***********
ನಿನ್ನ ನೋಡುವ ಮನಸ್ಸಾಗಿದೆ
ಅದಕ್ಕೆ ನಾನು ನಿನ್ನ ಹುಡುಕಾಡಿದೆ
ವಿಳಾಸ ತಿಳಿಯದೆ ನಾ ಊರಕೇರಿ ಅಲೆದಾಡಿದೆ
ಫೇಸ್ಬುಕ್ ನಲ್ಲಿ ನಿನ್ನ ಹೆಸರು ಹಾಕಿ ನೋಡಿದೆ
ವಾಟ್ಸಾಪ್ ನಲ್ಲೂ ನಿನ್ನ ಡಿಪಿ ಇಲ್ಲ
instagram ನಲ್ಲಿಯೂ ಸಹ ನಿನ್ನ ಡಿಪಿ ಇಲ್ಲವೇ ಇಲ್ಲ
ಹೇಗೆ ನಾ ನಿನ್ನ ಹುಡುಕಲಿ
ಹೇಗೆ ನಾ ನಿನ್ನ ನೋಡಲಿ
ಏನೆಂದು ನಾ ತಿಳಿಯಲಿ
ಡಿಜಿಟಲ್ ಯುಗದಲ್ಲಿ ಆ ದೇವರು ಸಿಗುವ ಈ ಕಾಲದಲ್ಲಿ
ನಿನ್ನ ಹುಡುಕಲು ಒಂದು ಹೊಸ ಸೊಲ್ಯೂಷನ್ ಬೇಕಾದಲ್ಲಿ
ಟಿವಿ9ಗೆ ನಾ ಮೊರೆ ಹೋಗುವೆ
ಎಲ್ಲಿರುವೆ ನೀ ಎಲ್ಲಿರುವೆ
ಹೇಗಿರುವೆ ನೀ ಹಾಯಾಗಿರುವೆ
ಪ್ರೇಮದ ಕವಿ ನಾ ಆಗಿರುವೆ
ನಿನ್ನ ನೆನಪಿನಲ್ಲಿ ಒಂದು ಕವನ ನಾ ಬರೆದಿರುವೆ
ನಿನ್ನ ನೋಡುವ ಮನಸ್ಸಾಗಿದೆ
ಕವನದ ಹೆಸರು:- ಕವನ ಕಾವ್ಯ ಬರೆಯುವುದು ನನ್ನ ಹವ್ಯಾಸ
ರಚಿಸಿದವರು:-ಇಮ್ತಿಯಾಜ್ ಭರಮಸಾಗರ ***********
ವೃತ್ತಿಯಲ್ಲಿ ನಾನು ವಿದ್ಯುತ್ ಗುತ್ತಿಗೆದಾರ
ಕವನ ಕಾವ್ಯ ಬರೆಯುವುದು ನನ್ನ ಹವ್ಯಾಸ
ಸುಮ್ಮನೆ ಇದ್ದರೂ ಬಿಜಿ ಇದ್ದರೂ ಮನಸ್ಸು ಬಿಡದು
ಏನಾದರೂ ಒಂದು ಬರೆ ಎದ್ದೇಳು ಎನ್ನುವ ಚಂಚಲ ಮನಸ್ಸು
ರಾತ್ರಿಯಲ್ಲಿ ತಲೆ ದಿಂಬು ಪಕ್ಕ ಪೆನ್ನು ಪೇಪರ್
ಹಗಲಲ್ಲಿ ಜೋಬು ತುಂಬಾ ಪೇಪರು ಪೆನ್ನು
ಯಾವ ನಿಮ್ಮಶದಲ್ಲಿ ಬರೆಯುವೆನು ತಿಳಿಯದು ಕವನವನ್ನು
ಹಾಗಾಗಿ ಸಿದ್ಧತೆ ಮಾಡಿಕೊಂಡಿರುವನು
ಬರೆದ ಕವನವನ್ನು ವಾಟ್ಸಾಪ್ ಮಾಡುವೆನು
ಗೆಳೆಯರಿಗೆ ಗೆಳೆಯತಿಯರಿಗೆ ಓದಿ ಕಮೆಂಟ್ ಮಾಡಿ ಎನ್ನುವೆನು
ಓದಿದವರು ಸಂತೋಷ ಪಡುವರು ಲೈಕ್ ಮಾಡುವರು
ಕೆಲವರು ಸುಮ್ಮನೆ ಇರುವವರು
ಕವನದ ಹವ್ಯಾಸದಿಂದ ಚಿಂತೆ ದೂರಾಗದು
ಬಿಪಿ ಶುಗರ್ ಬಾರದು
ಕವನ ಕಾವ್ಯ ಕಾದಂಬರಿ ಓದುವ ಹವ್ಯಾಸ ಇರಬೇಕು
ಬುದ್ಧ ಅಂಬೇಡ್ಕರರ ನೆಲದಲ್ಲಿ
ನಾನೊಬ್ಬ ಸ್ವಾತಂತ್ರ್ಯ ಪಕ್ಷಿ
ಇಲ್ಲಿ ಎಲ್ಲರು ಸಮಾನರು
ಇಲ್ಲಿ ಎಲ್ಲರು ಮನುಷ್ಯರು
ಇಲ್ಲಿದೆ ನ್ಯಾಯ ಪಶು ಪಕ್ಷಿಗೂ
ಗಿಡ ಮರ ಬಳ್ಳಿಗೂ.
ನಮ್ಮ ಶಾಂತಿಯ ನೆಲದಲ್ಲಿ
ಅಶಾಂತಿಯ ಆತ್ಮಗಳು
ಬಂದವರೆಲ್ಲರು ಹೊರಗಿನವರು
ಪ್ರಶಾಂತ ನೀರಿನಲ್ಲಿ ಕಲ್ಲು ಎಸೆದು
ಅಲೆಗಳು ಸೃಷ್ಟಿಸಿದಂತೆ
ಇವರ ಕೆಲಸಗಳು.
ನಮ್ಮ ಅರಿವು ನಮಗಿದೆ
ನಾವು ಯಾರು? ನಮ್ಮವರು ಯಾರು?
ತಿಳಿದವರು ನಾವು
ಮನುಷ್ಯರು ನೀವು
ನಮ್ಮಂತೆ ಮನುಷ್ಯರಾಗಿ ಬಾಳಿ
ನಮ್ಮ ನೆಲದಲ್ಲಿ ನಮಗೆ
ನೆಮ್ಮದಿಯಾಗಿ ಬದುಕಲು ಬಿಡಿ
ನಿಮ್ಮ ದ್ವೇಷ ನಿಮ್ಮ ಕೀಚ್ಚು ನಿಮ್ಮಲ್ಲಿರಲಿ
ದ್ವೇಷ ಕಿಚ್ಚಿಲ್ಲದ ಸ್ವಾತಂತ್ರ್ಯ ನಮ್ಮದಾಗಲಿ.
ಬೇಸರದ ಸಂಜೆ ಇದು
ನೀನಿರದೆ ನೊಂದು ಕಂಬನಿ ಮೂಡಿಹುದು..
ಹೇ ಏಕಾಂತವೇ ದೂರ ಸರಿದು ಬಿಡು..
ನನ್ನವನ ಒಲವಿನಲಿ ಮೀಯಲು ಅನುಮತಿ ನೀಡು
ವಿರಹವೇ ದೂರ ಸರಿಯೇ
ಒಲವಿನೌತಣವ ಉಣಬಡಿಸೇ..
ಪ್ರೀತಿಯ ಅಮಲಿದು..
ಸುಂದರ ಸೋಲಿದು..
ಮೌನದ ಮಾತಿದು...
ಆನಂದದ ನೋವಿದು..
ಎಲ್ಲವೂ ನಿನ್ನಿಂದಲೇ..
ಎಲ್ಲವೂ ನಿನಗಾಗಿಯೇ...