ನಿಮ್ಮಲ್ಲರ ಪ್ರೀತಿಗೆ
ನಾನೆಂದಿಗೂ ಚಿರಋಣಿ...
ನಿಮ್ಮ ಮಾತುಗಳೆಲ್ಲಾ,
ಸಿಹಿ ಜೇನಿನಾ ಹನಿ...
ರಕ್ತ ಬಂಧವಿಲ್ಲದಿದ್ದರೂ,
ನೀವೆಲ್ಲರೂ ನನ್ನ ಬಂಧುಗಳು...
ಶುಭ ಕೋರಿದ ಪ್ರತಿಯೊಬ್ಬರಿಗೂ,
ತುಂಬು ಹೃದಯದ ಧನ್ಯವಾದಗಳು
ಮೂಕನಾದೆನು ಕೇಳಿ,
ನಿಮ್ಮ ಪ್ರೀತಿಯ ಮಾತುಗಳ...
ಬರದಿರುವೆ ನಾನು
ಈ ಕವಿತೆಯ ಸಾಲಗಳು...
ಎಮ್.ಎಸ್.ಭೋವಿ...✍️
ನಿನ್ನ ನಾ ಏನೆಂದು ವರ್ಣಿಸಲಿ
ಮಲಗುವಾಸೆ ನನಗೆ ನಿನ್ನ ಮಡಿಲಲ್ಲಿ
ನಿನ್ನ ಒಂದೊಂದು ಮಾತು ಬಲು ಚೆನ್ನ
ನೀ ಮೌನವಾಗಿದ್ದರೆ ಅಪ್ಪಟ ಚಿನ್ನ
ನಿನಗೆಂದಿಗೂ ಕಾವಲು ಆಕಾಶ
ನಿನ್ನೊಳಗೆ ನಾ ಇರಲು ಕೊಡು ನನಗೊಂದು ಅವಕಾಶ
ನೀನು ಎಷ್ಟೊಂದು ಸುಂದರವಾಗಿರುವೆ
ನಿನ್ನ ವರ್ಣಿಸಿ ನಾ ಕವಿಯಗಿರುವೆ
ಬದುಕಿನಲ್ಲಿ ಹೊಸ ಭರವಸೆಯ ಬೆಳಕಿನೊಂದಿಗೆ...
ನಂಬಿಕೆಯ ಕೈಹಿಡಿದು ಹೊಸ್ತಿಲಲ್ಲಿ ಸೇರು ಒದ್ದು,
ಸಾಲು ಸಾಲು ಜವಾಬ್ದಾರಿಯ ತನ್ನ ಹೆಗಲ ಮೇಲೆ ಹೊತ್ತು,
ನೂರಾರು ಕನಸು ಕಟ್ಟಿ ಒಡಲು ತುಂಬಿಕೊಂಡಳು... ತನ್ನೊಡಲೊಳಗಿರುವಾಗಲೇ ನನ್ನ ಮೇಲೆ ಪ್ರಾಣವಿರುಸಿದವಳು.
ಹಡೆದು ಕಂದನ ಕಪ್ಪು ಬಿಳುಪು ಎನ್ನದೆ ತನ್ನಎದೆಗೆ ಅಪ್ಪಿ ಮುತ್ತಿಟ್ಟಳು.....
ಸಾವಿರ ಕನಸುಗಳ ತೊಟ್ಟಿಲ ಕಟ್ಟಿ ಮಲಗಿಸಿ ತೂಗಿದಳು.
ಬಲು ಸುಂದರ! ನನ್ನ ಮಗ ಎಂದು ಮೊದಲು ದೃಷ್ಟಿ ತೆಗೆದವಳು.
ಸ್ವಾಭಿಮಾನ,ಧೈರ್ಯ, ಆತ್ಮವಿಶ್ವಾಸ,ಛಲದ ಮೊದಲ ಪಾಠ ಕಲಿಸಿದವಳು ನನ್ನವ್ವ..
ತುತ್ತು ಕೊಟ್ಟು ಮುತ್ತನಿಟ್ಟು ಪ್ರಾಣವನ್ನೇ ಮುಡುಪಾಗಿಟ್ಟಳು.
ತೊರೆದು ಆಸೆ ಆಕಾಂಕ್ಷೆ ಮರೆತು ಅವಳ ಸುಖದ ಜೀವನವ ನಮಗಾಗಿ..
ಚಳಿ ಮಳೆ ಗಾಳಿ ಬಿಸಿಲೆನ್ನದೆ ದುಡಿದು ಗಂಡನಿಗೆ ಬಲವಾದಳು..
ತಾನುಟ್ಟ ಸೀರೆ ಹಳೆಯದಾದರೂ ನಂಬಿಕೆಯ ಸೂರು.. ತನ್ನೊಡಲ ಕಟ್ಟಿ ಮಕ್ಕಳು ಒಡಲಿಗೆ ತುತ್ತು ಅನ್ನವೂ ಕಡಿಮೆ ಮಾಡದವಳು
ಜೀವಿಸಿದಳು ಮಕ್ಕಳ ಖುಷಿಯನ್ನು ತನ್ನ ಖುಷಿಯಂತೆ ಸಂಭ್ರಮಿಸಿ..
ಗೆಲುವು ಸೋಲು ಸುಖವೋ ದುಃಖವೋ ನೆರಳಂತೆ ಜೊತೆಯಾಗಿರುವಳು
ತನಗಾಗಿ ಯಾವ ಪ್ರತಿಫಲವನ್ನು ಬಯಸದ ಜೀವ.... ನಿನಗೆ ನನ್ನ ನಮನ.
- ಸುದೀಪ್ ಎಚ್ ಟಿ
U29XR24E0081
ಸೂರ್ಯನು ಭೂಮಿಗೆ ಬೆಳಕು ಕೊಟ್ಟಂಗೆ
ನಾ... ನಿಂಗೆ ಪ್ರೀತಿ ಕೊಡ್ತೀನಿ
ಬೆಳಂದಿಂಗಳ ಚಂದ್ರನಂತೆ
ನಾ... ನಿನ್ನ ಬಾಳಿಗೆ ನೆರಳಗ್ತಿನಿ
ಕಟು ಮನಸಿನ ಹೃದಯವು ನಂದೈತಿ
ಈ ಮನಸಿಗೆ ಪ್ರೀತಿ ಕೊಡೋ ದೈರ್ಯ ನಿಂಗೈತಿ
ಗುಲಾಬಿ ಹೂವ್ನ ಮುಳ್ಳು ಕಾದಂಗ
ನಾ... ನಿನ್ನ ಕಾಯ್ತಿತಿನಿ ಗೆಳತಿ....
ಎಮ್.ಎಸ್.ಭೋವಿ...✍️