ಕನ್ನಡದ ಹುಡುಗಿ ನಮ್ಮ ಸೌಪರ್ಣಿಕ
ಇವರಾಡುವ ಕನ್ನಡ ಮನಮೋಹಕ
ಇವಳ ಹಣೆಯ ಮೇಲಿದೆ ಕನ್ನಡದ ತಿಲಕ
ಇವಳೊಂದು ಅಪ್ಪಟ ಕನಕ
ಇವಳ ಸೌಂದರ್ಯ ನೋಡಿ ನಾನಾದೆ ಪುಳಕ
ಇವಳಿಗೆ ನನ್ನ ಈ ಕವಿತೆ ಸಮರ್ಪಕ.
.................................................
ನಾ ಬರೆದೆನು ನಿನಗಾಗಿ ಸುಂದರ ಕವನ
ಬರೆದ ಕವನಗಳಿಗೆ ಆದೆ ನೀ ಸಂಕಲನ
ನನ್ನ ಪ್ರತಿ ಪದಗಳ ಸಾಲಿನಲ್ಲಿ ನೀನೆ ತುಂಬಿ ಕಾಂಚನ
ನನ್ನ ಹೃದಯ , ಮನಸ್ಸಿಗೆ ನೀನೆ ಆಗಿರುವೆ ಸಿಹಿ ಸಿಂಚನ
ಇರಲಾರೆನು ನಿನ್ನ ಬಗ್ಗೆ ಕನಸು ಕಾಣದೆ ಪ್ರತಿದಿನ
ನಿನ್ನ ನೆನೆದು ನನ್ನ ಪ್ರೀತಿಗೆ ಕಾಯುವೆನು ಈ ಜೀವನ
ನಗುವ ಹೂವು ಕಂಡೆ ನಾನೊಂದು
ಆ ನಗುವಿಗೆ ಶರಣಾದೆ ಹುಣ್ಣಿಮೆಯ ಚಂದಿರನೆಂದು
ಹೂ ನಗುವಿನ ಪ್ರಭಾವಕ್ಕೆ ಹೃದಯವೇ ಹಣ್ಣಾಗಿದೆ ಇಂದು
ಚೆಲುವೆಯೇ ನಿನ್ನ ನೋಡಿದೆ ಪರಿಪರಿಯಾಗಿ ಹೂವೆಂದು
ಪರಿಮಳ ಬೀರುವ ಹೂವು ನೀನೆಂದು
ನಗುವೆ ನಿನ್ನ ಚಿನ್ನಾಭರಣ
ನಗುತಿರಲು ನೀನು ನನ್ನ ಬಾಳ ಬೆಳಗುವ ಹೊಂಗಿರಣ…
ಕಾಯ್ದು ಕಾಯ್ದು ಸುಸ್ತಾಗಿ ಈ ಮನಸು ಕರ ವಸ್ತ್ರದಿಂದ ಬಂದು ಕಣ್ಣೀರು ಒರಿಸು ಇಲ್ಲವೆಂದರೆ ಅದೇ ಕೈಗಳಿಂದ ಉಸಿರನ್ನು ನಿಲ್ಲಿಸು ಇದರ ಮೇಲೆ ನನ್ನ ಮೇಲೆ ನಿನಗೆ ನಂಬಿಕೆ ಬಂದಿಲ್ಲ ಅಂದರೆ ಮನ್ನಿಸು ಮನ್ನಿಸು
pachii
ನಿನ್ನ ಬಿಸಿ ಉಸಿರು ನನ್ನ ತಾಕಲು
ಮರೆವೆ ನನ್ನನ್ನೇ, ನೀ ಸನಿಹವಿರಲು..
ಎಂಥ ನಿರ್ಭಯ ನಿನ್ನ ಅಪ್ಪುಗೆಯಲಿ..
ಏನೋ ನೆಮ್ಮದಿ ನಿನ್ನ ಮಡಿಲಲಿ..
ಆಂತರ್ಯದಲಿ ಅಮ್ಮನಾದೆ..
ಅಕ್ಕರೆಯಲಿ ಅಪ್ಪನಾದೆ..
ಒಮ್ಮೆ ಸಂತೈಸುವ ಸ್ನೇಹಿತನಾದೆ..
ಮತ್ತೊಮ್ಮೆ ಪ್ರೇಮಿಸುವ ಪತಿಯಾದೆ...
ಸರ್ವವು ನೀನೆಯಾಗಿ, ಸರ್ವಸ್ವವೂ ನಿನ್ನದಾಗಿದೆ..
ಬಿಡಿಸಲಾಗದ ಬಂಧ ನಮ್ಮದು, ದೂರಾಗದ ದಾಂಪತ್ಯವದು...
ಕೈಯಹಿಡಿದು ಹೆಜ್ಜೆ ಹಾಕುವೆ ಕೊನೆಯ
ಪಯಣವರೆಗೂ..
ಚಿತೆಯಲು ಜೊತೆಯಾಗುವೆ, ಇನ್ನೇನಿದೆ ಈ ಜಗದಲಿ ನಿನ್ನ ತೊರೆದು..