ಘಾಟ್ಬೊರಳ ಗ್ರಾಮದಿ ಮೂಡಿದ ಬಾಲ ಚಂದಿರ,
ಶಿವಲಿಂಗರ ಶಿಶುವಾಗಿ ವ್ಯಾಸರಾಯರಂತೆ ಪಡೆದರು ವಿದ್ಯಾಸಂಸ್ಕಾರ.
ಶಿಕ್ಷಕರ ಮಗನಾದ ಪರ್ವತಯ್ಯ ಸ್ವಾಮಿಗೆ ಲಭಿಸಿತು ಸರ್ಕಾರಿ ಉದ್ಯೋಗ,
ಜ್ಯೋತಿ ಬಾರಂತೆ ಶಿಕ್ಷಣ ಪ್ರಗತಿಗೆ ಶ್ರಮಿಸಲು ಹುಡುಕಿದರು ಹೊಸ ಮಾರ್ಗ.
ಸುಸಂಸ್ಕೃತ ಸಾತ್ವಿಕೆ ಪಾರ್ವತಿಯವರಿಗೆ ಮನಸೋತ ಕುವರ,
ಅನ್ಯೂನ್ಯತೆಗೆ ಹೆಸರಾದ ಅವರ ಬದುಕು ಎಷ್ಟು ಸುಂದರ!.
ಜನುಮದ ಜೋಡಿಗೆ ಆರು ಋತುಗಳ ಸ್ತುತಿಗೆ ಜನಿಸಿದರು 6 ಮಕ್ಕಳು,
ತಂದೆಯ ಶಿಸ್ತಿಗೆ ಹೆಸರಾದ ಭಾವೈಕ್ಯತೆ ಹೂಗಳು.
ಶಾರದೆಯಂತ ಸತಿಗೆ ತಮ್ಮ ಮಕ್ಕಳೊಂದಿಗೆ ಕೊಡಿಸಿದರು ಶಿಕ್ಷಣ.
ಶಿಕ್ಷಕಿಯಾಗಿ ಸ್ಮರಿಸುತ್ತಿಹ ರು ಪಾರ್ವತಿ ಪತಿಯ ಪ್ರೇರಣೆಯ ಅನುಕ್ಷಣ.
ಅಂದೆ ಹೆಣ್ಣಿನ ಸ್ವಾವಲಂಬನೆ ಬದುಕಿಗೆ ಶ್ರಮಿಸಿದ ಮಹಾಪುರುಷ,
ಸತಿಯ ವಚನಮೃತದಲ್ಲಿ ಅರಳಿದ ಮಕ್ಕಳ ಉಜ್ವಲ ಭವಿಷ್ಯವು ನೀಡಿದೆ ದಂಪತಿಗಳಿಗಿಂದು ಮರೆಯಲಾಗದ ಹರ್ಷ.
ಸ್ತ್ರೀಯರ ಸ್ವಾಭಿಮಾನದ ಬದುಕಿಗೆ ಸ್ಪೂರ್ತಿಯಾಗಿ ಸಮಾಜ ಸೇವೆಗೆ ಸತಿಯನ್ನು ಸಜ್ಜುಗೊಳಿಸಿದ ಮಹಾನ್ ನಾಯಕ,
ಗೃಹಲಕ್ಷ್ಮಿಯಾಗಿ ಪತಿಯ ಕನಸನ್ನು ನನಸಾಗಿಸಿದ ಪಾರ್ವತಿ ಅಮ್ಮನವರ ಸಾಧನೆಯೆ
ಹೆಣ್ಣು ಕುಲಕಿಂದು ಸ್ಪೂರ್ತಿದಾಯಕ.
ಶಿಕ್ಷಣಕ್ಕೆ ಮಾದರಿಯಾಗಿರುವ ಈ ಜೋಡಿಯನ್ನು ಮರೆಯಬಾರದು ನಾವು ಕೊನೆಯ ತನಕ,
ಇಂಥವರ ಸನ್ಮಾರ್ಗದಲ್ಲಿ ಬೆಳೆಯುವ ಮಕ್ಕಳ ಬದುಕು ಸಾರ್ಥಕ.
ಆದರ್ಶ ದಂಪತಿಗಳಾದ ನಿಮಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ನಾ ಗುರುಗಳಿಗಾಗಿ ಬರೆದಿರುವೆ ಈ ಪುಟ್ಟ ಕವನ
ಆರಂಭದಲ್ಲಿಯೇ ನಾ ಹೇಳುವೆ ಹೃದಯವಂತ ಗುರುಗಳಿಗೆಲ್ಲ ಹೃದಯಪೂರ್ವಕ ನಮನ.
ಕಾರಣ ಇವರೆಲ್ಲ ನಮಗೆ ದೇವರ ಸಮಾನ.
ಭೂಮಂಡಲದಲ್ಲ್ಯಾರಿಲ್ಲ ಗುರುಗಳ ಸಮಾನ.
ದೇವರು ಕೊಟ್ಟ ಅಪರೂಪದ ಈ ವರದಾನ.
ಗುರುಗಳೆಲ್ಲರಿಗೂ ನಮ್ಮೆಲ್ಲರ ಭಾವದಾನ.
ವಿದ್ಯಾರ್ಥಿಗಳೆಂಬ ನೆಲಕೆ ಗುರುಗಳೆಲ್ಲರೂ ಬಿತ್ತುವರು ಜ್ಞಾನದ ಬೀಜಾನ.
ನೆಲವೆಂಬ ಹೃದಯದಿ
ಫಲವೆಂಬ ಜ್ಞಾನವ ಬೆಳೆಸುವುದು ಗುರುಗಳ ಮನ.
ಗುರುಗಳ ಪರಿಚಯ ನಮಗೆ ದೈವದತ್ತ ಬಹುಮಾನ.
ನಾ ಹೃದಯದಿ ಹೇಳುವೆನು ಕೊನೆವರೆಗೂ
ಗುರುಗಳಿಗೆ ಕೋಟಿ ಕೋಟಿ ಭಕ್ತಿಪೂರ್ವಕ ನಮನ...
ಅಪ್ಪಿ..
ನಿನ್ನ ಕನ್ನೋಟದ ಕಣ್ಣು ರೆಪ್ಪೆಗಳ ಕಂಡು ಕನಸು ಕಂಡವನು ನಾನು.
ನಿನ್ನ ಮುದ್ದು ಮುಖದ ಮಂದಹಾಸ ಕಂಡು ಮರಳಾದವನು ನಾನು.
ಎಷ್ಟೋ ಸಲ ನಿನ್ನ ಕಿರು ನಗೆಗಾಗಿ ಕಾಯುತ್ತಾ ನಿಂತವನು ನಾನು.
ನಿನ್ನ ಕಿರುಬೆರಳು ಹಿಡಿದು ನಡೆಯುವಾಗ ಈ ಜಗತ್ತೇ ನನ್ನದು ಎಂದವನು ನಾನು.
Love You Dada..
ಕಾಣದೆ ಕಂಡೆನು ಒಂದು ದಿನ
ಅದುವೇ ನಮ್ಮ ಭಾರತ ಮಾತೆ
ಬಡತನದ ಬೆಳದಿಂಗಳ ದೀಪ
ವೀರ ಸ್ವಾಮಿ ಸೀತಾಮಾತೆಯ ಪುತ್ರ
ಸೆಪ್ಟಂಬರ್ 5 ರಂದು ಜನಿಸಿದ ಕಣ್ಮಣಿ
ದಕ್ಷಿಣ ಭಾರತಕ್ಕೆ ಕಾಲಿಟ್ಟ ಸರ್ವಪಲ್ಲಿ
ವಿದ್ಯಾರ್ಥಿ ವೇತನದಿ
ಪ್ರೌಢ ಶಿಕ್ಷಣ ಮುಗಿಸಿದ ಪೌರ
ಕ್ರಿಶ್ಚಿಯನ್ ವಿದ್ಯಾ ಮಂದಿರದಿ
ತತ್ವಜ್ಞಾನಿ ಪದವಿ ಪಡೆದ ಪಂಡಿತ
ನೈತಿಕತೆ ವೇದಾಂತ ವಿಚಾರವಾದಿ
ಸ್ನಾತಕೋತರ ಪದವಿಯ ವಿದ್ಯಾರ್ಥಿ
ದೇಶ ಕಟ್ಟುವ ನಾಯಕ
ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕ ಪಠಿಸಿ
ಗಮನ ಸೆಳೆದ ಸಾಧಕ
ದೇಶದೊಳಗಿನ ಕಲಹಗಳಿಗೆ
ನಾಂದಿ ಹಾಡಿದ ಸುಧಾರಕ
ದೇಶದ ಅಭಿವೃದ್ಧಿಗೆ ಶ್ರಮಿಸಿದ ಗೀತಾಂಜಲಿ
ನಮ್ಮ ದೇಶದ ರಾಷ್ಟ್ರಪತಿ
ಹಸಿದವರ ಪಾಲಿನ ಅಮೃತವಾಣಿ
ಅನಾಥ ಮಕ್ಕಳ ಮಧುರ ವಾಣಿ
ಅಂದ ಕಂದಮ್ಮಗಳ ಕಣ್ಮಣಿ
ಶಿಕ್ಷಕ ವೃತ್ತಿಯ ಆಶಾಕಿರಣ
ಭಾರತ ಶಾಲೆಗಳಲ್ಲಿ ಭಾವ ಶಿರೋಮಣಿ
ನಮ್ಮಯ ಭಾರತರತ್ನ
ಅವರಿಗೊಂದು ಅಭಿಲಾಷೆ
ಹೆತ್ತವರ ಮುದ್ದಿನ ಕೂಸಗುವಾಸೆ
ಅವರಿಗೊಂದು ಕಡೆಯ ಆಸೆ
ಆದರ್ಶ ಶಿಕ್ಷಕರಾಗುವ ಆಸೆ
ಅವಿಸ್ಮರಣೀಯವಾಗಿ ಅಚ್ಚರಿಯಾಗಿ
ಎಲ್ಲರ ಮನದಲ್ಲಿ ಉಳಿಯುವ ಆಸೆ
ಅವರೇ ನಮ್ಮ ಬ್ರಹ್ಮ ವಿದ್ಯಾ ಭಾಸ್ಕರ
ಅಂದು ಅವರು ಜನ್ಮ ದಿನದ ನೆನಪು
ಇಂದು ಶಿಕ್ಷಕರಿಗೆ ಗೌರವ ಸಲ್ಲಿಸುವುದು ಶುಭಾಶಯಗಳು ಕೋರುವ ಸವಿನೆನಪು
ಅದುವೇ ನಮ್ಮ ಶಿಕ್ಷಕರ ದಿನವು
ಅವರೇ ನಮ್ಮಯ ಶಿಕ್ಷಕರು
ಅವರೇ ನಮ್ಮ ಸರ್ವಪಲ್ಲಿ ರಾಧಾಕೃಷ್ಣನ್ ರವರು
ನಾಡಿನ ಸಮಸ್ತ ಗುರು ವೃಂದಕ್ಕೆ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಚಿರಕಾಲ ಸ್ಮರಿಸುವನು
ಶಿರವಾಗಿ ನಮ್ಮ ಗುರುಗಳ ಎದುರು.......
ಕೈಯಲ್ಲಿ ಕೋಟಿ ಇದ್ದರು ಹಿರಿಯರ
ಕಂಡೊಡನೆ ಕಾಲಿಗೆ ಬೀಳೋದ ಸಂಸ್ಕಾರ
ಎಷ್ಟೇ ಆಧುನಿಕತೆ ಬಂದರು ಹಣೆಯ
ಮೇಲಿನ ಬೊಟ್ಟು ಸಂಸ್ಕಾರ
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರುಗಳು
ಕಂಡಾಗ ತೋರುವ ಭಯ ಭಕ್ತಿ ಸಂಸ್ಕಾರ......
ಮೊದಲ ಪ್ರಯತ್ನದಲ್ಲಿ
ಗೆಲ್ಲುವವರು ಬದುಕಿನಲ್ಲಿ
ಗೆಲ್ಲಬಲ್ಲರು. ಆದರೆ
ಮೊದಲ ಪ್ರಯತ್ನದಲ್ಲಿ
ಸೋತವರು ಜಗತ್ತನ್ನೆ
ಗೆಲ್ಲಬಲ್ಲರು.ಯಾಕೆಂದರೆ
ಸಂಕಟದೊಂದಿಗೆ ಸೇಣೆಸಾಡುವ
ಮನಸ್ಸಿಗೇ ಛಲ ಹೆಚ್ಚು...................