ನನ್ನ ತೋಳಲ್ಲಿ ನೀನು ನಿನ್ನ ಮಡಿಲಲ್ಲಿ ನಾನು
ನನ್ನ ಹೃದಯದ ಸೈಟಲ್ಲಿ ಜಾಗವೂ ಬೇಕೇನು...?
ಬಾಡಿಗೆಯು ಬೇಕಿಲ್ಲಾ ತೆರಿಗೆ ಕಟ್ಟುವ ಹಾಗಿಲ್ಲಾ
ಬಂದು ಆಕ್ರಮಿಸು ನಿನಗಷ್ಟೇ ಹಕ್ಕು ನೀಡಿರುವೆನಲ್ಲಾ...!
ಈ ಹೃದಯದ ಅರಮನೆಗೆ ರಾಣಿಯು ನೀನು
ಸೈನಿಕನು ಸೇವಕನು ಎಲ್ಲವೂ ನಾನು
ಈ ಬಡಪಾಯಿ ಹೃದಯಕೆ ಕಾಲಿಡುವೆಯಾ ಕಾಲಿಂದಲೇ
ತುಳಿದು ಕೊಲ್ಲವೆಯಾ ನಾನರಿಯೇ...? ಎಲ್ಲವು ನಿನ್ನಿಚ್ಚೇ,
ನನ್ನಿಚ್ಚೆಯಂತೆ ನಡೆದು ಒಪ್ಪಿದರೆ ನಿನ್ನ
ಮುಪ್ಪಿನಲ್ಲೂ ಬಿಡದೆ ಕಾಯುವೆನು ನಿನ್ನಾ
ಉಪ್ಪಿದ್ದರೂ ಇರದಿದ್ದರೂ ತಿಂದು ಬದುಕುವೇ
ಮಾಡಿ ಹಾಕಿದನ್ನಾ....
ನಾನು ನಿನಗಿಷ್ಟವಿದ್ದರೆ ಹೇಳು
ಕಷ್ಟಪಟ್ಟು ಇಷ್ಟಪಡುವುದು ನನಗೆ ಇಷ್ಟವಿಲ್ಲಾ
ಒಪ್ಪದಿದ್ದರೇ ಮರೆತು ಮರೆಯದೆಯೇ ಬದುಕುವೇ
ಇನ್ನುಳಿದ ದಿವಸ ಒಬ್ಬಂಟಿಯಾಗಿ....!..
,,,,prashi yadav,,,,,,
ಆಕಾಶದಲ್ಲಿರೋ ಸಾವಿರಾರು ನಕ್ಷತ್ರಗಳ ನಡುವೆ ಇರೋ ಧ್ರುವತಾರೆ ಇದ್ದಂಗೆ.....
ಹುಣ್ಣಿಮೆಯ ಕಡುರಾತ್ರಿಯಲಿ ಹೊಳೆಯೊ ಚಂದಮಾಮ ಇದ್ದಂಗೆ.....
ವೃತ್ತಿಯಲ್ಲಿ ದೇಶ ಕಾಯೋ ಸೈನಿಕ ಆದ್ರೂ ಸಹ ನನ್ನ ಹೃದಯ ಆಳುವ ಮಹಾರಾಜ ಇದ್ದಂಗೆ....
ಕನ್ನಡಿಯಲ್ಲಿ ನನ್ನ ನೋಡಿಕೊಳ್ಳೋ ಪರಿವೆ ಇಲ್ಲ ಅವನು ನನ್ನ ಪ್ರತಿಬಿಂಬ ಇದ್ದಂಗೆ.....
ನೋವಲ್ಲಿದ್ದಾಗ ನನ್ನ ನಗಿಸೋ joker ಇದ್ದಂಗೆ.....
ಯಾವಾಗಲು ನನ್ನ ಕಾಯೋ unpaid bodyguard ಇದ್ದಂಗೆ.....
ಎಷ್ಟೇ ಕಷ್ಟ ಕೊಟ್ರು ನನ್ನ ಬಿಟ್ಟ ಹೋಗ್ದೇ ಇರೋ ಬೆನ್ನಿಗೆ ಬಿದ್ದ ಬೇತಾಳನಂಗೆ.....
ಹೃದಯಕಂಟಿ ಕೊಂಡಿರೋ ಬಿಡಿಸಲಾಗದ ಜಿಗಣೆ ಹಂಗೆ......
ಸಿಟ್ಟದಾಗ ಹೆಡೆಯೆತ್ತಿ ಬುಸುಗುಟ್ಟೋ ಹಾವಿನಂಗೆ....
ಮಗು ತಪ್ಪು ಮಾಡಿದಾಗ ತಿದ್ದಿ ಹೇಳೋ ತಾಯಿ ಇದ್ದಂಗೆ.....
ಜೀವನ ಪೂರ್ತಿ ಜೊತೆಗೆ ಇರ್ತಿನಿ ಅನ್ನೋ ಒಂದೇ ಒಂದು ಜೀವ ಅವನು,ನನ್ನ ಜೀವ ಇದ್ದಂಗೆ....
ಎಷ್ಟು ಹೊತ್ತು ಓದ್ತೀಯಾ ಅಂತ ಕೇಳ್ಲಿಲ್ಲ ನನ್ನ ಹುಡ್ಗ,
ಮೂರ್ ಹೊತ್ತು ಎಮ್ಮೆ ತರ ತಿನ್ನೋದು ಮಾತ್ರ ಬಿಡಬೇಡ ಎಂದ.....
ಎಷ್ಟ phone use ಮಾಡ್ತೀಯಾ ಅಂತ ಬೈಯ್ಲಿಲ್ಲಾ ನನ್ನ ಹುಡ್ಗ ,
daily extra data pack ಅವ್ನೆ ಹಾಕಿಸ್ತೀನಿ ಎಂದ ....
ಜಾಸ್ತಿ ಹೊತ್ತು ನಿದ್ದೆ ಮಾಡೆಂದ ನನ್ನ ಹುಡ್ಗ ,
ಆರೋಗ್ಯ ಚೆನ್ನಾಗಿರತ್ತಂತಲ್ಲ ನನ್ನ ಕಾಟ ಸ್ವಲ್ಪ ಹೊತ್ತಾದ್ರು ತಪ್ಪುತ್ತೆ ಎಂದ....
ಚೆನ್ನಾಗಿ ಓದಿ ಡಿಗ್ರೀ ಮಾಡು ಅನ್ಲಿಲ್ಲ ನನ್ನ ಹುಡ್ಗ,
ಡಿಗ್ರೀ ಆಗ್ಲಿಲ್ಲ ಅಂದ್ರು ಪರವಾಗಿಲ್ಲ ಕಸಮುಸುರೆ ಮಾಡಕ್ಕಾದ್ರು ಕಲಿಯಂದ ....
valentine's day ಗೆ gift ಏನೂ ಕೊಡಲಿಲ್ಲ ನನ್ನ ಹುಡ್ಗ,
ಯಾಕ್ ಅಂದ್ರೆ costly ಹೃದಯಾನೇ ಕೊಟ್ಟೀನಿ ಎಂದ........
ಮಹಿಳೆಯರಿಗೆ ಉಚಿತ ಪ್ರಯಣ
ಅಂಥದ್ದೇನೋ ಸರ್ಕಾರ ಮಾಡವ್ರೆ...
ನನ್ನವಳಿಗೆ ನನ್ನ ಮನ್ಸು , ಕನ್ಸು
ಬಿಟ್ಟು ಬೇರೆ ಯಾವ್ದೇ ಉಚಿತ
ಪ್ರಯಾಣ ಬೇಡ ಅಂತ ಕಾಣ್ಸುತ್ತೆ...
ಹಳೆ ಪ್ರೇಯಸಿ ಆಣೆಗೂ ಅವಳು
ನೋಡೋ ನೋಟಕ್ಕೆ ನಾ
ಸೋತ್ರು ಪ್ರತಿ ಬಾರಿ ಸ್ವರ್ದಿಸುವ....
ಎಮ್.ಎಸ್.ಭೋವಿ...✍️
ಒಲವು ಮೌನವಾಗಿ ಮನವ ಸೇರಿದೆ...
ಸರಿ ತಪ್ಪು ತಿಳಿಯದಾಗಿದೆ...
ಎಂದೋ ಕಾದಿದ್ದ ದಿನಾವಿಂದು ಕಣ್ಣೆದುರು
ಬಂದಂತಾಗಿದೆ..
ಒಪ್ಪಿಗೆಯ ಸೂಚಿಸಲೇ...?
ಅಪ್ಪುಗೆಯಲಿ ಬಂಧಿಯಾಗಿಬಿಡಲೇ...?
ಪ್ರೀತಿಯಲಿ ಈ ಸೆಳೆತವೇಕೊ ಕಾಡಿಹುದು..
ನೀ ಜೊತೆ ಇದ್ದರೆ ಕಹಿಯೂ ಸಿಹಿಯಾಗುವುದು..
ತಿಳಿದು ತಿಳಿಯದ ನಲ್ಮೆ ನಿನ್ನದು..
ಬೇಕಿದ್ದೂ ಬೇಡವೆಂದ ಹೃದಯ ನನ್ನದು...
ಹೇ ರಾಧೆ..
ನಿನ್ನ ನೋಡಿ ನಾನು ಮತ್ತೊಮ್ಮೆ ಮಾಧವನಾದೆ..
ನಿನ್ನ ಬರುವಿಕೆಗೆ ಈ ಜನ್ಮದವರೆಗೂ ನಾ ಕಾದೆ..
ನಿಲ್ಲೇ ನಿಲ್ಲೇ ನೀ ಎಲ್ಲಿಗೆ ಹೋದೆ.?
ನಿನ್ನ ಮಡಿಲಲ್ಲಿ ನಾನು ಮರಳಿ ಮಾಗುವಾದೆ.