Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಲ್ಪನೆಗೆ ಬಿಟ್ಟಿದ್ದು

ಬಾನಿನಲ್ಲಿ ಹಕ್ಕಿಗಳ ನೋಡುವ ಆಸೆ
ಭುವಿಯಲ್ಲಿ ನಿಸರ್ಗ ನೋಡುವ ಆಸೆ
ಎನ್ನ ಮನಕ್ಕೆ ನಿನ್ನ ನೋಡುವ ಆಸೆ


ಶಶಿ ಇರಳಲ್ಲಿ ಬೆಳಗುವನು
ರವಿ ಹಗಲಲ್ಲಿ ಬೆಳಗುವನು
ನೀ ಎನ್ನ ಮನದಲ್ಲಿ ಬೆಳಗುವೆ


ಕವಿ ಕಾಣದೆ ಇರುವ ಕಾಲ್ಪನಿಕ ಚಿತ್ರವಿಲ್ಲ
ಭಾಸ್ಕರನು ಬೆಳಗದೆ ಇರುವ ದಿನವಿಲ್ಲ
ನಾ ನಿನ್ನ ನೆನೆಯದ ಕ್ಷಣವಿಲ್ಲ

- Nikhil

07 Nov 2023, 07:58 am

ನೆನಪು

ನೆನಪಾಗುವುದು ಎನ್ನಲು ಮರೆತಿದ್ದರೇ ತಾನೇ

ಆ ನೆನಪುಗಳ ಬತ್ತಳಿಕೆ ನೀಡಿ ಹೋದವನು ನೀನೇ

ಅದ ಹೊತ್ತು ತಿರುಗಲಾಗದೆ ನಾ ಸೋತು ಹೋಗುತ್ತೀರುವೆನೆ

ಆದರೂ ಅದು ಬರೀ ನೆನಪಲ್ಲ ಸಿಹಿ ಕ್ಷಣಗಳ ಬುತ್ತಿ ಎನ್ನುವೆನು ನಾನೇ

- Varshini Hebbar

06 Nov 2023, 07:45 pm

ಭಗೀರಥ

ಭಗೀರಥ ಬಂದನು ಭೂಮಿಗೆ
ಗಂಗೆಯ ಇಳಿಸಿದ ಧರೆಗೆ
ಹರಿದು ಬಂದಿತು ಭಸ್ಮದ ಕಡೆ

ಸ್ವರ್ಗವು ಲಭಿಸಿತು ಪೂರ್ವಜರಿಗೆ
ತಪಸ್ಸು ಯಶಸ್ವಿಯಾಯಿತು
ರಘುವಂಶದ ಕಡೆಗೆ
ಗಂಗೆಯು ಹರಿಯಿತು
ಹಿಮಾಲಯದ ಕಡೆ

ರಭಸವು ಹರಿಯಿತು ಜಲಜಲನೆ
ಇದನ್ನು ತಪ್ಪಿಸಲು ಶಿವನ ಜಡೆಗೆ
ಹರಿಯ ಪಾದದಿಂದ ಝರಿಗೆ
ಇದುವೇ ಭಗೀರಥ ಸಾಧನೆಯೆಡೆಗೆ



ವಿರೇಶ ಉಪ್ಪಾರ್


- Viresh uppar

05 Nov 2023, 08:50 am

ಈ ಕ್ಷಣ

ದಿನಗಳು ಉರುಳುತ್ತಿದೆ, ಕಾಲ ಸಾಗುತ್ತಿದೆ
ನೆನ್ನೆಗಳು ಕಳೆದು ಹೋದವು ಲೆಕ್ಕಕ್ಕೆ ಸಿಗದಂತೆ
ಬರುವ ನಾಳೆಗಳ ಬಗ್ಗೆ ಯಾರಿಗೆ ತಾನೇ ತಿಳಿದಿದೆ
ಜೀವಿಸು ನೀನು ಈ ಕ್ಷಣ ಮಾತ್ರ ನಿನ್ನದೆಂಬಂತೆ

-ವರ್ಷಿಣಿ

- Varshini Hebbar

01 Nov 2023, 08:20 pm

.....

ನಗುವೆಲ್ಲೊ ಮರೆಯಾಗಿದೆ,,,,
ಮರೆಯಲ್ಲೂ ಏನೋ ಒಂದು ನೆನಪಾಗಿದೆ,,,
ಆ ನೆನಪೇ ನೀನಾಗಿಹೆ....!!!

- Megha

01 Nov 2023, 01:27 pm

ಸ್ನೇಹಿತ

ಹೊಸ ಜಾಗ ಹೊಸ ಜನರ ನಡುವೆ ಪರಿಚಯದ ಮೊಗವಾದವನು ನೀ

ಮನೆಗೀಳಿನಲ್ಲಿರುವಾಗ ಮನದ ಮೂಲೆಯಲ್ಲಿ ಗೂಡು ಕಟ್ಟಿ ಕೊಟ್ಟವನು ನೀ

ನಾ ಆಡದೆ ಉಳಿದ ಮಾತನ್ನು ಅರ್ಥೈಸಿ ಕೊಂಡವನು ನೀ

ಮೊದಲೇ ಸಿಗಬಾರದಿತ್ತೆ ಎನ್ನುವಷ್ಟು ಮನಸ್ಸಿಗೆ ಹತ್ತಿರವಾದವನು ನೀ

ನಿಷ್ಕಲ್ಮಶ ಸ್ನೇಹ ಎಂಬ ಪದದ ಅರ್ಥ ತಿಳಿಸಿಕೊಟ್ಟವನು ನೀ

- ವರ್ಷಿಣಿ

- Varshini Hebbar

31 Oct 2023, 05:21 pm

ಬದುಕು

ಬದುಕೊಂದು ವಿಧಿ ನಡೆಸುತ್ತಿರುವ ಆಟ....
ಪ್ರತಿ ಹೆಜ್ಜೆಗೊಂದು ಕಲಿಸುತ ಪಾಠ ...
ನಡೆಯುತ್ತಿರು ನಗುವಿನಲಿ ಅವಮಾನಗಳ
ಮರೆಯುತಲಿ...
ಆತ್ಮಬಲದ ಎಂದೆಂದಿಗು ಇರಲಿ
ಸಾಗಲಿ ಜೀವನ ......//


ಕಾಣದ ಕಡಲಿಗೆ ಹಂಬಲಿಸುತಲಿ...
ಪಯಣವು ಮುನ್ನಡೆಯಲಿ....
ಆತ್ಮಸಾಕ್ಷಿ ಎದೆಗುಂದದಿಲ್ಲಿ...
ಸಾಗಲಿ ಜೀವನ...//

ಹಾರುವೆ ನೀ ಒಮ್ಮೆ ಎತ್ತರದಲಿ...
ಕಡೆಗಣಿಸಿದವರು ತಲೆ ಎತ್ತಿನೊಡಲಿ....
ಎಲ್ಲರೂ ನಿನ್ನನ್ನು ಪ್ರೀತಿಸುವಂತಾಗಲಿ
ಸಾಗಲಿ ಜೀವನ..//

ಕಂಡು ಕೇಳರಿಯದ ಹಿರಿಮೆಯಲಿ
ನಿಲ್ಲು ನೀನೊಮ್ಮೆ ಗೆಲುವಿನಲಿ
ಹರುಷವು ಕುಣಿಯುವುದು ನಿನ್ನಲಿ....
ಸಾಗಲಿ ಜೀವನ..//



ನಿಲ್ಲದ ಪಯಣ ಸಾಗುತಿರೆ ನೀ ನಗುವಿನಲಿ....

- Nirmala T

29 Oct 2023, 06:54 pm

- varsha

22 Oct 2023, 08:59 am

- Prashanth KP

22 Oct 2023, 02:06 am

. ಮೌನ.....!

ಒಂದು ಕಾಲದಲ್ಲಿ ಅದೆಷ್ಟು ಮಾತಾಡ್ತಿಯ
ಅಂತಿದ್ದವರೆಲ್ಲ
ಇಂದು ಯಾಕೆ ಏನು ಮಾತಾಡ್ತಿಲ್ಲ ಅಂತ ಕೇಳುವಷ್ಟು ಬದಲಾಗಿದಿನಿ
ಕಾರಣವಿಷ್ಟೇ ಈ ಮೌನದಲ್ಲೇ ನೆಮ್ಮದಿಯನ್ನ
ಹುಡುಕ್ತಿದಿನಿ.......!

ಚಂದು❤️

- chandu

13 Oct 2023, 10:19 am