ನಸುಕು ಕವಿದ ಮನಕೆ
ತುಸು ಮೆಲ್ಲಗೆ ನುಸುಳಿ,
ಗಾಳಿಗೂ ಆರದ
ಕಾಲಕೂ ಮಾಸದ,
ಒಲವಿನ ಬೆಳಕನು
ಹೊತ್ತು ತಂದ ಹೃದಯವೇ,
ಪಿಸು ಮಾತಲಿ ಪ್ರೀತಿಯ
ಪರ್ವತದಂತೆ ಪಸರಿಸಿ,
ಒಸು ನೊಂದ ಎದೆಗೆ
ಅಪ್ಪುಗೆಯ ದೀವಿಗೆ,
ನನ್ನ ಕನಸಿನ ಅರಮನೆಯಲಿ
ನಿನ್ನ ನಗುವಿನ ನಿತ್ಯ ಮೆರವಣಿಗೆ,
ಕಳೆದುಹೋದ ನನ್ನ ಪ್ರತಿಬಿಂಬವ
ನಿನ್ನ ಕಂಡ ಕೂಡಲೇ ಮನ ತುಂಬುವ,
ಭರವಸೆಯ ಸ್ವಾರಸ್ಯವೂ ನೀ ಸಖಿ
ಪಡೆದು ನಿನ್ನನು ಅನುಕ್ಷಣವೂ ನಾ ಸುಖಿ,
ಜೀವನದ ಎಲ್ಲಾ ಆಯಾಮಗಳ ಸಾಥಿ
ಮರು ಉಸಿರಿಗೂ ನೀನಾಗು ನನ್ನ ಸಂಗಾತಿ,
ಹೃದಯಪೂರ್ವಕ ವಿವಾಹ ವಾರ್ಷಕೋತ್ಸವದ ಶುಭಾಷಯಗಳು ಪುಟ್ಟ.
ನನ್ನಪ್ಪನಿಗೊಂದು ಮಾತು ಜೀವನ ಎಂಬ ರಥದ ಸಾರಥಿ
ಸಂಸಾರ ಎಂಬ ಸಾಮ್ರಾಜ್ಯದ ಅಧಿಪತಿ
ಎಷ್ಟೆ ಕಷ್ಟ ಬಂದರೂ ಮಕ್ಕಳ ನಗುವಲ್ಲಿ ನೋವನ್ನು ಮರೆಯುವ ಗುಣವಂತ
ಪ್ರೀತಿಯ ಲೋಕಕ್ಕೆ ನೀನೇ ಸಿರಿವಂತ
ಮಕ್ಕಳ ಏಳ್ಗೆಗೆ ದಾರಿದೀಪ
ಮುಂದೆ ನಮ್ಮ ಜೀವನಕ್ಕೆ ನೀನೇ ನಂದಾದೀಪ
ಕಲ್ಮಶವಿಲ್ಲದ ಮನಸುಳ್ಳ ದಿಗ್ಗಜ
ನಮ್ಮ ಪಾಲಿಗೆ ನೀನೇ ರಾಜ
ದುಡಿಯುತ್ತಾನೆ ಮೈಯಲ್ಲಿ ರುಧಿರ ಸುರಿಯುವಂತೆ
ಲೆಕ್ಕಿಸದೇ ತನ್ನ ಪ್ರಾಣದ ಚಿಂತೆ
ಆಕಾಶಕ್ಕೂ ಮಿಗಿಲು ನಿನ್ನ ಮೇಲೆ ಪ್ರೀತಿ
ದೇವರಿಗಿಂತ ಹೆಚ್ಚು ನಿನ್ನ ಮೇಲೆ ಪ್ರತೀತಿ
ದಾರುಣ ಸ್ಥಿತಿಯಲ್ಲೂ ಧೈರ್ಯಗೆಡದ ಧೀರ
ಜಗತ್ತನ್ನೇ ಎದುರಿಸುವ ಶಕ್ತಿ ಹೊಂದಿರುವ ರಣಧೀರ
ಚಾಣಕ್ಯನಿಗಿಂತಲೂ ಚಾತುರ್ಯ ಹೊಂದಿರುವ ನನ್ನಪ್ಪ
ಯಾರೂ ಹೋಲಿಕೆ ಇಲ್ಲ ನಿನಗಪ್ಪ
ಸಂಸಾರ ಎಂಬ ರಣಾಜಿರದಲ್ಲಿ ಸೋಲನ್ನು ಕಲ್ಪನೆ ಕೂಡಾ ಮಾಡಿಕೊಳ್ಳದವನು
ಕಗ್ಗತ್ತಲೆಯಲ್ಲೂ ನಮಗೆ ಬೆಳಗಾಗಿ ನಿಂತಿರುವವನು
ಹಗಲು ರಾತ್ರಿ ಎನ್ನದೆ ದುಡಿಯುವ ಕಾಯಕ ಯೋಗಿ
ನಿರುದ್ಯೋಗಿಯಾದರೂ, ಸರ್ವಲೋಕವನ್ನೇ ಕೊಳ್ಳುವ ಉದ್ಯೋಗಿ
ಓ ಸ್ನಾತಕೋತ್ತರ ಪದವೀಧರ
ಹರಿಯುವದು ಜ್ಞಾನ ನನ್ನಲ್ಲಿ ನಿರಂತರ
ನಕ್ಷತ್ರಗಳು ನಾಚುವಂತೆ
ಸುನಾಮಿಗಳು ಅಬ್ಬರಿಸುವಂತೆ
ವಿಶ್ವವೇ ಬೆರಗಾಗುವಂತೆ
ದೈವವೇ ಕಣ್ತೆರೆಯುವಂತೆ
ನಮ್ಮ ಜೀವನಕ್ಕೆ ತನ್ನ ಪ್ರಾಣವನ್ನೇ ಪಣವಿಡುವ ನನ್ನಪ್ಪನಿಗೊಂದು ನಮನ..... ಸುನೀಲ್ ಬಿಜಿಎಂ ಕನ್ನಡ ....✍️
ಹುಡುಗಿ ದೊಡ್ಡವಳ್ ಆಗ್ಯಾಳ
ದೊಡ್ಡಅತ್ತೆ ಮನೆಯಾಗ ನಂ ದಡ್ಡ್ ಕತ್ತೆ ಮನೆಯ್ಯಾಗ
ಅತ್ತೆಗೆ ಋತು ಸ್ನಾನ
ಅವಳಿಗೆ ಪವಿತ್ರ ಸ್ನಾನ
ಕರೆತಲೆಯಾವು ಸೇರೆಯಾವ
ಹುಡುಗಿಯ ಹೊರಕ್ಕ ಹಾಕಲಾಕ್ಕ
ಬಿಳಿತಲೆಯಾವು ಸೇರೆಯಾವ
ಶೋಭನ ಹಾಡಲಕ್ಕ
ಹೈಕಳು ಸೇರಾವ
ಕಜ್ಜಿ೯ಕಾಯಿ ತಿನ್ನಲಕ್ಕ
ಪಡ್ಡೆಗಳೂ ಸೇರಾವ
ಆಕೆಯ ಸೋಭಗನು ನೋಡಲಕ್ಕ
ಆಕೆಯ ಮುಖವು ಅರಳೈತ
ಹುಣ್ಣಿಮೆಚಂದ್ರನ ಮುಖದಂತ
ಆಕೆ ಮಾವ ಕಳ್ಳ ನಗೆಯ ನಕ್ಕನಾ
ಆಕೆ ಬೇಕು ನಂಗಂತ ಪಟ್ಟುಹಿಡಿದ್ದಾನ
ಅವಳ ತಂದೆ ಕಣ್ಣಲ್ಲಿ ನೀರು ಜಿನಿಗ್ಯಾತ
ಅವಳ ತಾಯಿ ಸಿಟ್ಟಲ್ಲಿ
ಪಾತ್ರೆ ಕುಕ್ಕಯಾಳ
ಅವಳ್ ಅತ್ತೆ ನಗುತ್ತಾಳ
ನನ್ನ ಮಗನಿಗೆ 2ನೇ ಹೆಂಡತಿ
ಇವಳಂತಾ
ಎನೂ ಅರಿಯದ ಆ ಹುಡುಗಿ
ನಗುತ್ತ ಕುಂತಳಾ....