ನಂಬಿ ಬಂದವರಾರೋ
ನಟಿಸಿ ನಿಂತವರಾರೋ
ಬಣ್ಣ ಹಚ್ಚಿದವರಾರೋ
ಬವಣೆ ನೀಡಿದವರಾರೋ
ಮನಸ ಮೆಚ್ಚಿದವರಾರೋ
ಮನಸೇ ಇಲ್ಲದವರಾರೋ
ಪ್ರೀತಿ ನೀಡಿದವರಾರೋ
ಪ್ರೀತಿಸಿದಂತೆ ನಟಿಸಿದವರಾರೋ
ಇಲ್ಲಿ ಯೋಗ್ಯರಾರೋ
ಇಲ್ಲಿ ಅಯೋಗ್ಯರಾರೋ
ಬಣ್ಣದ ಲೋಕದಲ್ಲಿ,
ಬಣ್ಣದ ಲೋಕದಲ್ಲಿ,
ಬಣ್ಣದ ಮಾತುಗಳನಾಡಲರಿಯದೇ
ಭಾವುಕರಾಗಿ ಕಣ್ಣೀರ ಹರಿಸಿದವರಾರೋ
ನಿಷ್ಕಲ್ಮಶ ನಿಷ್ಠೆಯಿಂದ ವಂಚಿತರಾದವರಾರೋ
ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಕರ್ಮಯೋಗ,
ಜ್ಞಾನಯೋಗ,
ರಾಜಯೋಗ,
ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿರಿ...
ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.
ನನ್ನ ನಿಷ್ಕಲ್ಮಶ ಪ್ರೀತಿ ಯನ್ನು ತಿರಸ್ಕರಿಸಿದವಳು
ಆದರೆ,
ಅವನ ಮೋಸದ ಪ್ರೀತಿಯಲ್ಲಿ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿರವಳು ................................................................................................................................ (ಅB..)