Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಲ್ಪನಿಕ ಹೆಣ್ಣು

ಹೆಣ್ಣೆಂದರೆ ಸಾಂಪ್ರಾದಾಯಿಕ ಮೌಲ್ಯ ಒಪ್ಪಿರುವವಳು
ಹೆಣ್ಣೆಂದರೆ ಸಂಸ್ಕೃತಿ ಆಚಾರ ವಿಚಾರಕ್ಕೆ ಒಗ್ಗಿದವಳು
ಹೆಣ್ಣೆಂದರೆ ಅರಿಸಿನ -ಕುಂಕುಮ ಮಹತ್ವ ಅರಿತವಳು
ಹೆಣ್ಣೆಂದರೆ ಮೌನವಹಿಸಿ ಮಾತಿನ ಮೌಲ್ಯಅರಿತವಳು
ಹೆಣ್ಣೆಂದರೆ ಮೂಗುತಿ ? ಸುಂದರಿಯವಳು
ಹೆಣ್ಣೆಂದರೆ ವಿದ್ಯಾವಂತಳು ಹಾಗೂ ಧೈರ್ಯವಂತಳು
ಹೆಣ್ಣೆಂದರೆ ಭವಿಷ್ಯದ ಜೀವನದ ಕನಸು ಕಂಡಂತವಳು
ಹೆಣ್ಣೆಂದರೆ ಮಗು ಮನಸ್ಸಿನ ತುಂಟತನದವಳು
ಹೆಣ್ಣೆಂದರೆ ಹಠಮಾರಿಯಲ್ಲದೆ ಕ್ಷಮೆಧಾತ್ರಿಯವಳು
ಹೆಣ್ಣೆಂದರೆ ಹಿರಿಯವರು ಪಾಲಿಗೆ ಮಗಳಾದವಳು
ಹೆಣ್ಣೆಂದರೆ ಗಂಡನ ಅರ್ಥೈಸಿಕೊಂಡು ಬಾಳ್ವೆ ಮಾಡಿದವಳು
ಹೆಣ್ಣೆಂದರೆ ತಂದೆತಾಯಿ ಪಾಲಿನ ಚಿಕ್ಕ ಕೂಸಂತವಳು
?️ಸುನಿಲ್ ಪುರು ❤️ ❤️ ❤️


- ಸುನಿಲ್

18 Mar 2025, 10:18 pm

ದುಃಖಿಸುತ್ತಿರುವ ಬದುಕು.

ಮೀತಿ ಮೀರಿದ ಸ್ವಾಮಿಮಾನದಿಂದಗಿ
ಅತಿಯಾಗಿ ಎಲ್ಲರನ್ನು ನಂಬಿದ್ಧಾಕಾಗಿ
ನನಸಾಗದ ಕನಸು ಕಂಡ ಕಾರಣಕ್ಕಾಗಿ
ಯಾರೋ ಬಂದು ಬದುಕೀನಲ್ಲಿ ಸಂತೋಷ ತಾರ್ತರೆ ಅನ್ನುವ ನಿರೀಕ್ಷೆಯಲ್ಲಿ ಬದುಕಿದಕ್ಕಾಗಿ
ಮಾತಿನ ಪೆಟ್ಟು, ಮೋಸದ ಪೆಟ್ಟು, ಅವಮಾನದ ಪೆಟ್ಟು ಕೊಟ್ಟು ಹೋದ ಜನರನ್ನು ಸುಮ್ನೆ ನಕ್ಕು ಕ್ಷಮಿಸಿದ್ದಾಕಾಗಿ
ಭಾವನೆಯೇ ಇಲ್ಲದ ಕೂರ್ರ ಮನುಷ್ಯ ರಲ್ಲಿ ಪ್ರೀತಿ ಹುಡುಕಿದ್ದಾಕ್ಕಾಗಿ
ಯಾರೋ ಮನಸಾರೆ ನಿಜವಾಗಿ ನನ್ನನು ಪ್ರೀತಿಸುತ್ತಾರೇ ಎಂದು ಇಷ್ಟು ವರ್ಷ ಕಾದಕ್ಕಾಗಿ

- ಅನುಷಾ.ರೈ

17 Mar 2025, 09:38 pm

Manasina Matu

ನನ್ನ ಮನಸ್ಸಿನ ಮಾತು

ನಮ್ಮ ಬಗ್ಗೆ ತಪ್ಪು ತಿಳಿದವರು ಎಷ್ಟು
ನಾನು ಒಳ್ಳೆಯವನು ಎಂಬ ಮುಖವಾಡ ಧರಿಸಲು ಬರುವುದಿಲ್ಲ ನನಗೆ
ನಮ್ಮ ಬಗ್ಗೆ ಅರ್ಥ ಮಾಡಿಕೊಂಡವರು ಮಾತ್ರ ನಿಮ್ಮ ಬಗ್ಗೆ ತಿಳಿದುಕೊಳ್ಳುವರು
ಯಾರಿಗೂ ನೋವಿಸ್ಸಿ ಏನನ್ನು ಮಾಡಬಹುದು
ಮೂರು ದಿನದ ಬದುಕು
ಇನ್ನೊಬ್ಬರಿಗೆ ನೋಯಿಸಿ ಖುಷಿ ಪಡುವ ಮನಸ್ಥಿತಿ ನನ್ನದಲ
ಇನ್ನೊಬ್ಬರಿಗೆ ಒಳ್ಳೆಯದು ಮಾಡಿಲ್ಲ ಅಂದ್ರೆ ಪರವಾಗಿಲ್ಲ ಕೆಟ್ಟದನ್ನು ಮಾಡಬಾರದೆಂದು ನಾನು ತಿಳಿದುಕೊಂಡಿದ್ದೇನೆ
ನನ್ನ ಮನಸ್ಸಿನ ಮಾತು

- Sharath Kumar

15 Mar 2025, 12:19 am

Manasina Matu

ಬರೆಯುವ ಆಸೆ ನಿನ್ನ ಮೇಲೆ ಕವಿತೆ?
ಈ ಕವಿತೆ ತುಂಬೆಲ್ಲ ನೀನೆ ಕುಳಿತೆ ?
ಕವಿತೆಯ ಪ್ರತಿ ಸಾಲುಗಳಲ್ಲಿ ನೀನೇ ಅವಿತೆ?
ಈ ಸಾಲುಗಳನ್ನು ಓದಿ ನನ್ನೆ ನಾನು ಮರೆತೆ?


ಬರೆಯುವ ಆಸೆ ನಿನ್ನ ಮೇಲೆ ಕವಿತೆ?
ಈ ಕವಿತೆ ತುಂಬೆಲ್ಲ ನೀನೆ ಕುಳಿತೆ ?
ಕವಿತೆಯ ಪ್ರತಿ ಸಾಲುಗಳಲ್ಲಿ ನೀನೇ ಅವಿತೆ?
ಈ ಸಾಲುಗಳನ್ನು ಓದಿ ನನ್ನೆ ನಾನು ಮರೆತೆ?


- Sharath Kumar

15 Mar 2025, 12:16 am

ರಕ್ಷಣೆ

ಕಾಮುಕರ ಅಟ್ಟಹಾಸಕ್ಕೆ ನಲುಗಿದೆ ಹೆಣ್ಣುಜೀವ
ವಿವರಿಸಲಾರದ ಅವರು ಅನುಭವಿಸುವ ನೋವ

ಕಲಿಯುಗದಲ್ಲಿ ನಡೆಯುತ್ತಿದೆ ಘೋರ ಅನ್ಯಾಯ
ಹೆಣ್ಣುಮಕ್ಕಳಿಗೆ ದೂರವಾಗುತ್ತಿದೆ ನ್ಯಾಯ

ಜಾರಿಯಾಗಬೇಕಾಗಿದೆ ಕಾನೂನಿನ ಕಠಿಣ ಕ್ರಮ
ಅದಕ್ಕಾಗಿ ಮಾಡಬೇಕು ಕಠಿಣ ಪರಿಶ್ರಮ

ಕೊನೆಗೆ ಉಳಿದಿರುವುದು ಒಂದೇ ರಕ್ಷಣೆ
ಸ್ವಯಂ ಪ್ರೇರಿತ ಆತ್ಮರಕ್ಷಣೆ

ಎದ್ದೇಳಿ ಎಲ್ಲರು ತೋರಿಸಿ ನಿಮ್ಮ ಉಗ್ರರೂಪ
ಕಾಮುಕರಿಗೆ ದರ್ಶಸಿ ಮಹಾಕಾಳಿ ಸ್ವರೂಪ

- laxmi

14 Mar 2025, 09:50 am

ಹೆಣ್ಣು

ದೇವರ ಸೃಷ್ಟಿಯ ಅದ್ಭುತ ಹೆಣ್ಣು
ಬೆಲೆ ಕಟ್ಟಲಾಗದ ಮಮತೆಯ ಹೊಣ್ಣು

ನ್ಯಾಯ ದೇವತೆಯು ಒಬ್ಬಳು ಹೆಣ್ಣು
ನ್ಯಾಯಕ್ಕಾಗಿ ಕಾಯುತ್ತಿರುವಳು ಇನ್ನೊಬ್ಬ ಹೆಣ್ಣು

ಹಾಕದಿರಿ ಅವಳ ಮರ್ಯಾದೆ ಮೇಲೆ ಕಣ್ಣು
ಹಾಕಿದರೆ ನಿಮ್ಮ ಕರ್ಮಕ್ಕೆ ಸೇರುವಿರಿ ಮಣ್ಣು

ವಿಶಾಲಾ ಮಂಜುನಾಥ

- laxmi

13 Mar 2025, 01:11 pm

ಪ್ರೇಮ ಕವನ

~> ನೀ ಅಲ್ಲಿ, ನಾ ಇಲ್ಲಿ,
ನೀ ಬರುವ ದಾರಿಯ ಕಾಯುವ ಅಂಬಲ ನನ್ನಲ್ಲಿ,
ನಾ ಬರುವ ದಾರಿಯ ಕಾಯುವ ಅಂಬಲ ನಿನ್ನಲ್ಲಿ,
ನಮ್ಮಿಬ್ಬರ ಬೇಟಿ ಆದಕ್ಷಣ ತಳ ಮಳ ಮನದಲ್ಲಿ,
ನಮ್ಮಿಬ್ಬರ ಬೇಟಿಯ ನಂತರ ಮತ್ತೆ ನೀ ಅಲ್ಲಿ ನಾ ಇಲ್ಲಿ,

~~ಮಹಿ.ಕೆ~~

- MAHESH KUMBAR

12 Mar 2025, 09:36 pm

- Nuage Laboratoire

11 Mar 2025, 08:05 am

- Nuage Laboratoire

11 Mar 2025, 08:04 am

ಲವ್ ಫೀಲಿಂಗ್ ಕವನ

ದೂರ ಇರುವುದೇ
ಹಣೆಬರಹ ವಾದರೆ
ನಮಿಬ್ಬರ ಭೇಟಿ ಯಾಕೆ?
ಭೇಟಿಯ ನೆನೆದು ಜೀವನಪೂರ್ತಿ
ಕಣ್ಣೀರು ಹಾಕೋದು ಯಾಕೆ? ?
ನೀನೆಂಬ ಕಲ್ಪನೆ
ಕಾಡುತ್ತಿದೆ ನನ್ನನೆ
ಮಾಡಲೆಗೆ ವರ್ಣನೆ
ಕನಸಲ್ಲಿ ಕಾಣುವೆ ನಿನ್ನನೆ
ಆ ನಿನ್ನಯ ಮುಗುಳುನಗೆ
ತಲೆ ಕೆಡಿಸಿದೆ ನನ್ನನೇ
ನಿನ್ನಯ ಪ್ರೀತಿಯ ನೋಟಕ್ಕೆ
ಕಳೆದು ಹೋದೆ ನನ್ನಲೆ....!!

- Prabha Magadum

10 Mar 2025, 09:48 pm