ನೀನಿಲ್ಲದ ನೋವು ನನ್ನ ಕಾಡಿದೆ..
ಕಾರಣವಾದರೂ ತಿಳಿದರೆ ನನಗೊಂದಷ್ಟು ಸಮಾಧಾನವಾಗುವುದಿದೆ..
ಏನನು ಅಪೇಕ್ಷಿಸಿದೆ ನಿನ್ನ ಬಳಿ ನಾನು..
ಏನೂ ಹೇಳದಿದದ್ದೆ ತಪ್ಪಾಯಿತೇನು..
ಬರಡಾದ ಬದುಕಲ್ಲಿ ಮಳೆಯಂತೆ ಬಂದೆ ನೀನು..
ಕನಸುಗಳ ರಾಶಿ ಹೊತ್ತು ಕಾದಿದ್ದೆ ನಿನಗಾಗಿ ನಾನು..
ಕಾರ್ಮೋಡದ ಕತ್ತಲು ತುಂಬಿದೆ ಮನಸು
ಅಳುವು ಕೂಡ ಬಾರದು, ಅದಕು ನನ ಮೇಲೆ ಮುನಿಸು..
ದೂರಾದ ಪ್ರೀತಿಗೆ ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ...
ನೀ ಹುಟ್ಟಿದಾಗ ನಾ ಪಟ್ಟೆ ಆನಂದ
ಬೆಳೆಯುತ್ತಾ ಬೆಳೆಯುತ್ತಾ ನಿನ್ನ ಮಾತುಗಳೇ ಚಂದ
ಶಾಲೆಗೆ ಹೋಗುವಾಗ ನಿನ್ನ ನೋಟ ನನಗೆ ಚಂದ
ನೀನು ಚನ್ನಾಗಿ ಓದಿದ್ರೆ ಬಲು ಆನಂದ
ನಿನ್ನ ಆಟಗಳನ್ನು ನೋಡಲು ಮಹದಾನಂದ
ನೀನು ಹೀಗೆ ನಡೆದುಕೊಂಡರೆ ನನ್ನ ಮನಸ್ಸಿಗೆ ತುಂಬಾ ಆನಂದ
ಇಂತಿ ನಿನ್ನ ಅಪ್ಪ
ಹೊರಗೆ ಕೋಗಿಲೆಯ ಕುಹೂ ಕುಹೂ
ಒಳಗೆ ಮೆಲ್ಲನೆ ತಿರುಗುವ ಫ್ಯಾನೂ
ಎರಡೇ ಕೂದಲನ್ನು ಕುಣಿಸುವ ತಂಗಾಳಿ
ಕೋಣೆಯಲ್ಲಿ ಅಡಗಿದೆ ನೀರವ ಮೌನ
ಆ ಮೌನಕ್ಕೆ ಮೂಡಿದೆ ಮನಸಲ್ಲಿ
ನೂರೆಂಟು ಯೋಚನೆಗಳ ಸಂಚಲನ
ಮೂಡುವ ಯೋಚನೆಗಳಿಗೆ ನೀಡಬೇಕಾಗಿದೆ ವಿರಾಮ
ಏನೂ ಅರ್ಥವಾಗದೆ ಎತ್ತಲೋ ಸಾಗುತಿದೆ ನನ್ನ ಜೀವನ
ನನ್ನದಲ್ಲದ ಊರಿನಲ್ಲಿ ಬದುಕತಲಿರುವೆ ಪ್ರತಿ ದಿನ..
ನೆನಪಾಗುತ್ತಿದೆ ಆ ಸುಂದರ ಕ್ಷಣಗಳು,
ಶಾಲೆಯಲ್ಲಿ ಕಳೆದ ಸಿಹಿ - ಕಹಿಗಳ ನೆನಪುಗಳು.
ಈಗಲು ನೆನಪಾಗುತ್ತದೆ ಅಂದಿನ ಸುವರ್ಣ ಅವಧಿಗಳು,
ಅಲ್ಲಿ ಗೆಳೆಯ - ಗೆಳತಿಯರೊಂದಿಗೆ ಮಾಡಿದ ಮೋಜು ಮಸ್ತಿಗಳು.
ನನ್ನ ಕಣ್ಣ ಮುಂದೆ ಬರುತ್ತದೆ ಅಲ್ಲಿ ಕಳೆದ ನೆನಪಿನ ಚಿತ್ರದ ಪುಟಗಳು.
ಬೇಕೆಂದರೂ ಬಾರದು ಶಾಲೆಯ ಸುಂದರ ನೆನಪುಗಳು!!!
ನನ್ನ ಹೃದಯದಲ್ಲಿ ಇಂದಿಗೂ ಅಮರ ನನಗೆ ತಿದ್ದಿ ಬುದ್ಧಿ ಹೇಳಿದ ಗುರುಗಳು,
ನನಗೆ ಈಗಲೂ ನೆನಪಿದೆ ಅವರು ಹೇಳಿದ ಆ ಹಿತನುಡಿಗಳು.
ಮಧುರ ಮಧುರಗಳು ಆ ದಿನಗಳು!!!
ಮಧುರ ಮಧುರಗಳು ಆ ದಿನಗಳು!!!
- ಇತ ✍️
ದೂರವಾಣಿಯ ಕಾಲದಲ್ಲಿ ಸ್ನೇಹಿತ-ಬಂದುಗಳ ಹೆಸರಿನ ಜೊತೆ ಅವರ ದೂರವಾಣಿಯ ಸಂಖ್ಯೆಯೂ ನೆನಪಿರುತ್ತಿತ್ತು..
ಕಾಲ ಬದಲಾಗಿದೆ, ದೂರವಾಣಿಯ ಬದಲು ಜಂಗಮವಾಣಿಯಾಗಿ.
ಸ್ನೇಹಿತರ ಹೆಸರು ನೆನಪಿದೆ, ಆದರೆ ದೂರವಾಣಿಯ ಸಂಖ್ಯೆ ನೆನಪಿನಲ್ಲಿ ಉಳಿದಿಲ್ಲ.
ಬದಲಾವಣೆ ಜಗದ ನಿಯಮ,ಅದ ನಿಜ ಮಾಡಲು
ಸ್ನೇಹಿತರೂ ಮರೆಯಾಗುತ್ತಿದ್ದಾರೆ, ಕಾರಣ ಅಹಂಮ್ಮಿನ
ತಾತ್ಸಾರಕ್ಕೆ ಸಮಾಜಿಕ ಮಾಧ್ಯಮಗಳು!!
ಲೈಕ್ ಡಿಸ್ಲೈಕಿನ ನಡುವೆ ಬದುಕು
ಸ್ಹೇಹಿತರೆಲ್ಲರು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಯಾಗಿದ್ದೇವೆ, ಮಾತಾಡಲು ಸಮಯವಿಲ್ಲ..
ದೂರವಾಣಿಯೂ ದೂರ, ಸ್ನೇಹವೂ ದೂರ..