ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚು
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು.
ಇಂದ ಶ್ರೀ ಎ ಆರ್ ಹಂಚಿನಾಳ. ಶಿಕ್ಷಕರು ,
ಸರಕಾರಿ ಕೆ ಪಿ ಎಸ್ ಮುಗಳೊಳ್ಳಿ. ತಾ/ಜಿ - ಬಾಗಲಕೋಟ.
ಕಲ್ಲಗಬಾರದಿತ್ತೇಕೆ ಈ ಮನಸ್ಸು
ಭಾವನೆಗಳನ್ನು ತುಂಬಿಡುವ ಹುಂಡಿಯಾಗಬಾರದಿತ್ತೇಕೆ
ಅರ್ಥವೇ ಇಲ್ಲದ ಬಂದಗಳೊಡನೆ
ಮೌಲ್ಯ ವಿಲ್ಲದ ನಿರೀಕ್ಷಿಗಳು ವ್ಯರ್ಥವಲ್ಲವೇ
ಕಲ್ಲಗಬಾರದಿತ್ತೇಕೆ ಈ ಮನಸ್ಸು
ಭಾವನೆಗಳನ್ನು ತುಂಬಿದ ಹುಂಡಿಯಾಗಬಾರದಿತ್ತೇಕೆ
ಕಷ್ಟ ಎಂಬ ತಂಗಾಳಿಯಲ್ಲಿ
ದುಃಖ ಎಂಬ ಅಂಗಳದಲ್ಲಿ
ಮರೆಯಾಗದಿರು ಈ ನನ್ನ ಮನಸ್ಸಿನಲ್ಲಿ
ಮೊದಲ ಮಾತು ಮೊದಲ ಮುತ್ತು
ಕೊನೆಯವರೆಗೂ ಮರೆಯಾಗದು
- ನೀ ಎಂದೆಂದೂ ದೂರವಾಗದಿರು -
ಮೊದಲೇ ದಿನವೇ ತಿಳಿದೇ ನೀ ನನ್ನವನೆಂದು
ದೂರವಾಗದಿರಲು ನಿರ್ದರಿಸಿದೆ ನೀ ನನ್ನವನೆಂದು.
ಕೈ ಬಿಡದಿರು ನಿನ್ನ ಉಸಿರಿರುವರೆಗೂ
ಮೋಸ ಮಾಡಲಾರೆ ನನ್ನ ಜೀವಿರುವರೆಗೂ.
ಬಿಟ್ಟು ಹೋಗದಿರು ಓ ನನ್ನ ಪ್ರೇಮಿಯೇ
ಕೈ ಮುಗಿದು ಬೇಡುವೆ ನಿನ್ನನು.
-ನೀ ಎಂದೆಂದೂ ದೂರವಾಗದಿರು-
ಎಲ್ಲರಂತಲ್ಲಾ ನನ್ನವನು ಎಲ್ಲರಿಗಿಂತಲೂ ದೊಡ್ಡವನು.
ಎಂದಿಗೂ ಮರೆಯಲಾರೆ ಈ ನಿನ್ನ ಪ್ರೀತಿಯನ್ನು.
ಬೀಸುವ ಗಾಳಿಯಲ್ಲಿ ಹಾರಿ ಹೋಗದಿರು
ಮತ್ತೊಬ್ಬರ ಮಾತಿಗೆ ಕಿವಿ ಕೊಡದಿರು.
ಮನೆತನಕ ಬಂದವರಿಗೆ ಹಾಗೆ ಕಲಿಸಬೇಡ
ಕೊನೆಗೆ ಬರುವುದು ಪರಸ್ತಿತಿ ಎಂದು ಮರೆಯಬೇಡ.
-ನೀ ಎಂದೆಂದೂ ದೂರವಾಗದಿರು-
ನನ್ನವನು ಮನಸ್ಸಿನಲ್ಲಿ ಅಪರಂಜಿ
ಹೊರಗೆ ನಡೆಯುವನು ಎಲ್ಲರಿಗೆ ಅಂಜಿ
ಮನಸ್ಸು ಮಾತ್ರ ಶುದ್ಧ ಬಂಗಾರ.
ಕಷ್ಟವೇ ಇರಲಿ, ಸುಖವೇ ಇರಲಿ ಹಂಚಿಕೊಳ್ಳುವ ಮನಸ್ಸು.
ಅವನು ಅಂದುಕೊಂಡ ಕನಸು ಆಗಲಿ ನನಸು.
- ನೀ ಎಂದೆಂದೂ ದೂರವಾಗದಿರು-
ಕೊನೆವರೆಗೂ ನಿನ್ನ ಜೊತೆ ಬಾಳಲು ಇಷ್ಟ
ಆದರೆ ಸಮಸ್ಯಗಳಿಗೆ ಎದುರಾಗಿರುವೆ
ಇದೇ ನನಗೆ ಕಷ್ಟ.
ಕೆಟ್ಟದ್ದಕಿಂತ ಜಾಸ್ತಿ ಒಳ್ಳೆಯದನ್ನು ಬಿತ್ತಿದೆ.
ಎಲ್ಲ ಕಷ್ಟ ಸುಖ ಹಂಚಿಕೊಂಡೆ.
ಇದೇ ನನ್ನವನ ಒಳ್ಳೆಯ ಮನಸು
- ನೀ ಎಂದೆಂದೂ ದೂರವಾಗದಿರು-
ನನ್ನವನ ಮನಸ್ಸು ಅತಿ ಚಂದ
ದಸರಾ ಬೊಂಬೆಯ ಹಾಗಿದೆ ಅವನ ಅಂದ .
ಪ್ರತಿಯೊಂದು ಜೀವಿಯೂ ಕೂಡ ಕರೆದು ಹೇಳುವುದು ನಿನ್ನವನು ನಿನಗೇ ಸಿಗುವ ನೆಂದು.
ನಂಬಿಕೆ ಇಟ್ಟಿರುವೆ ಅವನು ನನ್ನವನೆಂದು.
ಕಳೆದು ಹೋಗದಿರು ನೀ ಎಂದೆಂದೂ.
-ನೀ ಎಂದೆಂದೂ ದೂರವಾಗದಿರು-
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
ಬಣ್ಣ ಬಣ್ಣದ ಆಸೆಗೆ
ಜೀವ ಕೊಡುವ ಕಾತುರ
ಬಾನಾಚೆಯ ಜಗತ್ತಿಗೆ
ಏಣಿ ಹಾಕುವ ಹಂಬಲ
ಮುಸ್ಸಂಜೆಯ ತಂಗಾಳಿಗೆ
ಮನವೊಡ್ಡುವ ತುಡಿತ
ಇರುಳಿನ ನಿಶ್ಚಲತೆಗೆ
ಮಾರುಹೋಗುವ ಆಶಯ
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
ಪ್ರೇಮ” ವೆನ್ನುವುದು ಒಂದು ನವಿರಾದ ಭಾವನೆ. ಮನಸ್ಸಿಗೆ ಮುದ ನೀಡುವ ಕನಸುಗಳಿಗೆ ರಂಗುಬಳಿಯುವ ಈ ಭಾವ ನಿಷ್ಕಲ್ಮಶ ನಿಸ್ವಾರ್ಥದಿಂದ ಕೂಡಿದಾಗಲೇ ಪ್ರೀತಿಗೊಂದು ಬೆಲೆ ಮತ್ತು ಪ್ರೇಮಕ್ಕೊಂದು ಅರ್ಥ! ಅಲ್ಲೊಂದು ಆರಾಧನೆ, ಮಮತೆ, ಕಾಳಜಿ, ನಂಬಿಕೆಯಿದ್ದಾಗ ಪ್ರೀತಿ ಚಿಗುರೊಡೆದು ಪ್ರೇಮ ಸಾಫಲ್ಯ ಕಂಡುಕೊಳ್ಳಲು ಸಾಧ್ಯ. ಪ್ರೀತಿ -ಪ್ರೇಮಕ್ಕೆ ಒಳ್ಳೆಯ ನಿದರ್ಶನವೆಂದರೆ ಅದುವೇ ರಾಧಾ-ಕೃಷ್ಣ.
- Subhas Subhas
03 Feb 2024, 12:32 pm
ನಿಮಗೆ ಪ್ರೀತಿ ಅನ್ನೋದು ಆಟ ಆಗಿರಬಹುದು.
But.. ನನಗೆ ಪ್ರೀತಿ ಅನ್ನೋದು ನನ್ನ ಸರ್ವಸ್ವ,
ನನ್ನ ಉಸಿರು - ಉಸಿರೇ ಇಲ್ಲಾ ಅಂದ್ಮೇಲೆ ಹೇಗೆ ತಾನೆ ಬದುಕೋಕಾಗುತ್ತೆ!