ನಿನ್ನೆಯ ಕನಸಲಿ ಕಂಡ ಓ ನನ್ನ ಚೆಲುವೆ
ನಾ ಬಯಸುವೆ ನಿನ್ನಯ ಒಲವೆ
ನಿನ್ನ ಪ್ರೀತಿಯೆ ನನ್ನ ಒಡವೆ
ಅದಕೆ ಆಗಿದೆ ಈ ಮೊಡವೆ
ನಿನಗಾಗಿ ಕಾದಿದೆ ಈ ಹೃದಯ
ಎಂದು ಬಂದು ಸೇರುವೆ ಇನಿಯನ
ಇಬ್ಬನಿಯ ಹನಿ ಹನಿಯು ಮಾಡಿದೆ ನಿನ್ನದೆ ಪರಿಚಯ
ಹೃದಯದ ಪ್ರತಿ ಬಡಿತದ ಹಿಂದೆಯು ನಿನದೆ
ಪರಿತಾಪ
ಬಾರೆ ನನ್ನ ಚೆಲುವೆ
ನಿನಗಾಗಿ ಕಾದಿದೆ ಈ ಜೀವವೆ
ಬೆರೆಸು ನಿನ್ನ ಒಲವನ್ನು ನನ್ನೊಂದಿಗೆ
ಜೀವನವಾಗಲಿ
ಹೇ ಸತಿ ಕೇಳಿಲಿ ಈ ನಿನ್ನ ಪತಿಯಾಗುವವನ ಬಯಕೆ...
ಕಡಲ ತೀರದಲ್ಲಿ ನೀನು ನಾನು ಹೇಳುವ ನನ್ನ ಮನದ ಭಾವಗಳು ಬೇಸರ ಪಡದೆ ಕೇಳುವೆಯ?
ನಿನ್ನ ಮೇಲೆ ಪ್ರೀತಿಕ್ಕಿಂತ ನನ್ನ ಹೃದಕ್ಕೆ ನಿನ್ನ ಕಳೆದುಕೊಳ್ಳವ ಭಯನೇ ಜಾಸ್ತಿ ನನ್ನ ಹೊಟ್ಟೆಕಿಚ್ಚು ಯಾವಾಗ ಕಡಿಮೆ ಮಾಡುವೆ?
ನನ್ನಾಸೆ ನಿನ್ನ ಜೊತೆ ನಿನ್ನ ಕೈ ಹಿಡಿದ್ದು ಊರು ಸುತ್ಯಾಡಬೇಕು ಆಸೆ ಪೂರೈಸುವೆಯ?
-ಅಂಬಿಕಾ ಜಿ ಕುಲಕರ್ಣಿ
ಇರುವಂತಿದ್ದರೇ ನೀನು ಹರಿಯುವ ನದಿಯಂತಿರು, ಪರ್ವತದಷ್ಟು ಕಷ್ಟವನ್ನು ಹೊಂದಿದ್ದರು
ಆ ಕಷ್ಟವೆಂಬ ಪರ್ವತದಿಂದಲೇ ಚಿಮ್ಮಿ ಹರಿಯುವ ನದಿಯಂತೆ
ಸದಾ ನಿನ್ನ ಸಾಧನೆಯೆಡೆಗೆ ಮುನ್ನುಗ್ಗುವಂತಿರು,
ಇರುವಂತಿದ್ದರೇ ನೀನು ಹರಿಯುವ ನದಿಯಂತಿರು.
ಇರುವಂತಿದ್ದರೇ ನೀನು ಬಾಳೇಗಿಡದಂತಿರು,
ನಿನ್ನಲ್ಲಿರುವ ಒಳ್ಳೇಯ ಎಲ್ಲ ಗುಣಗಳಿಂದ ಮತ್ತೊಬ್ಬರಿಗೆ ಬಾಳೆಗಿಡದಂತೆ ಅವಶ್ಯಕನಾಗಿರು,
ಇರುವಂತಿದ್ದರೇ ನೀನು ಬಾಳೇಗಿಡದಂತಿರು.
ಇರುವಂತಿದ್ದರೇ ನೀನು ಮರಗಳಂತಿರು,
ಹೇಗೇ ಮರ ಪ್ರಾಣಿ ಪಕ್ಷಿಗಳಿಗೆ ಆಶ್ರಯಕೊಡುವುದೋ ಹಾಗೆ ನಿನ್ನ ನಂಬಿದವರಿಗೆ ಮರವಾಗಿ ಆಶ್ರಯದಾತನಂತಿರು,
ಇರುವಂತಿದ್ದರೇ ನೀನು ಮರಗಳಿಂತಿರು.
ಪ್ರತಿ ದಿನ ಪ್ರತಿ ಕ್ಷಣ ಕಳೆದೆವು ಜೊತೆಯಲಿ
ನಿನಗೆ ನಾನು, ನನಗೆ ನೀನು ಎಂಬ ಹುರುಪಲಿ
ಯಾವುದೇ ರಹಸ್ಯ ವಿರಲಿಲ್ಲ ನಮ್ಮಿಬ್ಬರ ಮದ್ಯದಲ್ಲಿ
ಕಳೆದ ಪ್ರತಿ ಕ್ಷಣವು ಅಮೂಲ್ಯವಾಗಿ ಉಳಿದಿದೆ ನನ್ನಿ ಮನದಲಿ