ನನ್ನ ಎಳೆ ವಯಸ್ಸಿನಲ್ಲಿ ನನ್ನದೇ ಗುಡಿಸಿಲಿನಲ್ಲಿದ್ದ ಕಾಡ ಹೂವೊಂದು ನಗುವುದ ಕಂಡೆ
ಬೇಡಿ ಬಂದವನಿಗೆ ನೀಡದೆ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆ.
ಅಕ್ಕಪಕ್ಕದ ಹೂವುಗಳು ನಲುಗುವುದ ಕಂಡೆ ನೀನೊಬ್ಬಳೆ ನಗುವುದ ಕಂಡೆ.
ಬೇಡ ಬೇಡವೆಂದರೂ ಬೇಡನ ಕರೆದು
ಬಾಡಿಹೋಗುವ ಮುನ್ನ ಬಳುವಳಿಯಾಗಿ ನೀಡಿದೆ.
ನೀಡುವ ಮುನ್ನ ನನಗರಿವಿರಬೇಕಿತ್ತು.
ಬತ್ತಳಿಕೆಯಲ್ಲಿ ಮುಳ್ಳುಗಳೆ ತುಂಬಿರುವ ಬೇಡನಿಗೆ
ಹೂವಿನ ಮೃದುತ್ವ ಹೇಗೆ ಅರಿತಾನು..
ಇಲ್ಲೇ ಬಾಡಿದ್ದರೆ ನಿನ್ನ ಬೀಜಗಳಿಂದ ಹೂ ತೋರಣವೇ ಗುಡಿಸಲ ಮುಂದೆ ಇರುತ್ತಿತ್ತೊ ಏನೋ .
ಆಗಾಗ ಬೇಲಿಯಲ್ಲಿದ್ದ ಹೂಗಳ ಕಂಡಗ ನಿನ್ನೆ ಹುಡುಕುತ್ತಿದ್ದೆ ನಿನ್ನ ವಂಶವೃಕ್ಷ ಇರಬಹುದೆಂದು.
ಒರಟ ಅವನು ಮುಳ್ಳುಗಳ ಉಳಿಸಿ
ಎಸಳುಗಳ ಎಸೆದಿರಬಹುದು.
ಹೂವಿಗೆ ಮುಳ್ಳು ಕಾವಲು ಹೊರತು ಆಸರೆಯಲ್ಲ..
ಆಸರೆ ನೀಡುವ ದುಂಬಿ ಇತ್ತ ಕಡೆ ಸುಳಿದಿಲ್ಲ.
ಈ ಇಳಿ ವಯಸ್ಸಲ್ಲಿ ಎದುರಿದ್ದರೂ ನನ್ನ ಕಣ್ಗಳು ನಿನ್ನ ಗುರುತಿಸಲಾರವು.
ನೀ ಚುಚ್ಚಿದರೂ ಮುಳ್ಳುಗಳು ನನ್ನ ಸ್ಪರ್ಷಿಸಲಾರವು.
-ರಂಜಿತ ವಕ್ಕೋಡಿ, ತುಮಕೂರು
- ರಂಜಿತ ವಕ್ಕೋಡಿ
22 Mar 2025, 07:51 pm
ಒ ನನ್ನವಳೇ ಆದರೆ ಅವರು ಕಳೆದ ವರ್ಷ ನಡೆದ ಘಟನೆ ಇದು ಎಲ್ಲ ಅಂಶಗಳನ್ನು ಒಳಗೊಂಡಿದೆ ಇಲ್ಲ ಎಂಬ ಉತ್ತರ ಬಂತು ಎಂದು ಕೇಳುವ ಅವಕಾಶ ಇಲ್ಲ ಎಂಬ ಉತ್ತರ ಬಂತು ಅಂತ ಏನ್ ಆದ್ರೂ ಇಂತಹದೊಂದು ಕಟ್ಟಲೆಯನ್ನು ಹಾಕಿಕೊಳ್ಳಲು ನೋಡಿದ ಆಗ ಅವರ ಜತೆಯಲ್ಲಿ ನಿಂತವರು
ಪ್ರೀತಿ ಎಂಬ ಪದಕ್ಕೆ ಸ್ಪೂರ್ತಿ ನೀನು |
ಸಿಗಲಾರದ ರಾಧೆಯನ್ನು ಮರೆಯಲಾಗದಷ್ಟು ಪ್ರೀತಿಸಿಬಿಟ್ಟೆ, ನಾನು ರಾಮನೋ ರಾವಣನೋ ಗೊತ್ತಿಲ್ಲ ಆದರೆ ನನ್ನಿಂದ ದೂರ ಆಗಿದು ಮಾತ್ರ ನನ್ನ ಸೀತಾ ನೇ||
ಜಗತಿನಲ್ಲಿ ಅತಿ ಪರಿಶುದ್ಧವಾದ ಪ್ರೀತಿ ಎಂದರೆ ಅದು ಸಿಗಲಾರದ ಪ್ರೀತಿ, ಹಣೆಬರಹದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆ ಆಗಿರುವಳು,
ಬೆಳ್ಳಿ ಕಾಲ್ಗೆಜ್ಜೆ ಬೇಕು ಎಂದವಳು ಇವತ್ತು ಬೇರೆಯವರ ಬೆಳ್ಳಿ ಕಾಲುಂಗುರ ವಡತಿಯಾಗಿ ಹೋದವಳು ನನ್ನವಳು,
ಒಳ್ಳೆ ಗುಣದವಳು ಹಾಲಿನ ಮನಸ್ಸಿನವಳು, ಅವಳೇ ನನ್ನವಳು,
ಸೀತೆಯ ಹಾಗೆ ಜೊತೆಗಿರಲು ಬಯಸಿದೆ ಆದರೆ ವಿಧಿ ರಾಧೆಯಂತೆ ದೂರ ಮಾಡಿತು,
ಕಣ್ಣೋಟದಲ್ಲಿ ಕಂಡವಳು ಕಣಂಚಿನಲ್ಲಿ ಮರೆಯದವಳು. ಮರೆಯಲಾಗದಷ್ಟು ಪ್ರೀತಿ ಕೊಟ್ಟು ಮೌನವಾಗಿ ದೂರವಾದಳು.
ನನ್ನವಳು ಮರಳಿ ಬಂದಳೆಂದು ಖುಷಿ ಆಯಿತು ಎದ್ದು ನೋಡಿದಾಗ ಬೆಳಗಿನ ಕನಸೇಂದು ತುಂಬಾ ನೋವಾಯಿತು.
ಅದೃಷ್ಟವಿಲ್ಲದ ಹಣೆಬರಹದಲ್ಲಿ
ವಜ್ರವೊಂದು ಸಿಕ್ಕಿ ಕೈಜಾರಿದಂತೆ......