ಒಲವೇ ಜೀವನ ಸಾಕ್ಷಾತ್ಕಾರ, ಪ್ರೀತಿ ಎಂಬುದು ಕೇಳುವ ನೋಡುವ ಓದುವ ಕಲೆಯಾಗಿರಬಾರದು, ಜೀವನದಲ್ಲಿ ನಡೆದುಕೊಳ್ಳುವ ಪ್ರೀತಿ ಆಗಿರಬೇಕು. ಈಗ ಜೀವಂತವಾಗಿರುವ ಜೀವಿಗಳ ಮೇಲೆ ಪ್ರೀತಿ ಇಲ್ಲವೇ ಇಲ್ಲ. ಈಗ ಪ್ರೀತಿ ಇರೋದು ನಿರ್ಜೀವವಾದ ಮೊಬೈಲ್ ಮೇಲೆ ಮಾತ್ರವೇ, ಈಗ ಜೀವನವೇ ಸಕಲಕಲ್ಲ ವಲ್ಲಭ ಆಗಿದೆ ಮೊಬೈಲ್.!!
ನನ್ನ ವೃತ್ತಿ ಪ್ರಪಂಚ ಬೇರೆಯೇ ಇದ್ದರೂ..
ನಿನ್ನ ಕುರಿತು ಗೀಚಿತ್ತಾ
ಲೇಖಕನೇ ಆಗಿ ಬಿಟ್ಟಿರುವೆ..!!
ಪದಗಳನ್ನು ಹುಡುಕಬೇಕೆಂದೇನಿಲ್ಲ
ಅಕ್ಷರಗಳೆಲ್ಲವು ನಾಜುಕಾಗಿ
ಬಂದು ಸೇರುತ್ತಿವೆ ನನ್ನ
ಬರವಣಿಗೆಯಲ್ಲಿ.....
ಎಮ್.ಎಸ್.ಭೋವಿ...✍️
.
.
.
..
..
..
..
.
.
.
.
ನಾಲ್ಕು ಗೋಡೆ ಮದ್ಯೆ ನನ್ನ ಜನನ
ತಂದೆ ತಾಯಿ ಪ್ರೀತಿಯಲ್ಲಿ ಕಂಡೆ ನಾ ಪಾವನ
ನಾಲ್ಕು ಜನ ಹೆಗಲ ಮೇಲೆ ಸಾಗುವವರೆಗೆ ಮಾಡುವೆ ನಾ ಪಯಣ
ಇಂದು ಅವಮಾನ ಮಾಡಿದವರು
ಮುಂದೆ ಒಂದು ದಿನ ಸನ್ಮಾನ ಮಾಡುವವರಿಗೂ
ಮಾಡುವೆ ಜೀವನ ಇಲ್ಲಿಗೆ ಸ್ವಾರ್ಥಕ ನನ್ನ ಜೀವನ
..
ನನ್ನ ಸೌಭಾಗ್ಯದ ಸಿರಿ ನೀವು,
ಯಾರಿಗೂ ಕೇಡನ್ನು ಬಯಸದ ಹೃದಯ ನಿಮ್ಮದು.
ನನ್ನ ಮೇಲೆ ಕೋಪಿಸಿಕೊಳ್ಳದ ದೇವರು ನೀವು,
ನಿಮ್ಮಲ್ಲಿ ಕಂಡಿಲ್ಲ ಒಂದು ದೋಷವು ನನಗೆ.
ನಾ ಹೃದಯ ಚಿಪ್ಪಲ್ಲಿ ಬಚ್ಚಿಟ್ಟು ಪೂಜಿಸುತ್ತಿರುವೆ ನಿಮನ್ನ,
ಜ್ವಾಲಾಮುಖಿಯೂ ಸುಡಲಾಗದು ನಿಮ್ಮಾ ಮೇಲಿನ ಪ್ರೀತಿಯನ್ನು ನನ್ನಾ ಉಸಿರಿರುವ ತನಕ.
ಯಾವ ಜನ್ಮದ ಸಂಬಂಧವೋ ನೀ ನನಗೇ,
ಈ ಜನ್ಮದಲ್ಲಿ ಸಿಕ್ಕ ನಿಧಿಯು ನೀವೂ.
ನನ್ನಾ ಕೋಪಕ್ಕೆ ಬೇಸರಗೊಳ್ಳದ ನಿಮ್ಮ ಮನಸ್ಸು,
ಹೊಳೆಯುವ ಸಿಂಧೂರದಂತೆ.
ಮಾನವ ರೂಪದ ದೇವರು ನೀವೂ,
ಶಿಷ್ಟಾಚಾರದ ಹಾದಿಯಲ್ಲಿ ನಡೆಯುವ ಹೃದಯ ನಿಮ್ಮದು.
ನನ್ನೆಲ್ಲ ಹೃದಯ ಬಡಿತ ನೀವಲ್ಲವೇ,
ಗಡಿಯಾರದ ಮುಳ್ಳಂತೆ ನಿಮ್ಮ ನೆನಪುಗಳು ಸವೆಸುತಿವೆ ನನ್ನಾ ಜೀವವ.
ನನ್ನ ನೋವು ನಲಿವಿನಲಿ ಜೊತೆ ಗಿರುವೆ,
ನನ್ನ ನಗು ಮುಖವ ನೋಡಲು ಸದಾ ಕಾಯುವೆ.
ಹೆಪ್ಪುಗಟ್ಟಿರೋ ಹೃದಯ ತಿಳಿಯಾಗದೆ ಹರಿಯುವುದೇ ನಗುವಿನ ಕಾಲುವೆ..