ಬಾ ಎನ್ನ ಕಾವ್ಯ ಗಂಗೆ ,
ಎನ್ನ ಹೃದಯವು ಬತ್ತಿದೆ ನಿನ್ನ ಹರಿವಿಲ್ಲದೆ.
ಪ್ರೇಮ ಮಲ್ಲಿಗೆಯು ಬಾಡುತಿಹುದು ನಿನ್ನ ಸಾನಿಧ್ಯವಿಲ್ಲದೆ. ಚಾತಕ ಪಕ್ಷಿ ಮುಂಗಾರಿಗಾಗಿ ಹವಣಿಸುವಂತೆ, ಹವಣಿಸುತ್ತಿರುವೆ ನಾ ನಿನ್ನ ಆಗಮನಕ್ಕೆ .ಎನ್ನ ಹೃದಯದ ಚಿಪ್ಪಿನಲ್ಲಿ,
ಅವಿತ್ತಿಟ್ಟಿರುವೆ ಕಾವ್ಯ ಮುತ್ತನ್ನು, ಉಡುಗೊರೆಯಾಗಿ.
ವಸಂತ ಕಾಲದಲ್ಲಿ ಜೇನಿನ ಪರಾಗಸ್ಪರ್ಷಕ್ಕೆ ವನಕುಸುಮಗಳು ಕಾದಿರುವಂತೆ ನಾ ಕಾಯುತ್ತಿರುವೆ ನಿನ್ನ ಅಮೋಘ ಭಾವಸ್ಪರ್ಶಕ್ಕೆ ,
ಬಾ ನನ್ನ ಕಾವ್ಯ,
ಹರಿಸೆನ್ನಲ್ಲಿ ಪ್ರೇಮ ವರ್ಷ,
ಮಯೂರನಂತೆ ಹರಡುವೆ ಪದ ಗುಚ್ಚವನ್ನು ,ನಿನ್ನ ಹಾಡಿ ಹೋಗಳಲು ನೀ ಹಾಡಾದರೆ ,ನಾ ಸ್ವರವಾಗುವೆ. ಬಾ ನನ್ನ ಕಾವ್ಯ ನಾವಿಬ್ಬರು ಸೇರಿ ಹಾಡುವ ಜೀವರಾಗ.
ಭಾವ( ಆಲ್ವಿನ್ ಪವನ್ ಹಾಸನ)
ಜಿಟಿ ಜಿಟಿ ಮಳೆಯಲಿ
ತುಂಬಿ ತುಳುಕಿದ ಬಾರಲಿ
ನನಗೆ ನೀನೆ ಬೇಕು ಅನ್ನೋ
ಬೀಯರ್ ಬಾಟ್ಲ್ ಜೊತೆಯಲಿ
ಚಿಕನ್ ಕಬಾಬ್ ಮಿಲನದಲಿ
ಒಂದೆರೆಡು ಬಾಟ್ಲ್ ಸೇರಿಸಿ
ನಂತರ ಹೋಗಬೇಕಿದೆ
ನನ್ನ ಹೆಂಡತಿಯೇ ಇಲ್ಲದ
ಮನೆಯ ಬಾಗಿಲ ಬಳಿ...
ಎಮ್.ಎಸ್.ಭೋವಿ...✍️
.
.
.
ಕತ್ತಲೆ ಆವರಿಸಿದ ಜೀವನದಲಿ
ಮಿಂಚುಹುಳದಂತೆ ಬೆಳಕನ್ನು ಹಚ್ಚಿದೆ
ಬಾಡಿ ಹೋದ ಮನಸ್ಸಿಗೆ
ಹೊಸ ಚೈತನ್ಯ ತುಂಬಿದೆ
ನನ್ನ ಸ್ನೇಹಿತೆಯೇ
ನಿನ್ನ ಮಾತುಗಳು ನನಗೆ ಸ್ಫೂರ್ತಿ
ಎಂದಿಗೂ ನೀನಾಗಿರು ನನ್ನ ಜೀವನದ ಗೆಳತಿ
:
:
;
;
:
:
ಪದಗಳೇ ಸಾಲುತ್ತಿಲ್ಲ ವರ್ಣಿಸಲು ನಿನ್ನ
ಜೊತೆ ಇರುವ ಪ್ರೀತಿಯೊಳು ಕಳೆದು ಹೋಗಿರುವೆ ನಾ
ಇಡುವ ಹೆಜ್ಜೆಗಳ ಜೊತೆ ಬರುವೆ ನಾ
ನನ್ನ ಅರಿವ ಹೃದಯ ನಿನ್ನಲ್ಲಿ ಇರಲು
ಗಳಿಗೆ ಇಹುದೆ ಹೊರತು ನಿನ್ನ
ಶರಣಾಗಿರುವೆ ನಿಷ್ಕಲ್ಮಶ ಹೃದಯಕೆ .
ಬಯಸುತ ನಿನ್ನ ಮಡಿಲು
ಮತ್ತೆ ಹಸುಗೂಸಿನಂತೆ ಮಲಗಲು .
ಆರಾಧಕಿ ? ಏನೆಂದು ವರ್ಣಿಸಲಿ ಆ ನಿಷ್ಕಲ್ಮಶ ಪ್ರೀತಿಯ. ಈ ಪುಟ್ಟ ಮನಸಿಗೆ ಅತಿ ದೊಡ್ಡ ಪರಿಚಯವಾಗಿ?, ಸ್ವಲ್ಪ ದಿನಾ ಆಗಿದ್ದರೂ ಸಹಾ ಎಷ್ಟೋ ಜನ್ಮದ ಅನುಬಂಧ ಎಂದು ಭಾಸವಾಗುತ್ತಿದೆ .? ನೀವು ನನ್ನ ಜೀವನಕ್ಕೆ ಅತ್ಯಮೂಲ್ಯವಾಗಿದ್ದಿರಿ. ನೀವ್ ಇಲ್ಲದ ಜೀವನವನ್ನು ಊಹಿಸಲು ಸಹಾ ಸಾಧ್ಯವಾಗುತ್ತಿಲ್ಲ.? ನೀವು ನನ್ನಾ ಜೀವನದಿಂದ ಇರುವುದಿಲ್ಲ ಎಂಬ ಸತ್ಯವನ್ನು ಒಮ್ಮೆ ಮನದಲ್ಲಿ ಇಟ್ಟುಕೊಂಡರೆ ಜೀವ ನನಗೆ ಗೊತ್ತಿಲದೇ ನಡುಗಲು ಪ್ರಾರಂಬಿಸುತ್ತದೆ . ಪ್ರೀತಿ ಎಂಬ ಬಾಣಕ್ಕೆ ಸಿಲುಕಿ, ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೂ ಸಹ ನನ್ನಲಿ ಇಲ್ಲಾ... ನನ್ನಲಿರುವ ಕೋರಿಕೆ ಒಂದೇ ಈ ಜೀವನವನ್ನು ನಿನ್ನಲ್ಲಿಯೇ ಕಳಿಯ ಬೇಕೆಂಬುದು... ಒಮ್ಮೆ ಆಲಿಸಿ ನೋಡಿ.... ಕಣ್ಣಿನಾ ಸಮ್ಮಿಲನ ಇಷ್ಟೆಲ್ಲಕ್ಕೆ ಕಾರಣವಾಗಿದೆ. ನಿನ್ನನು ಬಿಟ್ಟು ಇರುವ ಶಕ್ತಿ ನನ್ನಲ್ಲಿ ಅಂತೂ ಇಲ್ಲಾ..... ನಿಮಗೆ ಆ ಶಕ್ತಿ ಇದ್ದರೆ ಇದ್ದು ಬಿಡಿ...... ನಾ ಅನಂತವಾಗಿ ಪ್ರೀತಿಸುವ ಪುಟ್ಟ ಹೃದಯ ನಿಮ್ಮದೆ ??