ಫೋನ್ ನಿನ್ನ ಮುಟ್ಟಲು ನನಗೆ ಕಾರಣವಿಲ್ಲ
ಆದರೆ ಅವಳನ್ನು ಸ್ಪರ್ಶಸಲು ಮನಸು ಕಾರಣ ಹುಡಿಕಿತಲ್ಲ
ಊರ್ವಶಿಯನ್ನೇ ಮೀರಿಸುವಂತ ಅಂದವಂತೆ ಆಕೆ
ಸನಿಹಕೆ ಬಂದಾಗ ಅವಳು ಹೃದಯ ಬಡಿತ ಜೋರಾಯ್ತು ಯಾಕೆ..
ದಿನಬೆಳಗಾದರೆ ಸೂರ್ಯನದೆ ಭೂಮಿಗೆ ಆರತಿ
ನನ್ನ ಮನಸ್ಸನ್ನು ಕ್ಷಣಕ್ಕೆ ಸೆಳೆದು ಬಿಟ್ಟಳು ಅ ರತಿ
ಇವೆಲ್ಲ ಮಾತಾಷ್ಟೇ
ನಿಜವಾಗಿಯೂ ಪೂಜಿಸುತ್ತಿರುವೆ ಅವಳನ್ನು ಅಂದು ಕೊಂಡು ದೇವತೆ.....
ವಿವಿಧ ಹೂ ಮನಗಳ ಮಾಲೆ ಮಾಡಿ,
ಶಿಕ್ಷಕ ಏಕತೆಯ ಕಂಪು ನೀಡಿ,
ನಲಿಯುತ ಕಲಿಸುವ ಮಕ್ಕಳಿಗೆ
ಅಂಗಳದ ಆಟದಿ ತಾನೊಟ್ಟುಗೂಡಿ.
ಮಗುವಿನ ಕಲಿಕೆಗೆ ನಕ್ಷತ್ರವಾಗಿ,
ಭವಿಷ್ಯದ ಬುನಾದಿಗೆ ಕನ್ನಡಿಯಾಗಿ,
ಸಹಾನುಭೂತಿ ಶಿಕ್ಷಕ ದುಡಿಯುವ
ಮಕ್ಕಳ ಸಾಧನೆಯ ಯಶಸ್ಸಿಗಾಗಿ.
ಚಿಗುರುವ ಲತೆಗಳ ತಪ್ಪಿಗಿಲ್ಲ ಬೇಸರ,
ಮಗುವಿನ ಜ್ಞಾನಕ್ಕೆ ಹೊಂಬಣ್ಣ ಕೊಡುವ ಸರದಾರ,
ಜನರ ನೋವನ್ನು ಮರೆಸುವ ವಿದ್ಯೆ,
ಪಡೆಯುವುದು ಧರೆಯನಾಳಲು ಸದ್ಗುರುವಿನ ಸಂಸ್ಕಾರ. ಅಮೂರ್ತ ವಿಷಯಗಳ ಅರ್ಜನೆಗೆ
ಸಹಕರಿಸುವ ಗುರೂ ಹೊಸ ಸಂಶೋಧನೆಗೆ,
ಪಾರದರ್ಶಕದಿ ಪಡೆದ ಸಂಸ್ಕೃತಿ,
ಪಸರಿಸುವುದು ಗುರುವಿನ ಹೆಸರೊಂದಿಗೆ.
ಬುದ್ಧ ನೀಡಿದ ಜ್ಞಾನದ ಬೆಳಕು,
ಜಗಕೆ ಕಲಿಸಿದೆ ಶಾಂತಿಯ ಬದುಕು,
ಕಷ್ಟಗಳಿಗೆ ಅಂಜದೆ ನಡೆ ಮುಂದಕೆ,
ತೃಷೆಯಿರುವ ಮನುಜಗೆ ನಿ ನೀರಾದರೆ ಸಾಕು.
ಓದಲು ಕುಳಿತೆ ಮೂಕಜ್ಜಿಯ ಕನಸು.
ಅರ್ಥವಾಗದೇ ಹೊಯ್ತು ಕಾರಾಂತರ ಮನಸು.
ಇನ್ನೂ ಓದಿಲ್ಲವಾ ಮೂಕಜ್ಜಿಯ ಕನಸು?
ಹಾಗಿದ್ರೆ ನೀವು ಮಾಡಬೇಕು ಖಂಡಿತ ಮನಸು.
ಅಯ್ಯೋ ರಾಮಾ, ನನ್ನ ಮೇಲೇಕೆ ನಿಮ್ಮ ಮುನಿಸು?
ನನ್ನ ಊಹೆಗೂ ಮೀರಿದ ಭಾವನೆ ನೀನು
ನಿನ್ನ ನಾ ಹುಡುಕುವೆ ಆ ಗುಂಗುರು ಕೂದಲಲ್ಲಿ
ಕಾಯುವೆ ನಾ ನಿನ್ನ ಬರುವಿಕೆಯನ್ನು
ಆ ನಿನ್ನ ನಗುವನು ನೋಡಲು ಹಾ ತೊರೆಯುತಿದೆ ನನ್ನ ಈ ಮನ
ಮಿಡಿಯುತಿದೆ ಈ ಹೃದಯ ನಿನ್ನ ತುಟಿ ಅಂಚಿನ ಧ್ವನಿಯ ಕೇಳಲು
ನನ್ನ ಕಂಗಳು ಸೆಳೆಯುತಿದೆ ನಿನ್ನ ನಡೆಯತ್ತಾ
ಪದೆ ಪದೆ ಕಾಡುತಿದೆ ಆ ನಿನ್ನ ನೆನಪು
ಆ ನಿನ್ನ ನೆನಪಿನಿಂದ ಆದೇ ನಾ ಕವಯಿತ್ರಿ
ನಿನಗೇ ಅಡುಗೆ ಮಾಡಲು ಬರದೆ ಇದ್ರು
ಪರವಾಗಿಲ್ಲ ಹೇಗಿದ್ರೂ ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಊಟ ಮಾಡೋದು ಮಾತ್ರ ಚನ್ನಾಗಿ ಕಲಿ
ಯಾಕೆಂದ್ರೇ ನನ್ನ ಅತ್ತೆ
ನನಗೆ ಬಯ್ಯೋದು ಬೇಡ....
ನನ್ನನ್ನ ಹೇಗೆ ನೋಡ್ಕೊಂಡ್ರು ಪರವಾಗಿಲ್ಲ
ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಮನೆಗೆ ಬಂದ ಸಂಭಂದಿಕರನ್ನ
ಚೆನ್ನಾಗಿ ನೋಡ್ಕೋ ಯಾಕೆಂದ್ರೆ ನಿನ್ನ ಅತ್ತೆ
ನಿನಗೇ ಬಯ್ಯೋದು ಬೇಡ....
ಎಮ್.ಎಸ್.ಭೋವಿ...✍️