"ನನ್ನ ಮಾತುಗಳೆಲ್ಲ ಸೋತಾಗ,
ನಾ ಕಣ್ಮುಚ್ಚಿ ಕೇಳುವ ಹಾಡುಗಳ ಹುಡುಕು,
ನಾ ಮೈಮರೆತು ಗುನುಗುವ ಹಾಡುಗಳ ಬೆದಕು.
ಆ ಹಾಡುಗಳಂತಹ ಹಾಡುಗಳ ಹಾಡು,
ಆ ಹಾಡುಗಳ ನಡುವಿನ ನೀರವ ಮೌನವ ನೋಡು. ಸಾವಿರ ಪದಗಳಿರಬಹುದೇನೋ ಆ ಕಡುಗತ್ತಲಲ್ಲಿ.
ನಾ ಆಡದೆ ಅವಿತಿಟ್ಟ ಮಾತುಗಳೆಲ್ಲ ಅಡಗಿರಬಹುದೇನೋ ಆ ಮೌನದಲ್ಲಿ "...!
-ಆಶಾ✍️
- Asha S A
14 Aug 2024, 02:03 pm
ಲೇ ನನ್ನೋಳೇ.... ನಿನಗೇ ಅಡುಗೆ ಮಾಡಲು ಬರದೆ ಇದ್ರು
ಪರವಾಗಿಲ್ಲ ಹೇಗಿದ್ರೂ ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಊಟ ಮಾಡೋದು ಮಾತ್ರ ಚನ್ನಾಗಿ ಕಲಿ
ಯಾಕೆಂದ್ರೇ ನನ್ನ ಅತ್ತೆ
ನನಗೆ ಬಯ್ಯೋದು ಬೇಡ....
ನನ್ನನ್ನ ಹೇಗೆ ನೋಡ್ಕೊಂಡ್ರು ಪರವಾಗಿಲ್ಲ
ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಮನೆಗೆ ಬಂದ ಸಂಭಂದಿಕರನ್ನ
ಚೆನ್ನಾಗಿ ನೋಡ್ಕೋ ಯಾಕೆಂದ್ರೆ ನಿನ್ನ ಅತ್ತೆ
ನಿನಗೇ ಬಯ್ಯೋದು ಬೇಡ....
ಇದು ಕೇವಲ ಭಾಷೆಯಲ್ಲ
ಇದೊಂದು ಭಾವನೆ, ಹೃದಯದ ಭಾಷೆ.
ತಾಯಿಯಂತೆ ಕಾಣುವ ನಾವು
ಕಾಯುವ ಗುಣವಿರಲಿ.
ಎರಡು ಸಾವಿರದ ಐದನೂರು ವರ್ಷಗಳ
ಇತಿಹಾಸವಿರುವ ಮಾತೃಭಾಷೆಗೆ ಸಮ್ಮಾನವಿರಲಿ.
ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರಶಸ್ತಿ ಪಡೆದುಕೊಂಡಿರುವ
ಈ ಭಾಷೆಗೆ ಸ್ಥಾನ-ಮಾನ ಸಿಗಲಿ.
ಹೃದಯದ ಭಾಷೆ ಕನ್ನಡವಾಗಿರಲಿ.
ದುಡಿಮೆಯಲ್ಲಿ ಅನ್ಯ ಭಾಷೆ ಇರಲಿ.
ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೆ
ಪ್ರತಿ ದಿನವೂ ಕನ್ನಡವಾಗಲಿ.
ಜೀವನದಲ್ಲಿ ಭಾಷೆ ಮುಖ್ಯ
ಅದುವೇ ಮಾತೃ ಭಾಷೆಯಾಗಿರಲಿ.