Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಎಲ್ಲವೂ ಸರಿ
ಅದು ಅದರ ದೃಷ್ಟಿಯಲ್ಲಿ
ಆದರೆ ಅಂದುಕೊಂಡರೆ ತಪ್ಪು
ಬೇರೆಯವರ ದೃಷ್ಟಿಯಲ್ಲಿ
ಎಲ್ಲರೂ ಸರಿ
ಅದು ಅವರ ದೃಷ್ಟಿಯಲ್ಲಿ
ಅಂದುಕೊಂಡವರೇ ತಪ್ಪು ಇತರರು ದೃಷ್ಟಿಯಲ್ಲಿ
ಎಲ್ಲಾ ಸಮಯವೂ ಸರಿ
ಅದು ಅದರ ದೃಷ್ಟಿಯಲ್ಲಿ
ಅಂದುಕೊಂಡರೆ
ಅಂದುಕೊಂಡ ಸಮಯವೇ ತಪ್ಪು ಇತರರ ದೃಷ್ಟಿಯಲ್ಲಿ
ಎಲ್ಲಾ ಕೆಲಸವೂ ಸರಿ
ಮಾಡಿದವರ ದೃಷ್ಟಿಯಲ್ಲಿ
ಆದರೆ ತಾನು ಮಾಡಿದ ಕೆಲಸವೇ ತಪ್ಪು ಇತರರು ದೃಷ್ಟಿಯಲ್ಲಿ
ಎಲ್ಲಾ ಮಾತುಗಳೂ ಸರಿ
ಆಡಿದವರ ದೃಷ್ಟಿಯಲ್ಲಿ
ಆದರೆ ಇತರರ ಮಾತು ತಪ್ಪು ಬೇರೆಯವರ ದೃಷ್ಟಿಯಲ್ಲಿ
ಎಲ್ಲಾ ರೂಪ ಸರಿ
ಅವರ ದೃಷ್ಟಿಯಲ್ಲಿ
ಆದರೆ ಬೇರೆಯವರ ರೂಪ
ಮಾತ್ರ ಸರಿಯಲ್ಲ ಅವರು ದೃಷ್ಟಿಯಲ್ಲಿ
ಎಲ್ಲಾ ಅವರ ಕರ್ಮ ಸರಿ
ಅವರ ದೃಷ್ಟಿಯಲ್ಲಿ
ಆದರೆ ಬೇರೆಯವರ ಕರ್ಮ ಸರಿಯಲ್ಲ ಅವರು ದೃಷ್ಟಿಯಲ್ಲಿ
ಅವರ ವರ ಭಾವನೆ
ತಿದ್ದಿಕೊಂಡರೆ
ಕಈಳಆಗಉವ ಅವಕಾಶವಿಲ್ಲ
ಬೇರೆಯವರ ದೃಷ್ಟಿಯಲ್ಲಿ
-ಶಹಾಬುದ್ದೀನ್. ಕಾಲೇಖಾನ್
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Sep 2024, 08:45 am
ಅವಳ ಅಂದವೇ ಹಾಗೆ!
ಪರಿಮಳ ಸುಸುವ ಹೂವಿನ ಹಾಗೆ!!
ಅವಳ ಕಣ್ಣೋಟವೆ ಹಾಗೆ!
ಹುಣ್ಣಿಮೆಯ ಚಂದಿರ ಹೊಳೆಯುವ ಹಾಗೆ!!
ಅವಳ ಸಿಹಿ ಮಾತುಗಳೇ ಹಾಗೆ!
ನನ್ನೆದೆಗೆ ತಾಕುವ ಬಾಣದ ಹಾಗೆ!!
ಅವಳ ಸ್ಪರ್ಶವೇ ಹಾಗೆ!
ಭೂಮಿಗೆ ಮೊದಲ ಮಳೆ ಸುರಿದ ಹಾಗೆ!!
ಅವಳಿಡುವ ಕುಂಕುಮವೇ ಹಾಗೆ!
ರಂಗೇರಿ ಹೊಳೆಯುವ ಸೂರ್ಯನ ಹಾಗೆ!!
ನನ್ನವಳೆ ಹಾಗೆ!
ಗಂಧರ್ವ ಲೋಕದ ಕನ್ನೆಯ ಹಾಗೆ!!
Saleem md...✍️
- saleem Dalawai
29 Sep 2024, 09:16 pm
ಅವಳ ಅಂದವೇ ಹಾಗೆ!
ಪರಿಮಳ ಸುಸುವ ಹೂವಿನ ಹಾಗೆ!!
ಅವಳ ಕಣ್ಣೋಟವೆ ಹಾಗೆ!
ಹುಣ್ಣಿಮೆಯ ಚಂದಿರ ಹೊಳೆಯುವ ಹಾಗೆ!!
ಅವಳ ಸಿಹಿ ಮಾತುಗಳೇ ಹಾಗೆ!
ನನ್ನೆದೆಗೆ ತಾಕುವ ಬಾಣದ ಹಾಗೆ!!
ಅವಳ ಸ್ಪರ್ಶವೇ ಹಾಗೆ!
ಭೂಮಿಗೆ ಮೊದಲ ಮಳೆ ಸುರಿದ ಹಾಗೆ!!
ಅವಳಿಡುವ ಕುಂಕುಮವೇ ಹಾಗೆ!
ರಂಗೇರಿ ಹೊಳೆಯುವ ಸೂರ್ಯನ ಹಾಗೆ!!
ನನ್ನವಳೆ ಹಾಗೆ!
ಗಂಧರ್ವ ಲೋಕದ ಕನ್ನೆಯ ಹಾಗೆ!!
Saleem md...✍️
- saleem Dalawai
29 Sep 2024, 03:44 pm
- Rajmuttu Belagali
28 Sep 2024, 01:14 pm
ಮುಕೂ ಪ್ರೀತಿಗೆ ಮರುಳಾಗಿ..
ಬಿಡುವಿನ ಪ್ರಿತಿಗೆ ಬಲಿಯಾಗಿ....
ಸಿಗದ ಪ್ರೀತಿಗೆ ಸ್ನೇಹಿತನಾಗಿ.......
ಪ್ರೀತಿಸೋ.. ಪ್ರೀತಿಗೆ,
ಸಧಾ ಪ್ರೇಮಿಯಾಗಿರುವೆ....
ಭಾ... ನನ್ನ ಗೆಳತಿ.
kissking.
- Rajmuttu Belagali
28 Sep 2024, 12:24 pm
ಅಪರೂಪಕ್ಕೂ ಪ್ರತಿರೂಪ ನೀನು
ಸಜ್ಜನಿಕೆಗೆ ಸಮಾನಾರ್ಥ ನೀನು
ಅಕ್ಕ ಅನ್ನೊ ಪದವಿಗೆ ಕಾರಣ ನೀನು
ಅಕ್ಕರೆಯ ಪ್ರೀತಿ ನೀಡುವ ಜೀವ
ಮಮತೆ ವಾತ್ಸಲ್ಯವ ಧಾರೆ ಎರೆವ ಅನುಜ
ಅಣ್ಣನಂತೆ ಸದಾ ಕಾಯುವ ಕಾವಲುಗಾರ
ನನ್ನ ಜೀವನದಲ್ಲಿ ಸಿಕ್ಕ ಅತ್ಯಮೂಲ್ಯ ಉಡುಗೊರೆ
ಯಾವ ಜನುಮದ ಅದೃಷ್ಟವೋ
ನೀ ನನ್ನ ಸಹೋದರನಾಗಿ ಬಂದದ್ದು
ಈ ಜೀವಕ್ಕೆ ಬೇರೆ ಏನೂ ಬೇಡಿಕೆಯಿಲ್ಲ
ಎಂದೆಂದಿಗೂ ನಮ್ಮ ಅನುಬಂಧ ಹೀಗೆ ಇರಬೇಕು
ಸದಾ ನೀ ನಗು ನಗುತಾ ಖುಷಿಯಾಗಿರಬೇಕು
ನೀ ನಡೆವ ದಾರಿಯಲ್ಲಿ ಏಳಿಗೆ ಯಶಸ್ಸು ತುಂಬಿರಲಿ
ನಿನ್ನ ಕಂಡ ಕನಸ್ಸೆಲ್ಲಾ ನನಸಾಗಲಿ
ಆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
❤ಹುಟ್ಟು ಹಬ್ಬದ ಶುಭಾಶಯಗಳು ತಮ್ಮು❤
- ರಂಜಿತ ಭಾವನೆಗಳ ಸುಳಿಯಲ್ಲಿ
26 Sep 2024, 09:52 pm
ನಿನ್ನ ಸೆಳೆತಕೆ
ಸಮ್ಮೋಹಿತಳು ನಾನು
ನಿನ್ನ ಪ್ರೀತಿಯಲಿ
ಮಿಂದೆದ್ದ ಮೇಲೂ
ಮೋಹಿಸಿದೆ ಇರಲಿ
ಹೇಗೆ ಹೇಳು
ನಿನ್ನೊಲವ ಅಲೆಗಳು
ಮನವ ತೋಯ್ದ ಮೇಲು
ಕಡಲಿಗೆ ಕೈಚಾಚದೆ ಹೇಗಿರಲಿ
ನೀನೆ ಹೇಳು
ಬೆರಳುಗಳು ಸೋಕಿ
ಮುಂಗುರುಳು ಮುಗಳ್ನಗಲು
ಮಿನುಗಿದ ಕಣ್ಣುಗಳಲಿ
ಪ್ರೀತಿಯ ನೀನೆ ನೋಡು
ತಂಗಾಳಿಯ ಹಿತವು
ಕಿರುಬೆರಳಲೆ ಕುಳಿತು
ಕೆಣಕುತಲೆ ಇರಲು
ಸೋಲದೆ ಹೇಗಿರಲಿ ಹೇಳು
-- ಶ್ರೀಕಾವ್ಯ
- ಶ್ರೀಕಾವ್ಯ
19 Sep 2024, 08:27 pm
ಪಯಣ ದಾರಿ ,
ಅವಳ ಹುಡುಕಿ
ಸಿಗುವುದೆಂದು?
ಅವಳಿರುವ ಹಾದಿ....
ಕಾರ್ಮೋಡದ ಕತ್ತಲು
ಮನದಲ್ಲಿಂದು,
ಮತ್ತೆ ಬೆಳಕು
ಬೆಳಗುವಳೆಂದು.....
ನೋವನುಂಡು
ಅಳುವೆನಿಂದು,
ಅವಳ ಕಂಡು
ನಗುವೆನೆಂದು?
ಅವಳ ನೆನೆದ
ದಿನಗಳನ್ನು
ಗೀಚುತ್ತಲಿರುವೆ
ದಿನವೂ ಇಂದು ....
ಅವಳು ಇರದ ಜಗವನಿಂದು ,
ನಾನು ಕೂಡ ಮರೆಯಲೆಂದು......
✍️ಸಂದೀಪ್ ಎಸ್ ಜಿ
- Sandeep SG
19 Sep 2024, 07:28 pm
ದೇವರೆ ನೀನು ಶಂಕರ
ಆದರೂ ನೀ ನನ್ನ ಮಿತ್ರನೆ
ಲೋಕವ ಕಾಯಲು ವಿಷವ ಕುಡಿದ
ನೀಲಕಂಠನು ನೀನಯ್ಯಾ...
ನನ್ನ ಕಾಯುವ ಓ ಶಂಭೋ ಶಂಕರನೇ...
ಕರೆದರೆ ಬರುವ ಕರುಣಾಮಯಿ ಯೇ
ಏನೂ ಕೇಳದ ವೈರಾಗಿಯೆ....
ಆಡಂಬರ ಅಲಂಕಾರ ನಿನಗಿಲ್ಲ
ಕೇವಲ ಭಸ್ಮವೆ ನಿನ್ನ ಪ್ರಿಯವು.
ನಂದಿಯೇ ನಿನ್ನ ವಾಹನವು
ಸರ್ಪವೇ ನಿನ್ನ ಕೊರಳ ಮಾಲೆಯು....
ಮುಕ್ತಿಯ ಮಾರ್ಗವೇ ನಿನ್ನದಯ್ಯ
ಭಕ್ತಿಯ ಮಾಡುವೆ ಬಾರಯ್ಯ...
ಶಂಭೋ ಶಂಕರ ಮಹಾದೇವ
ನಿನ್ನಾ ಭಜನೆಯ ಮಾಡುವೆ ಬಾರಯ್ಯ...
ಕಷ್ಟವ ನೀಗುವ ಓ ರುದ್ರ
ಕೋಪವು ಬಂದರೆ ಪ್ರಳಯವೇ ಹೇ ಭದ್ರಾ.....
ತ್ಯಾಗದ ರೂಪ ನೀನಯ್ಯ
ದೇವರ ದೇವ ಮಹಾದೇವ.
ಶಂಭೋ ಶಂಕರ ಮಹಾದೇವ
ಭಜಿಸುವೆ ನಿನ್ನಾ ಬಾರಯ್ಯ...
- Adesh Shetty
19 Sep 2024, 04:49 pm
ನಿನ್ನ ಬಗ್ಗೆ ನನ್ನು ಏನೆಂದು ವರ್ಣಿಸಲಿ
ನಾವೆಲ್ಲ ಇರುವೆವು ನಿನ್ನ ಮಡಿಲಿನಲ್ಲಿ
ನಿನ್ನ ಒಂದೊಂದು ರೂಪವು ಬಲು ಚೆನ್ನಾ
ನೀ ಮೌನವಾದರೆ ಅಪ್ಪಟ ಚಿನ್ನ
ನಿನ್ನು ಮುನಿದರೆ ನಾಡೆ ಸರ್ವ ನಾಶ
ನಿನ್ನ ಮಡಿಲಲ್ಲಿ ನಲಿಯಲು ಸಿಕ್ಕಿದೆ ನನ್ನಗೊಂದು ಅವಕಾಶ
ನಿನ್ನು ಎಷ್ಟೊಂದು ಸುಂದರವಾಗಿರುವೆ
ನಿನ್ನನು ವರ್ಣಿಸಿ ನನ್ನು ಕವಿಯಗಿರುವೆ
- Prajwal Praju
16 Sep 2024, 10:29 pm