Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆ


ಮಳೆಯೇ
ಇಳೆಯಲ್ಲಿ ಬೆರೆಯುವುದನ್ನು ಕಲಿಸಿದೆ
ಮಳೆಯೇ
ಸಮುದ್ರದಿಂದ ಆವಿಯಾಗುವುದನ್ನು ಕಲಿಸಿದೆ
ಮಳೆಯೇ
ಮಂಜಲ್ಲಿ ಕರಗುವುದನ್ನು ಕಲಿಸಿದೆ
ಮಳೆಯೇ
ಕಣ್ಣಂಚಲಿ ದುಃಖವ ಹರಿಸುವುದನ್ನು ಕಲಿಸಿದೆ
ಮಳೆಯೇ
ಕಲ್ಲು ಬಂಡೆಯಂತಹ ಕಷ್ಟವನ್ನು ಕೊರೆಸುವುದನ್ನು ಕಲಿಸಿದೆ
ಮಳೆಯೇ
ಎಲೆಯ ಮೇಲಿನ ಇಬ್ಬನಿಯ ಸವಿಯಲು ಕಲಿಸಿದೆ
ಮಳೆಯೇ
ಬದುಕಲ್ಲಿ ಕಾಮನಬಿಲ್ಲಿನ ಸಪ್ತ ವರ್ಣಗಳನ್ನು ರಚಿಸಿದೆ
ಮಳೆಯೇ
ಕಷ್ಟಗಳಿಗೆ ಸಹನೆಯಿಂದ ಎದುರಿಸುವುದನ್ನು ಕಲಿಸಿದೆ
ಮಳೆಯೇ
ಕಣ್ಣಲಿ ಮಿಂಚಿನ ಆಸೆಯನ್ನು ಹರಿಸಿದೆ
ಮಳೆಯೇ
ಗುಡುಗಿಗೆ ನಡುಗದೆ ಎದೆಯೊಡ್ಡಿ ನಿಲ್ಲಲು ಕಲಿಸಿದೆ
ಮಳೆಯೇ
ಕಾರ್ಮೋಡದಲ್ಲಿಯೂ ಆಶಾವಾದವ ಕಲಿಸಿದೆ
ಮಳೆಯೇ
ಕೂಲ್ ಮಿಂಚಿನಿಂದ ಬೆಳಕು ಪಡೆಯಲು ಕಲಿಸಿದೆ
ಮಳೆಯೇ
ನೀರಿನ ಆರ್ಭಟವನ್ನು ಎದುರಿಸಲು ಕಲಿಸಿದೆ
ಮಳೆಯೇ
ಮಾಗಿಯ ಬಿಸಿಗೆ ತಂಪಾಗಲು ಕಲಿಸಿದೆ
ಮಳೆಯೇ
ಕಷ್ಟ ಕಾರ್ಪಣ್ಯಗಳಲ್ಲಿ ಮಿಂದೇಳುವುದನ್ನು ಕಲಿಸಿದೆ
ಮಳೆಯೇ
ಬಾನೆತ್ತರದಿಂದ ಬಿದ್ದರೂ ಎದ್ದು ನಿಲ್ಲುವುದನ್ನು ಕಲಿಸಿದೆ
ಮಳೆಯೇ
ಹುಲ್ಲು ಕಡ್ಡಿಗಳಿಗೆ ಆಸರೆಯಾಗುವುದನ್ನು ಕಲಿಸಿದೆ
ಮಳೆಯೇ
ಜೀವನವೆಂಬ ಸಾಗರದಲ್ಲಿ ಲೀನವಾಗಲು ಕಲಿಸಿದೆ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

17 Oct 2024, 03:27 pm

ಕಾಲಚಕ್ರ

ಅತ್ತೆಯಾದವಳು ಹಿಂದೊಮ್ಮೆ ತಾನೂ
ಸೊಸೆಯಾಗಿದ್ದೆ ಎಂದು ಏಕೆ ಮರೆತಳು?
ಸೊಸೆಯಾದವಳು ಮುಂದೊಂದು ದಿನ
ಅತ್ತೆಯಾಗಲೇಬೇಕಲ್ಲವೇ ಎಂದು
ಏಕೆ ಅರಿತ್ತಿಲ್ಲ?

ಮಗಳಾದವಳು ತಾನೂ ಒಬ್ಬ
ತಾಯಿಯಾಗಬೇಕು ಎಂದು ಏಕೆ ತಿಳಿದಿಲ್ಲ?
ತಾಯಿಯಾಗಿದ್ದವಳು ನಾನೂ
ಹಿಂದೆ ಒಂದು ಮನೆಯ ಮಗಳಾಗಿದ್ದೆ
ಎಂದು ಏಕೆ ಮರೆತಳು?

ಮಗನು ಮುಂದೊಂದು ದಿನ
ತಂದೆಯಾಗಲೇಬೇಕೆಂಬ ಸತ್ಯವನ್ನೇಕೆ
ಮರೆಮಾಚುತ್ತಿದ್ದಾನೆ
ತಂದೆಯಾಗಿದ್ದವನು ತಾನೂ
ಮಗನಾಗಿದ್ದಾಗ ಹೀಗೇ ಇದ್ದೆ
ಎಂಬ ನಿಜವನ್ನೇಕೆ ಮರೆತ?.

ಶ್ರೀಮಂತನಾದವನು ತನ್ನ
ಬಹುಮಹಡಿ ಮನೆಯನ್ನು
ಯಾರು ಕಟ್ಟಿದರೆಂದೇಕೆ ಯೋಚಿಸುತಿಲ್ಲಾ?
ಕಾಲಚಕ್ರವನ್ನು ಯಾರಿಂದಲೂ
ನಿಲ್ಲಿಸಲಾಗಲ್ಲ. ಅದು ಎಲ್ಲರಿಗೂ
ಸರದಿಯಂತೆ ಪಾಠ ಕಲಿಸುತ್ತೆ.


ಸಮಯವೆಂಬ ಪಕ್ಷಿಯು
ನಮ್ಮನ್ನು ಕೆಲವೊಮ್ಮೆ ಬಹು
ದೂರ, ಬಹು ಎತ್ತರಕ್ಕೆ ಕರೆದೋಯ್ದು
ಸಮುದ್ರದಾಳಕ್ಕೆ ಬಿಟ್ಟುಬಿಡುತ್ತದೆ.
ಮನುಷ್ಯ ನೋವು, ನಲಿವು, ಅಳು
ನಗು,ದ್ವೇಷ, ಪ್ರೀತಿ ಇವೆಲ್ಲವನ್ನು
ಸಮನಾಗಿ ಸವಿದರೆ ಮಾತ್ರವಲ್ಲವೇ
ಅದಕ್ಕೊಂದು ಬೆಲೆಕಟ್ಟಲು ಸಾಧ್ಯ.

- KALAVATI KITTA

16 Oct 2024, 05:37 pm

ಕನಸು

ಬಾರದ ನಿದ್ದೆಯಲ್ಲಿ
ಕೊನೆವರೆಗೂ ಕಂಡ ಕನಸು ನೀನು
ಹೋಗದಿರುವ ದಾರಿಗೆ
ಕರೆದೋಯ್ದ ಗೆಳತಿ ನೀನು


ಎಂದೂ ಮಾಡದ ಪ್ರೀತಿಯ
ಕೊಟ್ಟವಳು ನೀನು
ತಿಳಿಯದ ಮನಸ್ಸಿಗೆ
ತಿಳಿವಳಿಕೆ ಹೇಳಿ ಕೊಟ್ಟವಳು ನೀನು


ಪ್ರೀತಿಯ ಬಗ್ಗೆ ತಿಳಿಯದ ನನಗೆ
ವಿವರಿಸಿದವಳು ನೀನು
ಯಾರೆಂದು ತಿಳಿಯದ ಜನಕ್ಕೆ
ನನ್ನನ್ನು ವಿವರಿಸಿದವಳು ನೀನು



-ಬಾಲು ?

- Balraj Balu

15 Oct 2024, 11:44 pm

ನನ್ನಾಕಿ

ಸೂಜಿಗಲ್ಲ ಕಣ್ಣ ಸಾಹುಕಾರತಿ ನೋಡಬ್ಯಾಡ ಹಂಗ್
ಹಾಲಗಲ್ಲ ಮ್ಯಾಲೈತಿ ನೆದರ. ಬೆಲ್ಲ ಕೊಡುವಾಂಗ್
ಧನಿವಿಲ್ಲಾ ಮನಕ.. ಅದು ನಿನ್ನ ನೋಡಾಕ
ದಿನವೆಲ್ಲಾ ಸಾಲಲ್ಲ.. ಅದೂ ನಿನ್ನ ನೆನಿಯಾಕ
ಹೊಕ್ಕಾವ ಝುಮಕಿ ನಿನಗ ಮುತ್ತಿಟ್ಟ
ಅದಕಾಗಿ ಅವುಗಳ ಮ್ಯಾಲ ತುಸು ಸಿಟ್ಟ..

- Anand Bagalkot

15 Oct 2024, 08:47 pm

ನನ್ನವ

ಶ್ರೀಮಂತ ಏನಲ್ಲ ನನ್ನ ವ..
ಆದರೂ ಪ್ರೀತಿಯಲ್ಲಿ ಸಾಹುಕಾರ ನನ್ನವ..
ನನ್ನ ಹೃದಯದ ಶ್ರೀಮಂತ ಕಾವ್ಯ ನನ್ನವ...
ಕೋಪದಲ್ಲಿ ಶ್ರೀಮಂತ ನನ್ನವ..
ಕೋಪದಲ್ಲೂ ಕಾಳಜಿ ತೋರಿಸುವ ನನ್ನವ...
ನನ್ನ ಅಂತರಾಳದಿ ಹೃದಯ ಕದ್ದವ....

- Megha

15 Oct 2024, 08:24 pm

ಅವಳಿಗಾಗಿ

ಮಂದಾನಿಲವೇ ನೀನು
ಮುಂದೆ ಮುಂದೆ ಏಕೆ ಓಡುವೆ?
ನನ್ನವಳ ವದನಾರವಿಂದದ
ಮೇಲಿರುವ ಮುಂಗುರುಳನೊಮ್ಮೆ
ಕೆಣಕಿ ನೋಡು. ಎಷ್ಟು ಮುದ್ದಾಗಿ ಕಾಣುವಳು.

ನೀನು ಅವಳಿಗಾಗಿ ಒಂದು ಜೋಗುಳ ಹಾಡು. ನನ್ನ ನೆನಪಿನಲ್ಲಿ ನಿದ್ರಿಸಿ
ಅವಳಿಗೆ ಎಷ್ಟು ದಿನವಾಯಿತು ಕಾಣೆ
ನನ್ನ ಮೇಲಿನ ಕೋಪಕ್ಕೆ
ನಿನ್ನನ್ನೊಮ್ಮೆ ಬೈದರು ಕೋಪಗೊಳ್ಳಬೇಡ. ಏಕೆಂದರೆ
ಕನಸಿನಲ್ಲಿಯೂ ಕೂಡ
ಅವಳಿಗೆ ನನ್ನನ್ನು ಬಿಟ್ಟರೆ
ಬೇರೆ ಯಾವುದೂ ಸೇರದು.

ಓ ನೀಲಿಯ ಆಗಸವೇ, ನೀನು
ಕಾರ್ಮೋಡಗಳಿಗೆ ಸ್ವಲ್ಪ ನಿಂತು,
ನಂತರ ಹೊರಡಿ ಎಂದು ಹೇಳಬಾರದೇ?
ಏಕೆಂದರೆ ನನ್ನಾಕೆ ನಿನ್ನ ಮೇಲೆ
ಕಲ್ಪನೆಗಳ ಚಿತ್ತಾರಗಳನ್ನು
ಬರೆಯುತ್ತಿರುವಳು. ಅಲ್ಲಿ
ಕೇವಲ ನನ್ನ ಚಿತ್ರಗಳೇ ಉಂಟು.
ಈ ಕಾರ್ಮೋಡಗಳಿಗೇನು ಕೆಲಸ
ಓ ಕನಸುಗಾರನೆ, ನೀನು ನನ್ನವಳ
ನಿದ್ರೆಯಲ್ಲಿ ಸುಂದರವಾದ ಸ್ವಪ್ನಗಳನ್ನು
ಹೊತ್ತಯ್ಯಬೇಕು, ಏಕೆಂದರೆ ಕೆಟ್ಟ
ಸ್ವಪ್ನ ಗಳೆಂದರೆ ಅವಳಿಗೆ ಬೆದರಿಕೆ
ಇನ್ನೊಂದು ಮಾತು. ಅವಳ ಕನಸುಗಳಿಗೆ ನನ್ನ ನನ್ನ ರೂಪಗಳನ್ನು
ಕೊಡಲು ಮರೆಯಬೇಡ.

ನಂದನ ವನದ ಕುಸುಮಗಳೇ
ನೀವು ಹೀಗೆ ಅರಳಿ ನಗುತ್ತಿರಿ.
ನನ್ನವಳಿಗೆ ನೀವೆಂದರೆ ಬಲು ಇಷ್ಟ
ನಿಮ್ಮ ಅರಳುವ ಮುಖಗಳಲ್ಲಿ
ಅವಳು ನನ್ನ ಮೊಗವನ್ನೇ ಕಾಣುವಳು.
ಅವಳು ನಿಮ್ಮನ್ನು ತನ್ನ ಮುಡಿಗೇರಿಸಿಕೊಳ್ಳಬೇಕೆಂದರೆ
ನಾನೇ ಬೇಕು.
ಕಾರಣ ನೀವು ಬಿರುದು ನಗುವ
ಮುನ್ನ,ನನ್ನನ್ನು ಕರೆಯಲು ಮರೆಯದಿರಿ.






















- KALAVATI KITTA

14 Oct 2024, 07:34 pm

ಜೀವನದ ಮಾತು ✨

ಅರಿತು ಬಾಳುವುದಕ್ಕಿಂತ ಮರೆತು ಬಾಳುವುದನ್ನು ಕಲಿಯಬೇಕು..... ಯಾಕೆಂದರೆ ಇಲ್ಲಿ ಯಾರಿಗೆ ಯಾರು ಇಲ್ಲ.....✨




- Ashwini

12 Oct 2024, 07:51 pm

ಬಾಳು....!

ಎಂತಹ ಹೊಲಸು ನಿನ್ನ ಬಾಳು !
ನಿನ್ನಿಂದ ಮುಗ್ಧ ಮನಸುಗಳು ಹಾಳು !
ನೀ ಕಾಲಿಟ್ಟ ಕಡೆ ಹುಟ್ಟಲ್ಲ ಒಂದು ಕಾಳು !
ನಿನ್ನ ಮೋಸದ ಬದುಕಿಗೆ ಆ ದೇವರು ವಿರಾಮ ನಿಡುತ್ತಾನೆ ಸ್ವಲ್ಪ ತಾಳು.......!
ಕಾಪಾಡು ದೇವರೇ ಎಂದು ಬೇಡುವ ಸಮಯ ಬರುವುದು ನಿನಗೆ ಅದುವೆ ನೀ ಪಡುವ ಗೋಳು.....!

- ಚೆನ್ನ ನಾಯ್ಕ ಆರ್

11 Oct 2024, 01:11 pm

ತಾಯ್ತನವೇ ಒಂದು ಅದ್ಭುತ ಆನಂದ, ಏನೇ ನೋವಿದ್ದರು ಯಾವುದು ಲೆಕ್ಕಕ್ಕೆ ಬರುವುದಿಲ್ಲ, ನವಮಾಸದ ಕಾಯುವಿಕೆಯ ಪ್ರತಿ ಕ್ಷಣ, ಸಂತೋಷ, ರೋಮಾಂಚನ, ಆತಂಕ ಎಲ್ಲವನ್ನೂ ಬಚ್ಚಿಟ್ಟು, ಮಗು ಜನಿಸುವ ವೇಳೆ ಸಾವನ್ನ ಗೆದ್ದು ಆ ಮಗುವ ಮೊದಲ ಅಳುವ ಕೇಳಿ ತನ್ನೆಲ್ಲಾ ನೋವನ್ನು ಮರೆಯುವಳು, ಆ ಖುಷಿ ವರ್ಣಿಸಲು ಪದಗಳೇ ಸಾಲದು ಎನಿಸುತ್ತದೆ????
✍️ ರಂಜು

- ರಂಜಿತ ಭಾವನೆಗಳ ಸುಳಿಯಲ್ಲಿ

10 Oct 2024, 11:30 pm

ಇರುವನ್ನೊಬ್ಬ ಮೇಲೆ ಸರಿ ತಪ್ಪುಗಳ ಲೆಕ್ಕಾಚಾರ ಮಾಡುತ್ತಾ, ಅವನ ಜೀವನ ಚಕ್ರ ಆಟದಲ್ಲಿ ಮೇಲೆರಿದವರು ಕೆಳಗೆ ಬರಲೇಬೇಕು ಕೆಳಗಿದ್ದವರು ಮೇಲೆರಬೇಕು, ಅಸತ್ಯ, ನೀಚತನ ಅಳಿಯಬೇಕು, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಗೆಲ್ಲಬೇಕು, ಸಮಯ ಬರುವವರೆಗೆ ಕಾಯಬೇಕು✅?
✍️ರಂಜು

- ರಂಜಿತ ಭಾವನೆಗಳ ಸುಳಿಯಲ್ಲಿ

10 Oct 2024, 11:29 pm