Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಚ್ಚಲು ವೇದಾಂತ

ಪ್ರತಿ ದಿನವೂ ತನ್ನ ಜ್ಞಾನೋದಯದ ಪರದೆ ಸರಿಯುತ್ತಿದ್ದುದು ಬಚ್ಚಲು ಕೋಣೆಯಲ್ಲಿ.
ಪ್ರತಿ ಜೀವಿಗೂ ಬದುಕಿನ ತಿರುವಿನ ಕ್ಷಣಕ್ಷಣದ ಮಾರ್ಗದರ್ಶನ
ಜೀವನದುದ್ದಕ್ಕೂ ನಡೆಯುತ್ತಾ ಬಂದಿದೆ.
ತನ್ನ ಬದುಕಿನ ತಿರುವಿನ ಪ್ರತಿ ಕ್ಷಣಗಳೂ ಕೂಡ!
ಜಳಕ ತೀರಿಸುವಾಗ ನಡೆಯುತ್ತಿತ್ತು.
ಸಣ್ಣ ವೈರಾಣುವಿನ ದಾಳಿ,ಹಕ್ಕಿಗಳ ಚಿಲಿಪಿಲಿ.

































ಬರಹ: ಜ . ಪ್ರ

- ಜಯಪ್ರಕಾಶ್ ಆಕಾಶಭವನ

31 Mar 2025, 02:52 pm

ಕವನದ ಶೀರ್ಷಿಕೆ ಚಂದ್ರಮಾನ ಯುಗಾದಿ.


ದುಷ್ಟ ಚಿಂತನೆಗಳ ಕಳೆ ಭಸ್ಮವಾಗಿ,
ನವ ಕನಸುಗಳ ಹೊಳೆ ಮೈದೊಳೆಯಲ್ಲಿ ಹಸಿರಾಗಿ.

ಸಂಬಂಧ ಬೆಸೆಯುವ ಕೋಗಿಲೆ ಕೂಗಲಿ ಇಂಪಾಗಿ,
ಹಬ್ಬದ ಹೊನಲಲಿ ಸವಿಯುವ ಬನ್ನಿ ಬೀವು ಬೆಲ್ಲವ ಸೊಗಸಾಗಿ.

ಪ್ರಜೆಗಳ ಸಂಗಮ ಹರ್ಷದಿಂದ ಸ್ವಾಗತಿಸಿತು ದಶರಥ ನಂದನನ.

ಮಾವಿನ ತೋರಣದಂತೆ ಜೀವನವ ನಡೆಸೋಣ,
ಪಂಚಾಂಗ ತಿಳಿಯುತ್ತ ಸ್ಪೂರ್ತಿ ಪಥ ಹಿಡಿಯೋಣ.

ಚೈತ್ರದ ಚಿಪ್ಪುಡೆದು ಚಿಮ್ಮಿತು ಯುಗಾದಿ,
ಸಾಷ್ಟಾಂಗ ಸಂಪ್ರದಾಯಗಳ ಶುರುವಿಡುವ ಶುಭ ಕಾರ್ಯಕ್ಕೆ ಇದು ತಳಹದಿ.

ನೋಡಲು ಚಂದ ಮಕ್ಕಳಾಟದ ಚಿತ್ತಾರವ,
ಒಬ್ಬಟ್ಟಿನ ಔತಣವು ಸೂಚಿಸುವುದು ಸಂಭ್ರಮವ.
ಹೊಸ ವರ್ಷದ ಆರಂಭ ಚಂದ್ರಮಾನ ಯುಗಾದಿ,
ಮುತ್ತಿನ ಮಳೆ ಹನಿ ಮೈತ್ರಿಯೆ ಧರೆಗೆ ಸನ್ನಿಧಿ.

- nagamani Kanaka

30 Mar 2025, 08:03 pm

ಹುಚ್ಚು ಜನರ ನಡುವೆ ಜೀವನ

ಹುಚ್ಚು ಜನರ ನಡುವೆ ನಾನು ಹುಚ್ಚಾನಾಗಲ
ಅಥವಾ ಅವರಂತೆ ಬಣ್ಣ ಹಚ್ಚಿ ನಟಿಸಲಾ
ಈ ಹುಚ್ಚು ಜನರು ಬದುಕಲಿ ಹುಚ್ಚರಂತೆ,
ನನಗೆ ಬಾರದು ಬದುಕಲು ಅವರಂತೆ
ಬದುಕುವೆ ನಾನು ನನ್ನ ಮನ-ಇಚ್ಚೆಯಂತೆ.


~ ಅನುಷಾ. ರೈ

- ಅನುಷಾ.ರೈ

30 Mar 2025, 03:22 pm

ಅವಳದೇ ನೆನಪು.

"ಈ ಬಡಿಯುತ್ತಿರುವ ಬೀರೂಬಿಸಿಲಿನಲ್ಲಿ
ಅವಳ ಬರುವಿಕೆಗಾಗಿ ಕಾದು ಕುಳಿತಿರುವೆ ನಾನು
ಆದರೆ ಈ ಬಿಸಿಯಾದ ಶಖೆಯಲ್ಲಿ
ಅವಳ ನೆನಪು ಒಂತ್ತಾರ ಹಾಗೆ ಬಂದುಹೋದ
ತಂಪಾದ ಗಾಳಿಯಂತೆ".
- ?.?.ರಾಹುಲ್.

- ?.?.?????.

29 Mar 2025, 03:17 pm

ಜಾತ್ರೆ

ಬಾಲ್ಯದ ನೆನ್ನಪು ಕಂಡೆ ಜಾತ್ರೆಯಲ್ಲಿ...

ಅಲೊಂಕಡೆ ಕಣ್ಣುಗಳು ದಿವಸದ ಖರ್ಚಿಗಾಗಿ ಕಾದಿ ಕುತ್ತಿದರೆ ಇನೊಂದಕಡೆ ಸಂಭ್ರಮಿಸುತ್ತ ತನ್ನವರಿಗಾಗಿ ಖರೀದಿಸಿದ್ದು ಕಂಡೆ ಜಾತ್ರೆಯಲ್ಲಿ.

ಶ್ರೀಮಂತ ಮಕ್ಕಳು ಆಟಿಕೆಗಾಗಿ ಹಠ ಮಾಡಿದರೆ ಇನ್ನ ಒಂದಡೆ ಬಡವರ ಮಕ್ಕಳಿಗೆ ಕೆಲಸಕ್ಕೆ ಕುಡಸಿದನ್ನ ಕಂಡೆ ಜಾತ್ರೆಯಲ್ಲಿ.

ನೂರೆಂಟು ಭಾವಗಳು, ಮುಗ್ಧತೆ ಮನಸ್ಸುಗಳು, ಅಹಂಕಾರದ ಮನಸುಗಳು ಕಂಡೆ ಜಾತ್ರೆಯಲ್ಲಿ.

ಹೋದವರ್ಷ ಜೊತೆಗೆ ಇದ್ದವರ ಈ ವರ್ಷ ಜೊತೆಗೆ ಇಲ್ಲದವರನ್ನ ಕಂಡೆ ಜಾತ್ರೆಯಲ್ಲಿ.

ಜಾತ್ರೆದಲ್ಲಿ ಆಳವಾಗಿ ನೋಡಿದರೆ ಬಂಧನದ ಆಳ ತಿಳಿಯುತ್ತದೆ.

-ಅಂಬಿಕಾ ಕುಲಕರ್ಣಿ

- Ambika Kulkarni

27 Mar 2025, 07:32 am

ಜನ್ಮಾಂತರದ ನಂಟು

ನೀಲಿ ಆಕಾಶವು ಮೇಲಿಂದ ನೋಡುತ್ತಿದೆ
ಇಲ್ಲಿ ನನ್ನವರು ಯಾರೆಂದು.
ನೀಲಿ ಆಕಾದಲ್ಲಿ ಅಡಗಿ ಕೂತಿರುವ ನಕ್ಷತ್ರಗಳು
ಕಾಯುತ್ತಿವೆ ನಮ್ಮವರು ಯಾವಾಗ
ಬರುವರೆಂದು.
ಭೂಮಿಯ ಕೆಳಗೆ ಕಾದು ಕುಳಿತಿರುವ
ಗೆದ್ದಲು ಹುಳುವಿಗಂತ್ತು ಜನ್ಮಾಂತರದ(ನಂಟು)
ಹಸಿವು..
- ?.?.ರಾಹುಲ್.

- ?.?.?????.

26 Mar 2025, 04:28 pm

ಜೀವನ ಪಾಠ

ಸೋಲಿನ ಪಾಠ ಚಂದ 
ಹಸಿವಿನ ಊಟ ಚಂದ,
ಪ್ರೀತಿಯ ಕೋಪಚಂದ
 ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸಿದ್ರೆ 
ಬದುಕೇ ಚಂದ.



- Madiwalappa Madiwalar

25 Mar 2025, 10:30 pm

ಕನ್ನಡಮ್ಮ

ನನ್ನಯ ಕನ್ನಡ ಹೆಮ್ಮೆಯ ಕನ್ನಡ
ನನ್ನಯ ಬದುಕಿನ ಜೀವವು ಕನ್ನಡ ಬಡಿದೆಬ್ಬಿಸಿದಾಗ ನುಡಿವೆನು ಕನ್ನಡ
ನಲ್ಮೆಯ ಕನ್ನಡ ಮಮತೆಯ ಕನ್ನಡ.


ನಗುವಲ್ಲಿ ಕನ್ನಡ
ನಡೆಯಲಿ ಕನ್ನಡ
ನುಡಿಮುತ್ತುಗಳಲ್ಲಿ ಕನ್ನಡ
ಎನ್ನ ಮನವೆಲ್ಲಾ ಕನ್ನಡ
ಅದರ ಸೊಬಗನು ಬೆಳೆಸೋಣ.


ಮರವಾಗಿದೆ ಕನ್ನಡ
ನೆರಳಾಗಿದೆ ಕನ್ನಡ
ಫಲವಾಗಿದೆ ಕನ್ನಡ
ಬದುಕಾಗಿದೆ ಕನ್ನಡ
ರೇಷ್ಮೆಯಿಂದ ಅದನು ಹೊದಿಸೋಣ


ಕೆತ್ತನೆಯಲಿ ಕನ್ನಡ
ಬಿತ್ತನೆಯಲಿ ಕನ್ನಡ
ಇರುವಿಕೆಯಲಿ ಕನ್ನಡ
ಉಡುಗೆಯಲಿ ಕನ್ನಡ
ಕನ್ನಡದ ಬಾವುಟವ ಜಗದುದ್ದಕ್ಕೂ ಪಸರಿಸೋಣ ಮುಗಿಲೆತ್ತರಕ್ಕೆ ಕೊಂಡೊಯ್ಯೋಣ.

- ಮೇಘಾ ಬೆಳಧಡಿ

24 Mar 2025, 10:53 pm

ಒಲವಿನ ಕನ್ನಡ

ಓ ಮನವೇ
ನೀ ದುಡುಕದಿರು
ಪರರ ಭಾಷೆಗೆ
ಮನಸೋಲದಿರು


ನನ್ನಯ ತಾಯಿಯ
ಮಾನ ಪ್ರಾಣ ಹೋಗದಾಗೆ
ಕಾಪಾಡುತಿರು!
ಎನ್ನ ತಾಯಿಯ ಮಡಿಲು
ಬರಿದು ಮಾಡದಿರು!

ನನ್ನೊಲುಮೆಯ ನುಡಿಯನು ಅಳಿಸದಿರು
ಇರುವಿಕೆಯಲ್ಲಿ ಬದಲಾವಣೆ ತರದಿರು.
ಪರದೇಶದ ಉಡುಗೆಗೆ ನೀನೆಂದು
ಮಾರು ಹೋಗದಿರು.

ನನ್ನಯ ಒಲವೇ
ನಲ್ಮೆಯ ಗಿಣಿಯೇ
ಸುಂದರವಾಗಿಸೋಣ
ನನ್ನಯ ಕನ್ನಡ ಚಿನ್ನದ ಕನ್ನಡ
ಎಲ್ಲರು ಮೆಚ್ಚುವ ಸುಮಧುರ ಕನ್ನಡ.




- ಮೇಘಾ ಬೆಳಧಡಿ

24 Mar 2025, 10:45 pm

ಕೇಳು ಗೆಳೆಯ....

ಕೇಳು ಗೆಳೆಯ..........
ನಿನ್ನೆ ನೆರಳಿನ ಹೆಜ್ಜೆಗಳನ್ನು ನಾ......
ಪುಟ್ಟ ಮಗುವಿನಂತೆ ಹಿಂಬಾಲಿಸಬೇಕು.....
ಪುಟ್ಟ ಮಗು ಅಲ್ಲ ನಾನು.......
ಆದರೂ...............
ನಿನ್ನ ಮುಗ್ಧ ಮನದಲ್ಲಿ.........
ಅಡಗಿರುವ ಪುಟ್ಟ ಮಗುವ ಹುಡುಕಬೇಕು..........


*******************


ಹೇಳು ಗೆಳೆಯ...............
ನಿನ್ನ ನೆರಳಿನ ಹಾದಿಯಲ್ಲಿ..........
ಹಿಂಬಾಲಿಸಲು ಬಿಡುವೆಯಾ...........
ಈ ನನ್ನ ಪುಟ್ಟ ಹೃದಯವಾ....

- Invisible writter?








- vishmitha

23 Mar 2025, 06:06 pm