Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳಕಿನ ಹಬ್ಬ

ಬರುತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಅಬ್ಬ
ಪಟಾಕಿ ಸಿಡಿಸಬೇಕು ಯಾರಿಗೂ ಹಾನಿಯಾದ ನಂತರ ಬೇಕು
ಬರುತ್ತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ ಬರುತ್ತಿದೆ
ಸುರುಸುರು ಬತ್ತಿಯ ಹಚ್ಚಬೇಕು ಯಾರ ಬಟ್ಟೆಗೂ ಗೊತ್ತಾಗದಂತೆ ಇರಬೇಕು
ಬರುತ್ತಿದೆ ಬೆಳಗ್ಗಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ಮಂಡಾಳ ಬಾಣವ ಹಚ್ಚಬೇಕು ನಾವು ದೂರ ಸರಿಯಬೇಕು
ಬರುತ್ತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ರಾಕೆಟ್ ಬಿಡಬೇಕು ನಾವು ಒಳ್ಳೆಯ ಜಾಗ ನೋಡಿಬಿಡಬೇಕು
ಬರುತ್ತಿದೆ ಬೆಳಗಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ಅಟಮ್ ಬಾಂಬ್ ಹಚ್ಚಬೇಕು ನಾವು
ಹಿರಿಯರೋಡನೆ ಹಚ್ಚಬೇಕು
ಬರುತ್ತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ಹಚ್ಚಬೇಕು ಹೆಣ್ಣು ಮಕ್ಕಳು ಸೇರಿ ದೀಪವ
ಹಚ್ಚಬೇಕು ಬೆಳಕಿನ ದೀಪವ ಹಚ್ಚಬೇಕು ನಾವು
ನಮ್ಮ ಬಾಳು ಬೆಳಗಬೇಕಾದರೆ ಚೌಕಿಯಿಂದ ಇರಬೇಕು
ಅಂದಾಗ ಬೆಳಕಿನ ಹಬ್ಬಕ್ಕೆ ಕಳೆಬರುವುದು

- bheemaraya badiyal

23 Oct 2024, 01:02 pm

ಅವಳು......???

ಮಂಜುಗಡ್ಡೆಯಂತೆ ಇರುವಳೋ ......
ಮಾನಸ ಗಂಗೆಯಂತೆ ಇರುವಳೂ .....
ಕಾಣೆ
ಕನಸಿನಲ್ಲಿ ಬಂದು ಮರೆಯಾದವಳು
ಎಲ್ಲಿ ಹೊದಳು ಅನುವಷ್ಟರಲ್ಲಿ
ಬೇರೆ ಮನೆಗೆ ದೀಪ ಬೆಳಗಿಸಲು ಹೊರಟವಳು......
ನನ್ನವಳು?.....

- Dachu ಕವಿ

22 Oct 2024, 02:51 am

ಮನಸ್ಸಿನ ನೋವು

ಮುಗಿದು ಹೋದ ಅಧ್ಯಯವಾದೆ ನೀನು,
ಬರುವೆ ಎಂದೂ ಹೇಗೆ ಕಾಯಲಿ ನಾ.
ಸೇರಲೆಂದು ಆಸೆ ಇದೆ, ಆದರೆ ದಾರಿ
ಕಾಣೆಯಾಗಿದೆ ಹೇಗೆ ಸಾಗಲಿ ನಾ.
ನೀ ಬಂದರೂ ಸಿಗುವೆ ಎಂದು ಹೇಗೆ ನಂಬಲಿ ನಾ

ಗಂಗ......


- GANESHA G S

22 Oct 2024, 12:24 am

ಮಾತನಾಡುವ ಅಂಬಲ

ಸಾಗುತ್ತಿದೆ ದಿನಗಳು ಅವಳ ನೆನಪಿನಲ್ಲೇ
ಕಾಯುತ್ತಿದೆ ಮನಸ್ಸು ಅವಳ ಗುನುಗಿನಲ್ಲಿ
ಬರವುಳೆ ಆ ದಿನಗಳನ್ನು ಮತ್ತೆ ತರುವಳೇ

ಗಂಗ......

- GANESHA G S

22 Oct 2024, 12:22 am

ಪುಣ್ಯ ಕಟ್ಕೊಳಿ ಸಾರಾಯಿ ಅಂಗಡಿ ಅಡ್ರೆಸ್ಸು...

ಬಚ್ಚಲ್ಮನೆ ಆಗಿದೆ ಬೇವರ್ಸಿ ಮನಸ್ಸು
ರಾತ್ರಿಯೆಲ್ಲಾ ಒದ್ದಾಡಿದ್ರು ಬೀಳಬಾರದ
ಒಂದು ಪೋಲಿ ಕನಸು,
ಈ ಲೇವೆಲ್ಗೆ ಹಾಳಗೋಕೆ ಕಾರಣ
ಅದುನಿಕ ಹೆಂಗಸ್ರು,
ಎಸ್ಟು ದುಡಿದ್ರು ತುಂಬಿಲ್ಲ
ಕಿತ್ತೋದ ಪರ್ಸು ಯಾರಾದ್ರೂ ತೋರ್ಸಿ...
ಪುಣ್ಯ ಕಟ್ಕೊಳಿ ಸಾರಾಯಿ ಅಂಗಡಿ
ಅಡ್ರೆಸ್ಸು....
ಎಮ್.ಎಸ್.ಭೋವಿ...✍️
.
.

- mani_s_bhovi

21 Oct 2024, 12:30 pm

ಹುನ್ನಬೇಕು ಅನ್ನ
ತಿನ್ನಲು ಬೇಕು ರೊಟ್ಟಿ
ರೊಟ್ಟಿಯನ್ನ ತಿನ್ನಲು ಬೇಕು ಕೆಲಸ
ಕೆಲಸ ಸಿಕ್ಕ ಮೇಲೆ ಬೇಕು ಹೆಂಡತಿ
ಹೆಂಡತಿಯಾದ ಮೇಲೆ ಬೇಕು ಮಕ್ಕಳು
ಮಕ್ಕಳು ಆದ ಮೇಲೆ ಬೇಕು ಅತಿಯಾದ ದುಡ್ಡು
ದುಡ್ಡು ಬಂದ ಮೇಲೆ ಬೇಕು ಗಾಡಿ
ಆಸೆಗೆ ಸ್ಮಿತಿಯೇ ಇಲ್ಲ ನಮ್ಮ ಬದುಕಿನಲ್ಲಿ

ಗಾಡಿ ಬಂದ ಮೇಲೆ ಬೇಕು ಕಾರು
ಕಾರು ಬಂದ ಮೇಲೆ ಬೇಕು ಮನೆ

- bheemaraya badiyal

21 Oct 2024, 12:18 pm

ಜೀವನ

ಜೀವನ ಒಂದು ರಣರಂಗ
ಸಂಸಾರ ಒಂದು ಯುದ್ಧರಂಗ
ಬದುಕು ಒಂದು ಚದುರಂಗ
ಈ ಆಟದಲ್ಲಿ ಗೆದ್ದು ಜೀವಿಸಬೇಕು ನಾವು
ಇನ್ನೊಬ್ಬರಿಗೆ ಮಾದರಿಯಾಗಬೇಕು ನಾವು
ರಣರಂಗದ ಆಟದಲ್ಲಿ: ತಾಳ್ಮೆಯಿಂದ ಇರಬೇಕು
ಯುದ್ಧ ರಂಗದ ಆಟದಲ್ಲಿ : ನಗುವಿನಿಂದ ಗೆಲ್ಲಬೇಕು
ಚದುರಂಗದ ಆಟದಲ್ಲಿ : ಮೌನದಿಂದಿರಬೇಕು
ಭೀಮರಾಯ ಬಾಡಿಯಲ್

- bheemaraya badiyal

21 Oct 2024, 09:25 am

ಅವಳು...❤️


ಅವಳು..
ನಗುಮೊಗದ ಬಾಲೆ
ಮಗು ಮನಸಿನ ಹೊಂಬಾಳೆ
ಜಗತ್ತಿನ ತೋರಿಕೆಗಷ್ಟೆ ಆ ನಗು ಆಗಿತ್ತೆ ಹೊರತು.. ಅವಳ ಜೀವನಕ್ಕಲ್ಲ...
ಎಲ್ಲಾ ಇದ್ದು ಯಾರು ಇರದ ಜೀವನ
ಅವಳದು...?️
ವಿಷಯ ಅವಳ ಮನಸಿನದು...
ಆಕೆಯ ಕಣ್ಣೀರ ಅರಿತವರೆಷ್ಟೋ ನಾ ಕಾಣೆ... ಆದರೆ ಅವಳ ಕೋಪವ ಕಠುರವಾಗಿ
ದೂರಿದರಲ್ಲೇನೆ....
ಸೂಕ್ಷ್ಮ ಮನಸು ಅವಳದು... ಅದು ಅವಳ ತಪ್ಪ...❤️
ಎಷ್ಟಾದರೂ ಹೆಣ್ಣು ಮನಸದು... ನೋಂದೊಡನೆ ಕಣ್ಣಿರೇ ತೆಪ್ಪ.. ಕಂಡವರ ಕಣ್ಣಿಗೆ ಹಟವಾದರೂ.. ಅದು ಅವಳ ನೋವಿನ ಪ್ರತಿರೂಪವಾಗಿತ್ತು... ಪ್ರಪಂಚವೇ ಕಣ್ಣೆರೆದು ನೋಡುವುದರೊಳಗೆ... ಅವಳ ಮನಸು ಚಿದ್ರವಾಗಿತ್ತು...✨??

- Bhimashankar Nayak

19 Oct 2024, 08:52 am

ದಿನಕ್ಕೊಂದು ಶುಭನುಡಿ

?☀️?
???

ಉದ್ದೇಶ ಸರಿಯಾಗಿದ್ದರೆ
ಮಾಡುವ ಕೆಲಸವು ಯಶಸ್ವಿಯಾಗುತ್ತದೆ

- ನೈದಿಲೆ ?

18 Oct 2024, 12:28 pm

ಹೇಳಿದರೆ ಕೇಳುವೆಯಾ ಕವನ...

ನಿನ್ನ ನೋಡಿ ಹೇಳಬೇಕೆನ್ನಿಸುತಿದೆ ನನಗೆ ಕವನ..
ಒಮ್ಮೆ ನನ್ನ ಕವನವ ಕೇಳಿ ನೋಡು
ಹೋಗುವೆ ನೀ ಹೌಹಾರಿ..
ಮತ್ತೆ ಮತ್ತೆ ಕೇಳಬೇನ್ನುವ ಆಸೆ ಹುಟ್ಟುವುದು
ನಿನಗೆ ಪ್ರತಿಬಾರಿ...
ಹೇಳಿದರೆ ಕೇಳುವೆಯಾ ಆ ಕವನವ
ಒಂದೇ ಒಂದು ಸಾರಿ...
ಎಮ್.ಎಸ್.ಭೋವಿ...✍️
.
.
.

- mani_s_bhovi

17 Oct 2024, 10:02 pm