ಹುಟ್ಟಿದೆ ನೀನು ಜಗವ ನೋಡಲು
ಜಗಕೆ ನಿನ್ನ ಪಾತ್ರ ತಿಳಿಸಲು
ತೊದಲ ನುಡಿಯನು ಕಲಿತು
ಅಂಬೆಗಾಲನಿಟ್ಟು ನಡೆದಾಡಿ
ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು
ಭುವಿಯ ತುಂಬಾ ಓಡಾಡಿ
ಕುಣಿದು ಕುಪ್ಪಳಿಸಿ ನಲಿದಾಡುವೆ
ಜಿಂಕೆಯಂತೆ ಓಡೋಡುವೆ
ನಿನ್ನ ಪಾತ್ರವ ಜಗಕೆ ತಿಳಿಯಲು ಯತ್ನಿಸುವೆ
ಹಮ್ಮು ಬಿಮ್ಮುಗಳ ತೋರಿ
ಅಹಂಕಾರದಿ ನೀ ಮೆರೆದಾಡುವೆ
ಪ್ರೀತಿ ಪ್ರೇಮ ನೀ ಬೆಳೆಸುವೆ
ಕರುಣೆ ತೋರಿ ಕೈಯಿಡಿಯುವೆ
ಏನೂ ಮಾಡಿದರೇನು
ಏನೂ ಬಿಟ್ಟರೇನು
ಏನೇನು ಮಾಡಿದರು
ನಿನ್ನ ಪಾತ್ರವ ನೀ ಮುಗಿಸಿಕೊಂಡು
ನೀ ಹೊರಡಬೇಕು ನಿನ್ನ ದೇಹವ ಬಿಟ್ಟು
ಈ ನಶ್ವರದ ದೇಹ ಭೌತಿಕತೆ ತೊರೆದು
ಚಿರಸ್ಥಾಯಿಯಂತ ಪಾತ್ರವ ನೀ ಮುಗಿಸಬೇಕು
- Girishachara S
06 Nov 2024, 07:20 am
ಬಾಳು ಒಂದು ಸುಂದರ ಕವನ
ಬೇಕು ಒಂದು ವರ ಜೊತೆ ನಮನ
ನೀ ಬಂದ ಮೇಲೆ ನನ್ನ ಬಾಳ ಸಂಪೂರ್ಣ
ಅದಕ್ಕೆ ನಿನ್ ತಾನೇ ಕಾರಣ
||ಕೋಟ್ಯಂತರ ಆಗಂತುಕರ ದರ್ಪದ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿದರೂ ತನ್ನವರಂತೆ ನೋಡುವ ತಾಯಿ ಭಾಷೆ|
ಅನ್ಯಭಾಷಿಕರಿಗೂ ಬೇಲಿಯಾಗದೇ ಸಹನೆಯ ಸಂಬಂಧವಾಗುವ,ನನ್ನ ಭಾಷೆ|
ನೋಡಲು ಕಣ್ಮನದ ತೃಷೆಯನಿಳಿಸಿ ಮನಸೂರೆಗೊಳಿಸುವ, ನನ್ನ ಭಾಷೆ|
ನೆನೆಯಲು ರುಧಿರದ ಕಣಗಳಲ್ಲೂ ಕರಗದ ಆತ್ಮಸ್ಥೈರ್ಯವನ್ನು ತುಂಬುವ, ನನ್ನ ಭಾಷೆ|
ಬರೆಯಲು ಸ್ವಚ್ಚಂದ, ಅಕುಂಠಿತ,ಅವಿಸ್ಮರಣೀಯ ದೃಶ್ಯಕಾವ್ಯ ನನ್ನ ಭಾಷೆ|
ಆರಾಧಿಸುವ ಕೋಟಿ ಮನಗಳಲಿ ಆಚಂದ್ರಾರ್ಕವಾಗಿ ನಿಲ್ಲುವ ನನ್ನ ಭಾಷೆ|
ಉತ್ಕೃಷ್ಟ ಸಾಂಸ್ಕೃತಿಕ, ಚರಿತ್ರಾತ್ಮಕ,ಚಾರಿತ್ರ್ಯ ಬದ್ಧ, ಕಲಾತ್ಮಕ ಪರಂಪರೆಯ ಸೆಲೆ,ನನ್ನ ಭಾಷೆ||
ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನೂ ದೊಡ್ಡದಲ್ವಾ?
ನಿಜಾನಾ? ತಾಯಿ ದೇವತೇನಾ?
ಮಗುವಿನ ದುಃಖ ಅವಳಿಗೆ ಮಾತ್ರ ತಿಳಿಯುತ್ತಾ?
ಹಂಗಾದ್ರೆ ನಾನೇ ನತದೃಷ್ಟೇನಾ?
ಇಲ್ಲಾ ತಪ್ಪಾದ ಗರ್ಭದಲ್ಲಿ ಬೆಳೆದು ಹೊರಗಿನ ಪ್ರಪಂಚಕ್ಕೆ ಕಾಲಿಟ್ಟಿದೀನ?
ಸತ್ಯ ಮರೆಮಾಚಿ ಕುಳಿತಿದೆಯಾ?
ನನ್ನ ಕಣ್ಣಿಗೆ ಪೊರೆ ಆವರಿಸಿದೆಯಾ?
ಗೊತ್ತಿಲ್ಲ! ಹುಡುಕಿದರೂ ಸಿಗುವುದಿಲ್ಲ!!!
ನಿಜಾನಾ?