ಭಾವಗಳನ್ನ ತುಂಬಿದ ಮನಸ್ಸು
ಭಾವಗಳನ್ನ ವ್ಯಕ್ತಪಡಿಸಿದ ಮನಸ್ಸು.
ಯಾರ ಮನಸ್ಸು ಕಲ್ಲಲ್ಲ
ಯಾರ ಮನಸ್ಸು ಹೂವಲ್ಲ.
ಮನಸ್ಸಿಗೂ ಬೆಲೆ ಇದೆ
ಕನಸಿಗೂ ಬೆಲೆ ಇದೆ.
ಮನಸ್ಸಿಗೆ ಒಳ್ಳೆದು, ಕೆಟ್ಟದು ಯಾವುದು ಇಲ್ಲ
ಮನಸ್ಸಿಗೆ ನಾಟಕ, ನಟನೆ ಯಾವುದು ಇಲ್ಲ.
ನಿನ್ನ ಕಂಡಾಗ ನಾ
ಆದೆ ಅಪಭ್ರಂಶ
ನನ್ನ ಮನಸ್ಸು ಅಪೇತ
ನನ್ನ ದೇಹ ಸೌಂದರ್ಯಕ್ಕೆ ನನಗಿಲ್ಲ ಅಭಿಲಾಷೆ
ಕೇವಲ ನಿನ್ನ ಪ್ರೀತಿಯ ಪಡೆಯುವಸೆ
ನನ್ನ ಪ್ರೀತಿ ಅಮೇಯವಾದ ಉಡುಗೊರೆ
ನೀ ಮಾಡಿದೆ ಒಂದು ಕ್ಷಣ ನನ್ನ ಮನಸೂರೆ ?
ಫೋನ್ ನಿನ್ನ ಮುಟ್ಟಲು ನನಗೆ ಕಾರಣವಿಲ್ಲ
ಆದರೆ ಅವಳನ್ನು ಸ್ಪರ್ಶಸಲು ಮನಸು ಕಾರಣ ಹುಡಿಕಿತಲ್ಲ
ಊರ್ವಶಿಯನ್ನೇ ಮೀರಿಸುವಂತ ಅಂದವಂತೆ ಆಕೆ
ಸನಿಹಕೆ ಬಂದಾಗ ಅವಳು ಹೃದಯ ಬಡಿತ ಜೋರಾಯ್ತು ಯಾಕೆ..
ದಿನಬೆಳಗಾದರೆ ಸೂರ್ಯನದೆ ಭೂಮಿಗೆ ಆರತಿ
ನನ್ನ ಮನಸ್ಸನ್ನು ಕ್ಷಣಕ್ಕೆ ಸೆಳೆದು ಬಿಟ್ಟಳು ಅ ರತಿ
ಇವೆಲ್ಲ ಮಾತಾಷ್ಟೇ
ನಿಜವಾಗಿಯೂ ಪೂಜಿಸುತ್ತಿರುವೆ ಅವಳನ್ನು ಅಂದು ಕೊಂಡು ದೇವತೆ.....
ಎಷ್ಟು ವಿಚಿತ್ರ ಅಲ್ವಾ
ಹೆಣ್ಣು ಹುಟ್ಟಿದ ಮೇಲೆ ಅಮ್ಮ ಅವಳಿಗೆ ಏನ್ ಇಷ್ಟಾನೋ ಅದನ್ನೇ ಮಾಡ್ತಾ ಹೋಗ್ತಾರೆ,, ಅದೇ ಮದ್ವೆ ಆದ್ಮೇಲೆ ಆಕೆಯ ಗಂಡನ ಮನೆಯವರಿಗೆ ಏನ್ ಇಷ್ಟ ಅಂತ ತಿಳ್ಕೊಂಡು ಅದರಂತೆ ಇರುವ ಪ್ರಯತ್ನದಲ್ಲಿ ಅವ್ಳಿಗೆ ಏನ್ ಇಷ್ಟ ಅನ್ನೋದನ್ನೇ ಮರ್ತು ಬಿಡ್ತಾಳೆ?
||ಯಾರು ನೀನು?
ಸುಮ್ಮನೇ ಕನಸಲ್ಲಿ ಬಂದ ಭ್ರಮೆಯೋ,
ಸಿಗುವೆನೆಂದು ಕುರುಹು ಬಿಟ್ಟ ರಮೆಯೋ..
ದ್ವಂದ್ವ ಸ್ಥಿತಿ ನನಗೆ...
ಯೋಚಿಸಿದಷ್ಟೂ ತುಡಿತ ಮನಕೆ
ಮಿಡಿತ ತಪ್ಪಿ ಜಿಗಿದಂತೆ ನಭಕೆ
ಹೇಗೆ ಬಂಧಿಯಾದೆನೋ ನಾ ನಿನ್ನುಸಿರ ಸೆರೆಮನೆಗೆ
ನಿರ್ದೋಷಿ ಮಾಡುವೆಯೇನೋ,ಹೆದರಿಕೆ ನನಗೆ
ಸೇರಲು ನಾವು ಬೆರೆತಂತೆ ಹಾಲು ಜೇನಿಗೆ
ಕೊನೆಗೂ ಕೊನೆಯಾಯ್ತು ಪ್ರೀತಿ ಬೇಸಿಗೆ..
ಅಬ್ಬಾ!!
ಹೇಗೋ ದಡ ಮುಟ್ಟಿದೆನೆಂಬ ತೃಪ್ತಿ ಕಾಣುತಿರೆ....
ದೂರದಿ ಕೇಳಿಸಿತು "ಹೊತ್ತಾಯ್ತು ಎದ್ದೇಳೋ".....
ನನ್ನ ತಾಯಿಯ ಕರೆ||
ಜೀವನದಲ್ಲಿ ಅರಿವಿರಬೇಕು ಮರಿವು ರಬಾರದು
ಮರೆತರೆ ಕೊರಗಬಾರದು
ಕೊರಗಿ ಚಿಂತೆ ಮಾಡಬಾರದು
ಚಿಂತೆ ಮಾಡಿ ಇನ್ನೊಬ್ಬರ ಮೇಲೆ ಹಾಕಬಾರದು
ಹಾಕುವುದಕ್ಕೆ ಮುಂಚೆ ಅರಿವಿರಬೇಕು
ನಮಗೆ ತಾಳ್ಮೆ ಇರಬೇಕು
ಮಾತಾಡಿದರೆ ಯಾರಿಗೂ
ನೋವಾಗದಂತಿರಬೇಕು
ಮಾತಾಡಿದರೆ ಮುತ್ತಿನಂತಿರಬೇಕು
ಅರಿವೇ ಮೊದಲ ಗುರುವಾಗಬೇಕು
ಅರಿತವನೇ ಬಾಳಿಯನು
ಅರಿಯಬೇಕು ನಾವು ತಿಳಿಯಬೇಕು