ತಾಯಿಗೆ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ನಿನ್ನ ಸ್ವಾರ್ಥಗೋಸ್ಕರ ತಾಯಿಗೆ ತ್ರಾಸ ಕೊಟ್ಟು ಜಾಲಿ ಆಗಿ ಇರಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿಗೆ ಪ್ರೀತಿ ತೋರಿಸ ಬದಲು ತ್ರಾಸ ಕೊಟ್ಟರೆ ಆ ಜೀವಿ ನೊಂದಬಿಡುತ್ತದೆ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ಅಮ್ಮ ಅಂತ ಪ್ರೀತಿ ತೋರಿಸು ತಾಯಿಗೆ ಕಷ್ಟ ಸುಖ ಕೇಳು ಅದರ ಬದಲಿಗೆ ಕಿರಿ ಕಿರಿ ಮಾಡಬೇಡ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿ ತೀರಿದರೇ ಯಾವ ಹಳ್ಳಿ ನಾಯಿಯು ಕೇಳಲ್ಲ ನಿನಗೆ ತಾಯಿ ಇರಷ್ಟ ದಿವಸ ಚೆನ್ನಾಗಿ ನೋಡ್ಕೋ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
ತಾಯಿಗೆ ಜೋರಾಗಿ ಬಾಯಿ ಬಂದಾಗೇ ಬೈಯಬೇಡ
ಯಾರು ಜೊತಿಗೆ ಇರದೇ ತಾಯಿ ನಿನ್ನ ಜೊತೆ ಇದ್ದಳು ಅಂತ ಮರೀಬೇಡ ಮಗ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
ಪ್ರೀತಿ ಮಾಡು ಅನಲಿಲ್ಲ ಬಾಯಿಬಿಚ್ಚಿ
ನನ್ನ ನಡವಳಿಕೆಯಲ್ಲಿ, ಕಣ್ಣಿಂದ ತೋರಿಸಿದೆ ನನ್ನ ಪ್ರೀತಿ....
ಪ್ರೀತಿ ಅರ್ಥವಾದರೂ ಆಗದಂತೆ ನಟಿಸಿ
ನನ್ನ ಮರೀತಿಯಲ್ಲ...
ಕಣ್ಮುಚ್ಚಿದರೆ ಸಾಕು ಕಣ್ಣಲ್ಲಿ ಬರುವೆ ನೀ...
ಈ ತರ ಎಂದು ಅರಿಯದ ಭಾವನೆಗಳು ನನ್ನಲ್ಲಿ ತುಂಬಿ ಬರುತ್ತಿವೆ....
ನಾನೆ ನನ್ನ ಅರಿಯಷ್ಟು ನಿನ್ನ ಅರಿತಿರುವೆ ಎಂದು ಜಂಬ ಜಾಸ್ತಿ...
ಈಗೀಗ ನೀನೆಂಬ ಕನಸು ಹೆಚ್ಚಾಗಿದೆ.
ಆಲದ ಮರದ ಕೊಂಬೆ ಕೊಂಬೆ ಬೇರು ಬೇರು
ಕೊಳೆತಿದೆ ಭ್ರಷ್ಟರ ಹುಳ ಹಿಡಿದು
ಎಲೆಗಳು ಕೊಳೆತು ನಾರುತ್ತಿದೆ
ಕಶ್ಮಲ ಗಾಳಿ ಬೀಸಿದೆ
ಜೀವಕಿಲ್ಲ ಪರಿಶುದ್ಧ ನಿರ್ಮಲ ಗಾಳಿ
ಪರಿಹಾರವಿಲ್ಲದ ಬದುಕು ಬರೀ ಕೊಳಕು
ಗೊತ್ತೇ ನಿಮಗೆ ಚಾಮಯ್ಯ ಮೇಷ್ಟ್ರು
ಕರಿನಾಗರ ರಾಮಾಚಾರಿಯ ತಿದ್ದಿದವರು
ಆಗಿ ಮೇಷ್ಟ್ರೇ middle school ಟೀಚರ್
ಭ್ರಷ್ಟರ ಮಕ್ಕಳಿಗೆ ಆಗಿ ಚಾಮಯ್ಯ
ತಯಾರಿಸಿ ಅವರನ್ನು ಭ್ರಷ್ಟ ತಂದೆ ಬಗ್ಗಿಸಿ
ಹರಡ ದಿರಲಿ ಭ್ರಷ್ಟ ಚಾಳಿ ಮಗನ ಪಾತ್ರದಲ್ಲಿ
ಉರುಳಿಸಿ ಕೊಳೆತ ಕೊಂಬೆ ಕೊಂಬೆ ಧರೆಗೆ
ಮತ್ತೆ ಹೊಸ ಬಿ ಳಲು ಬಿಟ್ಟಿರಿ ಉಳಿಸಿರಿ
ಭಾರತದ ಹಸಿರು ಆಲದ ಮರ ವಿಶ್ವಶಾಂತಿ
ವಯಸ್ಸಾದಂತೆ ಇರಬೇಕು ಪ್ರೀತಿಸಾರ
ಸಂಸಾರದ ಬಾಳಿನಲಿ ಅದೇ ಸಂಸ್ಕಾರ
ಮಕ್ಕಳು,ಮೊಮ್ಮಕ್ಕಳು ಎಲ್ಲರಿಗೂ ಹಿರಿಯ
ಇರಲಿ ಶಾಶ್ವತ ಮನಸಿನಲಿ ಅತಿ ಕಿರಿಯ
ಮಕ್ಕಳಾಗಿ ಹಣ್ಣೆಲೆಯಾದರು ಹಸಿರು ಹಸಿರು
ಊಟ ಬಟ್ಟೆಯಲ್ಲಿ ತಂಪು ಹುರುಪು
ನೋಟದಲಿ ಸಂತಸ ಹೊಳಪು ಕಣ್ಣು
ಆಯ ತಪ್ಪಿದರೂ ಬೀಳದ ಕಠಿಣ ತೆವಲು
ಬೇಕಿಲ್ಲ ಊರುಗೋಲು ಗಟ್ಟಿ ಮುಟ್ಟಿ ಕಾಲು
ಇರಲಿ ಬಣ್ಣ ಹಾಕುವ ಚಪಲ ನೆರೆತ ಕೂದಲಿಗೆ
ಹೊಸ ಹಲ್ಲು ಇರಲಿ ಬೊಚ್ಚು ಬಾಯಿಯಲ್ಲಿ
ಒಯ್ ಸುಂದರಿ...
ನಾನು ರೊಮ್ಯಾಂಟಿಕ್ ಹಾ !
ಅಥಾವ ಇಲ್ಲ ಅಂತ ಪೋನ್ ಮಾಡಿ,
ಮೆಸೇಜ್ ಮಾಡಿ ಎಲ್ಲ ಕೇಳಬೇಡ ಹುಡ್ಗಿ..
ಸಂಶಯ ಇದ್ರೆ, ಸಮಾಧಾನವಾಗಿ
ಸೀರೆಯುಟ್ಟು ಸಂಜೆಯ ಹೊತ್ತಿಗೆ,
ಒಂದು ಸವಿ ಮುತ್ತಿನೊಂದಿಗೆ,
ಸಹಕಾರವ ಕೊಟ್ಟು ನನ್ನೊಮ್ಮೆ ಭೇಟಿಯಾಗು..,
ಆ ಕ್ಷಣದಿಂದಲೇ ಆ ಪದದ ಸ್ವರ್ಗವನ್ನೆ ಪರಿಚಯ ಮಾಡ್ತಿನಿ...
ಎಮ್.ಎಸ್.ಭೋವಿ...✍️
ಕೊಡೆಗೆ ಮಳೆಯನ್ನು ನಿಲ್ಲಿಸಲು ಸಾದ್ಯವಿಲ್ಲ ಆದರೆ ಮಳೆಯಲ್ಲಿ ನಿಲ್ಲುವ ಶಕ್ತಿಯನ್ನು ನಮಗೆ ಕೊಡುತ್ತದೆ. ಹಾಗೆಯೇ ಆತ್ಮವಿಶ್ವಾಸ ನಮಗೆ ಜಯವನ್ನು ತಂದು ಕೊಡದೆ ಇದ್ದರು ಕಷ್ಟ ಎದುರಿಸಲು ಶಕ್ತಿ ನೀಡುತ್ತದೆ.
ಪ್ರೇಮ ನೀ ಆಕಸ್ಮಿಕ ಪರಿಚಯ ನೀನು
ದೇವಲೋಕ ಕನ್ನೆಯ ಹೋಲುವ ರೂಪ ನಿನ್ನದು
ಅಪ್ಸರೆಯ ಸೌಮ್ಯತೆ ನಿನ್ನ ನಗು ನಿನ್ನದು
ನಿನ್ನ ವಯ್ಯಾರವ ಕಂಡು ವರುಣ ಧರೆಗಿಳಿದನು
ನಿನ್ನ ಅಂದ ಕಂಡು ರವಿ ಮಂಕಾದನು
ಚಂದಿರ ನಾಚಿ ನೀರಾಗಿ ಸೋತುಹೋದನು
ನಿನ್ನ ಕಣ್ಣಿನ ಕಾಡಿಗೆಯ ಕಂಡ ಇಂದ್ರ ತನ್ನ ಪಟ್ಟವನ್ನು ಕೆಳಗಿಟ್ಟ
ನಿನ್ನ ಸೌಂದರ್ಯ ಕಂಡು ಪಟ್ಟವನ್ನು ನಿನ್ನ ಸೌಂದರ್ಯಕೆ ಅಡವಿಟ್ಟು ಬಿಟ್ಟ
ಅಪರೂಪದ ರೂಪಾಸಿ ದೇವಲೋಕದ ಸುಂದರಿ ಇಂದ್ರನನ್ನೇ ಗೆದ್ದವಳು ಅವಳೇ ಪ್ರೇಮ
ನಿನ್ನ ಸೌಂದರ್ಯಕ್ಕೆ ಹೂವು ಕೂಡ ನಾಚುತ್ತೆ
ನಿನ್ನ ಮುಖದ ಕಾಂತಿಗೆ ಚಂದಿರ ಕಾಣೆಯಾದ
ನಿನ್ನ ನಡಿಗೆಯ ಕಂಡ ಮೋಡ
ನಿನ್ನ ವಯ್ಯರದ ನಡಿಗೆ ತುಂಬಾ ಮಳೆ ತರಿಸಿದ
ದೇವ ಲೋಕದ ಅಪ್ಸರೆಯ ರೂಪ
ರಂಭೆ ಊರ್ವಶಿ ಮೇನಕೆ ಯರು ಕೋಪ ಗೊಳ್ಳು ವಂತ ಸೌಂದರ್ಯ ಅವಳದು
ಮಲ್ಲಿಗೆ ಹೂ ನಾಚುವ ಮೂಕವು
ಗುಳಿ ಕೆನ್ನೆಯ ಮೊಗದವಳು
ದೇವಲೋಕದ ಕನ್ಯೆ
ಬಂದು ಸೇರು ನೀನೊಮ್ಮೆ
ಅಪರೂಪದ ರೂಪಾಸಿ ದೇವಲೋಕದ ಸುಂದರಿ ಇಂದ್ರನನ್ನೇ ಗೆದ್ದವಳು ಅವಳೇ ಪ್ರೇಮ