ನಿನ್ನಿಂದಲೇ ನಿನ್ನಿಂದಲೇ
ಎಂದು ನೀನು ಹಾಡಿರುವೆ..
ನಿನ್ನ ಹಾಡು ಕೇಳುತ್ತಾ ಕೇಳುತ್ತಾ
ನನ್ನ ಮನಸ್ಸು ನಿನಗೆ ಕೊಟ್ಟಿರುವೆ...
ಆ ನಿನ್ನ ಕಣ್ಣುಗಳ ನೋಟದಲ್ಲಿ
ಕಾಣದ ಸೆಳೆತ ಒಂದಿದೆ..
ಆ ಸೆಳೆತದಿಂದ ಒಲವು
ಶುರುವಾಗಿದ್ದು ನಿನ್ನಿಂದಲೇ...
ಬೇಕಂತೆಲೇ ಹೃದಯವು
ಜಪಿಸಿದೆ ನಿನ್ನನ್ನೇ..
ನಿನ್ನ ನಗುವ ಕಂಡು
ಮರೆತು ಹೋದೆ ನಾನು ನನ್ನನೇ...
ಎಮ್.ಎಸ್.ಭೋವಿ...✍️
ನಾ ಕಂಡೆ ಕನಸ ಬಹು ವರುಷದ ಹಿಂದೆ ಇಧ್ಹಾ ಜೊತೆಗೇ ಓರ್ವ ಕನಸಿನ ಕಾವಲುಗಾರ ಕಾಲಕೆ ಮಾಯ ಆದನೋ ಅವ ಯೆನ್ನ ಕನಸ ತನ್ನ ಕನಸೆಂದು ತಿಳಿಸಿ ಓ ಮಾಯೆ ಸಫಲ ಆಗಿಸುವೆ ನಿನ್ನ ಕನಸ ಮರದ ನೆರಳಲಿ ಕುಳಿತು ರಾಜಕುಮಾರನ ಒಡನೆ?
ರಕ್ತ ಸಂಬಂಧದ ನುಲಿನಲಿ ಸಿಲುಕಿದ ರೇಶಿಮೆಯ ಜೋಡು ನೂಲುಬಿಡುತಿರಲು ಕಂಡು ಕಂಡರಿಯನೆಂದು ಕದವ ಮುಚ್ಚಿ ಕುತರಯ್ಯ ಇ ದೃಶ್ಯವ ಕಂಡ ರೇಶಿಮೆ ಮರಿಯ ಧುಮ್ಹನವ ನಾ ಅದೆವ ಕರದಿಂದ ಆಲಿಸಲಿ ಹರಿಯೆ! ಬೀಡು ಇರದ ಆ ಗುಡಲ್ಲಿ ಅರಿವಿಲ್ಲದ ಮುಗ್ಧ ಹುಲು ಮರಿಯ ಕಂಡು ಮರುಗಿತೋ ಅದೇಸ್ತೋ ಮನವ್ ನಾ ಕಾಣದಾಗಿ ಹೋದೆನೋ ಹರಿಯೆ ಈ ಯೆನ್ನ ನೇತ್ರವ ನಿನ್ನ ಚರಣದಲಿ ನಮಿಸಿ ಕೇಳಿಕೊಂಬೆ ಒಂದು ಮಾತ ಕಾಯೋ ಆ ಮರಿಯನಿನ್ನ ರೆಪ್ಪೆಯಂತೆ.
krishne?
ಅವನಿ ಎಂಬುದರ ಅರ್ಥ ಧರಣಿ,
ಧ್ರವ್ಯನ್ಯದಿ ವರ್ಗದಲ್ಲಿ ಮೂಡಿಬಂದ ಸರಣಿ;
ಭೂಮಿಯ 53 ಪದಗಳಲ್ಲೊಂದು ಅವನಿ,
ನಾವು ಜೀವಿಸುತ್ತಿರುವ ಈ ಭೂಮಿ;
ಅವ್ ಎನ್ನಲು ಇದುವೇ ಸಂರಕ್ಷಿಣಿ,
ತಾಯಿಯ ರೂಪ ಈ ನಮ್ಮೆಲ್ಲರ ತರುಣಿ;
ಕೋಲಾರದ ಒಂದು ಬೆಟ್ಟದ ಹೆಸರು ಅವನಿ,
ಅವನಿಸುತೆ ಸೀತೆಗೆ ಇದುವೇ ಜನನಿ;
ಎಲ್ಲವನ್ನು ಸಹಿಸಿಕೊಂಡು ಕ್ಷಮಿಸುವ ಕರುಣಿ,
ವಿವಿಧ ಅರ್ಥ ತುಂಬಿರುವ ಪದ ಈ ಅವನಿ!
ನೀನೆಂದರೆ ಆಸೆಯಲ್ಲ..ಆಕರ್ಷಣೆಯೂ ಅಲ್ಲ. ನೀನೆಂದರೆ ಮೋಹವಲ್ಲ..ವ್ಯಾಮೋಹವೂ ಇಲ್ಲ ನೀನೆಂದರೆ ಮನದಲ್ಲಿ ಮೂಡಿದ ಮಧುರ ಭಾವನೆ ಆತ್ಮದಲ್ಲಿ ಒಂದಾದ ದಿವ್ಯ ಕಲ್ಪನೆ
ಪಡೆಯುವ ಹಂಬಲವಿಲ್ಲ..ಕಳೆದು ಕೊಳ್ಳುವ ಭಯವಿಲ್ಲ..
ಆದರೂ ಹೊಳಪ್ಪಿಲ್ಲದ ಬೆಳಕಾಯಿತು ..
ನಿರಾಸೆಗು ಚಿಗುರಾಯಿತು ...