Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಡಿ ಇಡಲು ನೀ ಚುಂಬಿಸುವುದು ಭೂತಾಯ ಮಡಿಲು
ನಗುತಾ ನನ್ನೆಡೆ ಬರುತಿರೆ ನಾಚುವುದು ಬೆಳ್ಮುಗಿಲು
ಕೋಪದಲ್ಲಿರೇ ನೀ ಕಾರ್ಮೋಡ ಸೀಳುವ ಬೆಂಕಿ ಸಿಡಿಲು
ಮೌನ ಮಾತಾಗಲು ಸದಾ ಭೋರ್ಗರೆವ ನೀಲಿ ಕಡಲು

✍? ಯಕ್ಷ

- pavan

17 Jan 2025, 08:01 pm

ದಿನಚರಿ

ಹೊತ್ತಾಗಲು ಕಾಫಿ ಹೀರಿ
ಮತ್ತೆ ಕೆಲಸ ಮಾಡಲು ಮತ್ತೇರಿ
ಕೆಳಗಿಳಿಸಲು ಜವಾಬ್ದಾರಿ
ದುಡಿವುದಾಗಿದೆ ದಿನಚರಿ
✍? ಯಕ್ಷ

- pavan

17 Jan 2025, 10:09 am

ಜೀವನ

ಎತ್ತ ಸಾಗುತ್ತಿದೆ ಈ ಯಂತ್ರದ ಜೀವನ
ಕೋನೆಯಾಗುತ್ತಿದೆ ಸುಖಕರ ಪಯನ

ಚಿಕ್ಕಮಕ್ಕಳಲ್ಲಿ ಹೆಚ್ಚುತ್ತಿದೆ ಮೊಬೈಲ್ ಗೀಳು
ಕೇಳುವರಿಲ್ಲ ತಂದೆ ತಾಯಿಗಳ ಗೋಳು

ಯುವಕರು ದಾಸರಾಗಿದ್ದಾರೆ ಪಬ್ಬು
ಡಾನ್ಸ್ ಗಳಿಗೆ
ಅಟೆಂಡೆನ್ಸ ಕಡಿಮೆಯಾಗುತ್ತಿದೆ ಕಾಲೇಜುಕ್ಲಾಸಗಳಿಗೆ

ಎಲ್ಲೆಲ್ಲೂ ತಾಂಡವಾಡುತ್ತೀದೆ ಹಿಂಸೆ
ಪುಸ್ತಕದಲ್ಲಿ ಮಾತ್ರ ಉಳಿದಿದೆ ಅಹಿಂಸೆ

ಪರಿಸರದಲ್ಲಿ ಹೆಚ್ಚುತ್ತಿದೆ ಕಾಡ್ಗಿಚ್ಚು
ಮನುಷ್ಯರಲ್ಲಿ ಕಡಿಮೆಯಾಗುತ್ತಿದೆ ಬಾಂಧವ್ಯದ ಕಿಚ್ಚು

ಅಂತ್ಯದ ಹತ್ತಿರವಾಗುತ್ತಿದೆ ಯುಗದ ಪಯನ
ಸಾಕಾರಗೊಳಿಸಿ ಈ ಸಂತೋಷದ ಜೀವನ

ವಿಶಾಲಾ ಮಂಜುನಾಥ

- laxmi

16 Jan 2025, 11:15 pm

ಕವನದ ಶೀರ್ಷಿಕೆ ಕರುಳ ದನಿ.


ಬತ್ತಿದ ಭಾವಕೆ ಕೊಳಲ ನಾದವಾದೆ, 

ಔಷಧಿ ಇರದ ಗಾಯಕ್ಕೆ ಮುತ್ತಿನ ಹನಿಯಾದೆ. 


ಉದರದ ಕಿಚ್ಚಿಗೆ ತುಂತುರು ಮಳೆಯಾದವನೆ, 

ಅಮ್ಮನ ಕರುಳ ದನಿ ನೀನೇ ಮಗನೆ. 


ಬಡತನದ ಸೂರಿಗೆ ಬಂದ ಚಂದ್ರನೇ ಬಹುಮಾನ, 

ದುಃಖವ ಮರೆಸುತ್ತಿತ್ತು ನಿನ್ನ ಕಿಲಕಿಲ ನಗೆಯ ನರ್ತನ. 


ಸೋರುವ ಕುಂಭದಂತೆ ನಿಲ್ಲದ ಕಷ್ಟಗಳು, 

ಕರುಳ ಬಳ್ಳಿಯನಗಲಿಸಿದವು ಆ ದಿನಗಳು. 


ಬಿಡುಗಾಸಿರದ ಸಮಯದಲ್ಲಿ ಬೆಳೆದಿರುವಿರಿ ನೀವ್, 

ನೆರೆಹೊರೆಯವರ ಪ್ರೀತಿಯ ಆಶ್ರಯದಲ್ಲಿ. 


ಪೋಷಿಸಿರುವೆ ಕಂದಮ್ಮ ಹಸಿವಿದ್ದರೂ ಕೈಚಾಚದೆ, 

ನೀವ್, ಸಾಧಿಸುವ ಛಲದಿ ಸಾಗಬೇಕು ಸ್ವಾಭಿಮಾನ ಬಿಡದೆ. 


ದಿಟ್ಟ ನೋಟವು ಪ್ರಾರ್ಥಿಸುವ ಮಗು ನೀನಾಗು, 

ಮುಪ್ಪಾದವರ ಸಲಹೋ ಸರದಾರನಾಗು. 


ನ್ಯಾಯ ಮಾರ್ಗದಿ ನಡೆದು ನಿಸ್ವಾರ್ಥಿಯಾಗು, 

ದುರ್ಗುಣಗಳ ದೂರವಿಟ್ಟು ನೃಪತುಂಗನಾಗು. 


ಧನ ಕನಕಾದಿಗಳ ಅಧಿಪತಿಯಾದರು ನೀ ಮಾನವನಾಗಿರು, 

ಸದಾ ಸಹಕರಿಸಿ ಹಾರೈಸಿದವರ ಮರೆಯದಿರು. 


ಸೌರಭದ ಸುಮದಂತೆ ಸೂಕ್ಷ್ಮವಾಗಿರು ಕಂದ, 

ನಿನ್ನ ಬಾಳ ಪಯಣದ ಸುಪ್ರಭಾತವೆ ಕೊಡುವುದು ನನಗೆ ಆನಂದ.

- nagamani Kanaka

14 Jan 2025, 09:16 pm

ಕವನದ ಶೀರ್ಷಿಕೆ ಉತ್ತರಾಯನದ ಪುಣ್ಯಕಾಲ.

ಉತ್ತರಾಯನದ ಮಕರ ರಾಶಿಗೆ ಪ್ರವೇಶಿಸುವ ಭಾಸ್ಕರ,
ಕೊರೆಯುವ ಚಳಿಯ ಮಾಯ ಮಾಡಿ ಪೊರೆಯುವನು ನೇಸರ.

ಸತ್ಕಾರ್ಯಗಳಿಗೆ ಶುಭ ಮುಹೂರ್ತ ಕಾಲವಿದು,
ದವಸ ಧಾನ್ಯಗಳ ರೈತ ಮನೆಗೆ ಸ್ವಾಗತಿಸಿ ಸಂಭ್ರಮಿಸುವ ಹಬ್ಬವಿದು.

ವಿವಿಧ ಹೆಸರುಗಳಿಂದ ಆಚರಿಸುವರು ಸಂಕ್ರಮಣವನ್ನ,
ದನಕರುಗಳ ಸಿಂಗರಿಸಿ ಸೌಹಾರ್ದದಿ ಆಯೋಜಿಸುವರು ಸ್ಪರ್ಧೆಗಳನ್ನ.

ನಾರಿಯರು ಮನೆ ಮನೆಗೆ ಹಂಚುವರು ಎಳ್ಳು ಬೆಲ್ಲ,
ವಿನಿಮಯದ ಹಾರೈಕೆಗಳಿಂದ ತಿಳಿಗೊಳವಾಗುವುದು ಮನವೆಲ್ಲ.

ಕಬ್ಬಿನ ರಸದಂತಿದ್ದರೆ ಎಲ್ಲರ ಮನಸ್ಸು,
ಶರದಂತೆ ಬರುವ ಸಿಹಿ ನುಡಿಗಳದ್ದೇ ಸೊಗಸು.

ಗುಸುಗುಟ್ಟಲಿ ಪುರಾಣ ಕಥೆಗಳ ಸಾರ ಹೃದಯದಲ್ಲಿ,
ಉತ್ತರಾಯನದ ಪುಣ್ಯವೆಲ್ಲ ಸರ್ವರಿಗೂ ಲಭಿಸಲಿ.

ರಚನೆ ಶ್ರೀಮತಿ ನಾಗಮಣಿ h b
GHPS Dharmapur.

- nagamani Kanaka

14 Jan 2025, 08:43 am

ನೀನು ನನ್ನ ಜೊತೆ ಜೀವಿಸುವೆಯಾ...???

ಕುವೆಂಪು ಯಂತೆ ಪ್ರೀತಿಸುವೆ
ನೀ ಪ್ರೀತಿಸು...
ಬೇಂದ್ರೆ ಯಂತೇ ಬಣ್ಣಿಸುವೆ
ಒಲವ ಬಾವಿಸು...
ಮಾಸ್ತಿಯಂತೆ ಆಸ್ತಿ ಇಟ್ಟಿರುವೆ
ನೀ ಮನ್ನಿಸು...
ಕನ್ನಡಕ್ಕಿನ್ನೊಂದು ಜ್ಞಾನಪಿಠ ತರುವೆ
ಜೊತೆ ಜೀವಿಸು...!!
ಎಮ್.ಎಸ್.ಭೋವಿ...✍️
.
.
.
.
.
.
.
.
.
.

- mani_s_bhovi

14 Jan 2025, 12:31 am

ಹುಡುಗಿ...

ಸೀರೆ ಉಟ್ಟು ಬರಬೇಡ
ಹುಡುಗಿ ನೀ ಹೋರಗೆ...
ಕಂಡು ನನ್ನ ಹೃದಯ ಜಾರಿಬಿದ್ದಾತು
ನಿನ್ನ ಸೆರಗ ಒಳಗೆ...
ನಮ್ಮವ್ವ ಅಂತಾಳೆ,
ಜಾರದಿರು ಯಾವ ಹೂವಿಗೆ...
ಗೊತ್ತಿಲ್ಲ ಕೊನೆಗೆ,
ಆ ಹೂವು ಯಾರ ಮುಡಿಗೆ...
ಎಮ್.ಎಸ್.ಭೋವಿ...✍️
.
.
.
.
.
.


- mani_s_bhovi

14 Jan 2025, 12:00 am

ಕವನದ ಶೀರ್ಷಿಕೆ ಪ್ರೀತಿಯ ಸೋಲು.



ಕಣ್ಮರೆಯಲ್ಲಿ ಕೈ ಹಿಡಿದವರು,
ಬೆನ್ನೆಲುಬಾಗಿ ನಿಂತು ಸಲಹಿದರೂ.

ಸದ್ಗುಣಗಳ ಐಸಿರಿಗೆ ಸೋತು,
ಮಾತಿನ ಮಾಧುರ್ಯಕ್ಕೆ ಮನ ಒಂದಾಯಿತು.

ವಾತ್ಸಲ್ಯದ ಸೆಳೆತ,
ಹೆಚ್ಚಿಸುವುದು ಹೃದಯ ಬಡಿತ.

ಕಣ್ಣಂಚ ನೀರು,
ನೆನಪುಗಳೊಳಗೆ ಸುರಿಯುವ ಪನ್ನೀರು.

ಕರುಳೊಳಗೆ ಕರಗಿರುವ ಕವಿಯೂ,
ಒಡಲ ತಾಪದಿ ಹೊರಹೊಮ್ಮುವ ಹೊಗೆಯು.

ಆರ್ಭಟಿಸೋ ಅಂತರಾಳದ ಸ್ನೇಹ,
ಕೇಳದೆ ಕೊಡುವುದು ವಿರಹ.

ಸಮತೆ ಇರದೆ ಕೂಡಿದ ನಂಟು,
ಬಿಡಿಸುವುದು ಬಾಂಧವ್ಯದ ಗಂಟು.

ಹಸುಳೆಯಂತೆ ಚಿಗುರೋಡೆದ ಪ್ರೀತಿ,
ಮರವಾಗಿ ಬಿರಿಯುವುದೆಂಬ ಭೀತಿ.

ವಾಸ್ತವಕ್ಕೆ ಸಿಲುಕದ ವಿಷಯ,
ಸ್ತುತಿಸುವ ನೋವಿಗೆ ಹೇಳದು ವಿದಾಯ.

ನಮ್ಮವರೊಂದಿಗೆ ಇರಲಾಗದ ಕ್ಷಣ,
ಜಿಗಣೆಯಂತೆ ನರಳಿಸುವುದು ಪ್ರತಿದಿನ.

ಅವರಿಗೆ ಇರದ ಕನವರಿಕೆ,
ನಮ್ಮೆದೆಯ ಚಿವುಟುವುದು ಏಕೆ?

ಸಂತಸದ ಹೊನಲು ಮರೆಯಾದಾಗ,
ಪುಟಿಯದು ಪ್ರೀತಿಯ ಅನುರಾಗ.

ಕೋಟಿ ಜನರ ಮಧ್ಯೆಯೂ ಸಿಕ್ಕರೆ ಒಲವು,
ಆಗ ಕಾಣಬಹುದು ಮಂದಹಾಸದ ಚೆಲುವು.

- nagamani Kanaka

13 Jan 2025, 07:44 am

ನನ್ನವಳು ಕೋಟಿ ತಾರೆಗಳ ಏಕಸ್ವರೂಪ....

ಬಹುಶಃ ನಿನ್ನನ್ನು ಸಂಕ್ರಾಂತಿಗೆ ಹೋಲಿಸಿದರೆ
ಯುಗಾದಿಗೆ ಬರಬಹುದು ಕೋಪ,
ಮಿನುಗುತಾರೆಗೆ ಹೋಲಿಸಿದರೆ
ಪೂರ್ಣಚಂದ್ರ ಮುನಿಸಿಕೊಳ್ಳಬಹುದು
ಪಾಪ...
ಅದೇನೇ ಇರ್ಲೀ ನನ್ನವಳೆದರು
ನೀ ಪೈಪೋಟಿಗಿಳಿಯದಿರು
ನಿನಗಾಗಬಹುದು ನಿನ್ನ ರೂಪದ
ಮೇಲೆ ಮನಸ್ತಾಪ, ಕಾರಣ
ನನ್ನವಳು ಕೋಟಿ ತಾರೆಗಳ
ಏಕಸ್ವರೂಪ....
ಎಮ್.ಎಸ್.ಭೋವಿ...✍️
.
.
.

- mani_s_bhovi

12 Jan 2025, 10:15 pm

ಕವನದ ಶೀರ್ಷಿಕೆ ವಿವೇಕದ ವೀಣೆ.



ಲೋಕದ ತುಡಿತಗಳನರಿತ ಲೋಕೇಶ್ವರ,
ಭ್ರಾತೃತ್ವ ಬೆಸೆದ ನರೇಂದ್ರರು ಅಜರಾಮರ.

ದುರ್ಬಲರ ಸೇವೆಯ ಸಾರಥಿಯಾಗಿ,
ಭೀಕರ ಬರಗಾಲದಿ ಹಸಿವು ನೀಗಿಸಿದ ತ್ಯಾಗಿ.

ಪರಮಹಂಸರ ಶಿಷ್ಯರಾಗಿ,
ಸನ್ಮಾರ್ಗದಿ ನಡೆದ ಶಿವಯೋಗಿ.

ಗೂಡಾಚೆ ವಿಹರಿಸೋ ನಿಮ್ಮ ಆತ್ಮದ ಏಕಾಗ್ರತೆ,
ಗುಡುಗ ಸೀಳಿ ಸಾಗುವವರಿಗೆ ಹಣತೆ.

ಗಂಗಾಸುತನ ಕರುನಾಡ ಪ್ರವಾಸ,
ಒಡೆಯರ ಗರುಡನಾಗಿ ನುಡಿಯಿತು,
ಶಾಲೆಗಳ ತೆರೆಸಿ ಕೊಡಿಸಿ ವಿದ್ಯಾಭ್ಯಾಸ.

ಗುರುತಿರದ ಭಾರತೀಯ ಸಂತನ ಭಾಷಣ,
ಗಳಿಸಿತು ವಿಶ್ವಮನ್ನಣೆಯನ್ನ.

ಮುನ್ನಡೆವ ಹಾದಿ ಮುಳ್ಳಿನ ಹಾಸಿಗೆ ಇದ್ದರೂ,
ಬಗ್ಗದೊಳ್ ಕುಗ್ಗದೆ ನಡೆದರೆ ನಮಗೆ ಸಮನಾರು!.

ಸರ್ವ ಮಸ್ತಕಗಳಿಂದು ಮಾಹಿತಿಯ ಕಣಜ,
ವಿವೇಕದ ವೀಣೆ ನುಡಿಯುತ್ತಿರಲಿ ಮದವೇರದೆ ಸಹಜ.

ಧ್ಯಾನ ಸುದೆಯಾಗಿ ಹೃದಯದಲ್ಲಿ ನೆಲೆಸಿ,
ಉದ್ದರಿಸಿದರು ಮನಗಳ ಗುರೂ ಭಕ್ತಿಯನುಳಿಸಿ.

- nagamani Kanaka

12 Jan 2025, 04:59 pm