ಕಂಡ ಕನಸ್ಸು ನೆನಪಾಗುತ್ತಿದೆ
ನಾನು ಮಹಾರಾಣಿಯೆಂದು
ಇದು ಕೇವಲ ಕಾಲ್ಪನಿಕ.....
ಇಲ್ಲಿ ವಾಸ್ತವವಾಗಿ ನೋಡಿದರೆ
ನಾನು ಒಂದು ಮನೆಯಿಂದ -
ಮಂತ್ತೊಂದು ಮನೆ ಕಾಯೋ ಅಳೆಂದು
ಇದು ಒಂದು ಹೆಣ್ಣಿನ ಜೀವನದ ನಿಜವಾದ ಅರ್ಥ
. ನಿಜ ಅಲ್ವಾ...
ಬೇರೆಯವರ ಕೊಂಕು ಮಾತು
ಮನಸ್ಸಿಗೆ ನೋವು
ಮನೆಯವರು ಕಾಣುವ ಕೀಳು ಭಾವನೆ
ಬೇರೆಯವರ ಯಾರ ಮುಂದೆಯಾದರೂ ಹೇಳಿಕೊಳ್ಳುವ ಬದಲು
ಜೀವನದಲ್ಲಿ ಕಾಡುವ ಪ್ರಶ್ನೆ ಮೂರು
ಉತ್ತರಿಸುವವರ ಮಾತು ನೂರು
ಅವರವರ ಮಾತು ಅವರವರಿಗೆ ಸೀಮಿತ
ಬೇರೆಯವರ ಮಾತು ಕೇಳಿ ತಮಗೆ ತಾವು ತಂದುಕೊಳ್ಳುತ್ತಾರೆ ಆಪತ್ತು
ಇದು ನುಂಗಲಾಗದ ತುತ್ತು
ನಮ್ಮಿಂದ ಬದಲಾಗಿಸಲಾಗದ್ದು ಈ ಜಗತ್ತು
"ಶಾಲೆಗೆ ಸೀರಿಸಲು ಬಂದ ನನ್ನಪ್ಪ...
ನನ್ನ ಮಗ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದ ನನ್ನಪ್ಪ..
ವರ್ಷದಲ್ಲಿ ಒಂದು ಬಾರಿಯು ನನ್ನ ಬಗ್ಗೆ ವಿಚಾರಿಸಲು
ಶಾಲೆಗೆ ಬರಲಿಲ್ಲ ನನ್ನಪ್ಪ...
ನನ್ನ ಮಗ ಓದುವುದರಲ್ಲಿ ಹಿಂಜರಿಯುವುದಿಲ್ಲ ಎಂದು
ನಂಬಿಕೆ ಇಟ್ಟ ನನ್ನಪ್ಪ...
ಓದಿ ನನ್ನ ನೋಡಿಕೋ ಅನ್ನಲಿಲ್ಲ ನನ್ನಪ್ಪ...
ಓದಿ ನಿನ್ನ ಜೀವನ ನೀ ಕಟ್ಟಿಕೊ ಎಂದ ನನ್ನಪ್ಪ...
ಇತರ ಸ್ನೇಹಿತರ ಜೊತೆ ಸುತ್ತಾಡಿದರು ಕೇಳಲಿಲ್ಲ ನನ್ನಪ್ಪ..
ನನ್ನಂತೆ ಕುಡುಕನಾಗಬೇಡ ಎಂದು ಬುದ್ದಿಹೇಳಿದ ನನ್ನಪ್ಪ..
ಕಷ್ಟಪಟ್ಟು ಜಮಿನ್ದಾರ ಮನೆಯಲಿ ಕೆಲಸ ಮಾಡುವಾಗ ನನ್ನಪ್ಪ..
ಜಮಿನ್ದಾರು ಮಗನ ಬಗ್ಗೆ ಕೇಳಿದಾಗ ನನ್ನಪ್ಪ..
ತನ್ನೆಲ್ಲ ಕಷ್ಟಗಳನ್ನು ಒಂದೇ ಕ್ಷಣ ಮರೆತು ತನ್ನ ಮಗನ ಬಗ್ಗೆ
ಹೆಮ್ಮೆಯಿಂದ ಹೇಳಿಕೊಂಡ ನನ್ನಪ್ಪ"...
ವಸಂತ ಬಂದಾಗ ಚಿಗುರುವೆ ನೀನು
ಬೇಸಿಗೆ ಬಂದಾಗ ಉದರುವೆ ನೀನು
ಮರಳಿ ವಸಂತ ಬರೋವರೆಗೂ ಕಾಯುವೆ ನೀನು ಮತ್ತೆ ಮತ್ತೆ ಚಿಗುರುವಿ ನೀನು
ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವೆ ನೀನು ನೀನು ಉದರುವಾಗ ಏನೋ ಕಳೆದುಕೊಂಡಿರುವ ಬಾವ ನಮಗ
ಮತ್ತೆ ಮತ್ತೆ ಚಿಗುರುತ್ತಿರು ನೀನು ಪ್ರಕೃತಿಯ ಸೌಂದರ್ಯ ಹೆಚ್ಚಿಸುತ್ತಿರು ನೀನು.