Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

- ?.?.?????.

04 Apr 2025, 07:57 am

"ಹುಚ್ಚು ಮನಸಿನ ಹತ್ತು ಮುಖಗಳು"

"ಇಲ್ಲಿ ಕೆಲವರ ಮೇಲೆ ಪ್ರೀತಿ
ಕೆಲವರ ಮೇಲೆ ಸಿಟ್ಟು,
ಕೆಲವರ ಮೇಲೆ ಕಾಮ,ಮೋಹ,
ಇತ್ಯಾದಿಗಳೆಲ್ಲ ನಾ ಕಂಡಾಗ
ನನಗೆ ತಿಳಿದಿದ್ದು (ಅನಿಸಿದ್ದು)
ಈ ಪ್ರಪಂಚದಲ್ಲಿ ಇಲ್ಲಾದಕ್ಕಿಂತ
ಅತಿವೇಗವಾಗಿ ಬದಲಾಗುವುದು
ಮನುಷ್ಯನ ಮನಸ್ಸು, ಆಲೋಚನೆಗಳು
ಮಾತ್ರ.. ಇದು ಹುಚ್ಚು ಮನಸಿನ ಹತ್ತು
ಮುಖಗಳು"..!
-ಎ.ಆರ್.ರಾಹುಲ್

- ?.?.?????.

04 Apr 2025, 07:57 am

"ಇದು ರಾಮಾಯಣ ಅಲ್ಲ"

"ನಾ ಕಾಯುತ್ತಿದೆ ಅವಳಿಗಾಗಿ
ಶಬರಿಯಂತೆ
ನೀ ಸಿಗಬೇಕ್ಕಿತ್ತು ನನಗೆ
ಸೀತೆಯಂತೆ
ಆದರೆ ನಿನ್ನ ಗಂಡ ನಿನ್ನ ಹೊತ್ವೈದ
ರಾವಣನಂತೆ...
ಯುದ್ಧ ಮಾಡಿ ನಿನ್ನ ಪಡೆಯಬೇಕು
ಅಂದ್ರೆ ಇದು
ರಾಮಾಯಣ ಅಲ್ಲ
ನಿಜ ಜೀವನ"....!

-ಎ.ಆರ್.ರಾಹುಲ್..

- ?.?.?????.

04 Apr 2025, 07:56 am

"ಸಮಾನತೆಯ ಹರಿಕಾರ"

"ಹೆಣ್ಣನ್ನು ಊಹಿಸಿ
ರಾಮಾಯಣ ಬರೆದರೂ
ಹೆಣ್ಣನ್ನು ಬಣ್ಣಿಸಿ
ಮಾಹಾಭಾರತವನ್ನು ಬರೆದರೂ
ಹೆಣ್ಣನ್ನು ಊಹಿಸಿ, ವರ್ಣಿಸಿ, ಬಣ್ಣಿಸಿ.
ಹಲವಾರು ಕವಿಗಳು ಕಥೆ,
ಕಾದಂಬರಿಗಳನ್ನು ಬರೆದರೂ..
ಆದರೆ ಹೆಣ್ಣಿನ ಹಕ್ಕುಗಳ
ಬಗ್ಗೆ ಬರೆದವರು..
ಡಾ//ಬಿ,ಆರ್,ಅಂಬೇಡ್ಕರ್...ಮಾತ್ರ"..!

- ?.?.?????.

04 Apr 2025, 07:55 am

- ?.?.?????.

04 Apr 2025, 07:55 am

ಅಂಬೇಡ್ಕರ್ ರವರು

ಶ್ರೇಷ್ಠ -ಕನಿಷ್ಠದ ನೋವು ತಿಂದವರು
ಕನಿಷ್ಠದ ಅನಿಷ್ಟಕೆ "ಕಾವು" ಕೊಟ್ಟವರು
ಮಾನ-ಅಪಮಾನದ ಅಂಚಲ್ಲಿ ಬೆಂದವರು
ಅಪಮಾನದ ಕಂಚಿಗೆ "ಧೈರ್ಯ"ದ ನೀರು ಎರೆದವರು

ಹಸಿವು-ಬಡತನದ ಬ್ಯಾನಿಯ ತಿಂದವರು
ಬಡತನದ ಬ್ಯಾನಿಗೆ "ಅಕ್ಷರ"ದ ಮಾತ್ರೆ ನುಂಗಿದವರು
ಹೊಂಚು-ಸಂಚಿನ ಭಂಡತನಕೆ ಬಳಲಿದವರು
ಸಂಚಿನ ಡೋಂಗಿಗೆ "ಸಾಹಸ"ದ ತೀರ್ಥ ಕುಡಿಸಿದವರು

ಮಣ್ಣು-ಹೆಣ್ಣಿನ ಗೋಳನು ಕಣ್ಣಾರೆ ಕಂಡವರು
ಹೆಣ್ಣಿನ ಬಾಳಿಗೆ ಮಣ್ಣಿನ "ಋಣ"ವ ತೀರಿಸಿದವರು
ಪರಿಸರ-ಪ್ರಕೃತಿಯು ಕೆಲವರಿಗೇ ಯಾಕೆ? ಅಂದವರು
ಪ್ರಕೃತಿಯ ಸಂಸ್ಕೃತಿಯು "ಎಲ್ಲರಿಗೂ" ಎಂದವರು

ರೂಪಾಯಿ-ನೋಟಿನ ವಯ್ಯಾರ ನೋಡಿದವರು
ನೋಟಿನ ಸಿಂಗಾರದ ಪ್ಲೇಟಿಗೆ ಕಪಾಟು ಬಡಿಸಿದವರು
ಛಿದ್ರ -ಭದ್ರತೆಗೆ ಪೆನ್ನಿನ ಇಂಕನು ಸವಸಿದವರು
ಭದ್ರತೆಗೆ ಗೀಚಿದ ಪೆನ್ನಿಗೆ "ಮಸಿ"ಯ ಹಚ್ಚದವರು
ಸುಗ್ಗಿ..










- ಆರ್. ಎಸ್ .ಸುಗ್ಗಿ

03 Apr 2025, 08:45 pm

ಸಂಸ್ಕೃತಿ...

ಅರ್ಥಯಿಸಿಕ್ಕೊಳ್ಳವವಳು ಬೇಕು,,
ಅರ್ದಕ್ಕೆ ಬಿಟ್ಟು ಹೋಗುವವಳಲ್ಲ...!
ಸಹಿಸಿಕೊಳ್ಳವವಳು ಬೇಕು,,
ಸಮಯ ನೋಡಿ ಸಾಧಿಸುವವಳಲ್ಲ...!
ತನು ಮನ ಸರ್ವಸ್ವವನ್ನು ಕೊಡುವವಳು ಬೇಕು,
ದುರಾಸೆಯ ದರ್ಪದವಳಲ್ಲ...!
ನಂಬಿಕೆ ನೀಡುವವಳು ಬೇಕು,
ನಾಟಕ ಆಡುವವಳಲ್ಲ...!
ತಾಯಿಯಂತೆ ನೋಡಿಕೊಳ್ಳವವಳು ಬೇಕು,,
ಹೆತ್ತವರನ್ನೇ ಹೊರಗಾಕುವಂತೆ ಹೇಳುವವಳಲ್ಲ...!
ಎಮ್.ಎಸ್.ಭೋವಿ...✍️
.
.

- mani_s_bhovi

03 Apr 2025, 04:46 pm

ಬದಲಾಗಬೇಕಿದೆ ಈ ಮನ

ಬದುಕಿನಲ್ಲಿ ಬರುವರು
ಎಲ್ಲರು ಜೊತೆಗಿರುವವರು
ಕೆಲವರು ಬೆಳವಣಿಗೆ ಕಂಡಾಗ
ಉರಿದುಕೊಳ್ಳುವರು
ಅದನ್ನರಿತು ಬದಲಾಗಬೇಕಿದೆ
ನಾನೀಗ.

ದುಃಖದಲ್ಲಿದ್ದಾಗ ಸಂತೈಸುವವರಿಲ್ಲ
ಬಿದ್ದಾಗ ಮೇಲೇತ್ತುವವರಿಲ್ಲ
ಮುಖವಾಡಗಳ ಕಳಚಿ ಬದುಕುವವರಿಲ್ಲ
ಇದು ಇಂದಿನ ಜನರ ಜೀವನ
ಅದನ್ನರಿತು ಬದಲಾಗಬೇಕಿದೆ
ನಾನೀಗ.

ನನ್ನವರೆಂಬುವವರು
ಹಣದ ವ್ಯಾಮೋಹದಲ್ಲಿ
ಮುಳುಗಿಹರು ನಾವೂ ನಮ್ಮವರೆಂಬ
ಮಾನವೀಯತೆ ತಿಳಿಯದವರು
ನನ್ನ ಏಳ್ಗೆಯನ್ನ ಸಹಿಸದವರು
ಅದನ್ನರಿತು ಬದಲಾಗಬೇಕಿದೆ ನಾನೀಗ.


- ಮೇಘಾ ಬೆಳಧಡಿ

03 Apr 2025, 04:40 pm

ನಿನ್ನ ನೆನಪೇ ನನಗೆ ಗಿಫ್ಟ್

ನನ್ನ ನಿನ್ನ ಪ್ರೀತಿಯ ಹಾರ್ಟ್ ಟಿನಲಿ,
ನೆನಪೇ ಒಂದು ಗಿಫ್ಟ್ಟು ನನಗಿಲ್ಲಿ,,

ನಿನ್ನ ಸನಿಹವನ್ನು ನಾನು,
ಬಯಸಿಬಂದೆ ಇನ್ನು,
ದೂರ ಹೋದೆ ಏಕೆ ಕ್ಷಣದಲ್ಲಿ ?,
ನನ್ನ ಬಿಟ್ಟು ಹೋದೆ ಏಕೆ ಬದುಕಲ್ಲಿ ಒಂಟಿ ಮಾಡಿ ಹೋದೆ ಏಕೆ ನನಗಿಲ್ಲಿ...

ನಿನ್ನ ದಾರಿಯ ಕಾಯುತ ಕುಳಿತೆನಾ..
ಬಂದೆ ಬರುವೆ ಎನ್ನುವ ನಿಜವನ್ನ,
ಅರಿತುಕೊಂಡೆ ನಾನು, ನೀ ದೂರವಾದರೇನು
ನಿನ್ನ ಬಿಟ್ಟು ಬದುಕುವೆ ನಾನು ನೆನಪಲ್ಲೇ,
ನಿನ್ನ ನೆನಪಲ್ಲೇ ನಾನು ಬದುಕುವೆ
ನಿನ್ನ ದಾರೀಯಾ ಕಾಯುತ ಕುಳಿತಿರುವೆ... ??

- ಅವಿನಾಶ್ ಎಲ್

03 Apr 2025, 02:08 pm

ತಿದ್ದು ಬಾ ಗೆಳತಿ

ತಪ್ಪು ಹೆಜ್ಜೆಗಳನ್ನು ಸರಿಪಡಿಸು ನೀನು,
ಗೆಳೆತಿಯೇ... ನನ್ನ ತಪ್ಪು ತಿಳಿಯದಿರು....

ಗುಟ್ಟು ಇರದು ನನ್ನಲಿ, ಮನದಲಿ,
ತಪ್ಪು ಇದ್ದರು ತಿಳಿಸು ಬಾ ನನ್ನ ತಿದ್ದು ಬಾ,

ಪಿಸುಮಾತಿನ ಸವಿಜೇನು,
ತುಸು ನೀಡು ಬಾ, ಗೆಳತಿ ನೀ ಹಾಡು ಬಾ,

ಗೆಳತಿ ತಿದ್ದು ಬಾ ನನ್ನ ತಿದ್ದು ಬಾ,

- ಅವಿನಾಶ್ ಎಲ್

03 Apr 2025, 02:02 pm